
ಬೆಂಗಳೂರು(ಅ.24): ಉಪೇಂದ್ರ ಮತ್ತು ಕಿಚ್ಚ ಸುದೀಪ್ ಅಭಿನಯದ ಮುಕುಂದ-ಮುರಾರಿ ಚಿತ್ರ ದೀಪಾವಳಿ ಹಬ್ಬದಂದು ರಿಲೀಸ್`ಗೆ ಸಜ್ಜಾಗಿದೆ. ಈ ಮಧ್ಯೆ, ಚಿತ್ರವನ್ನ ಪ್ರಮೋಟ್ ಮಾಡಲು ಸುದೀಪ್ ಮತ್ತು ಉಪೇಂದ್ರ ಟ್ವಟ್ಟರ್`ನಲ್ಲಿ ಪರಸ್ಪರ ವಿಡಿಯೋ ಪ್ರಶ್ನಾವಳಿ ಆರಂಭಿಸಿದ್ಧಾರೆ.
ಸುದೀಪ್ ಈ ಚಿತ್ರದಲ್ಲಿ ನಾವಿಬ್ಬರೂ ಸೇರಿ ಒಂದು ಸಿನಿಮಾ ಮಾಡಿದ್ದೇವೆ. ಇದರಲ್ಲಿ ಒಬ್ಬರು ಬಾಟು, ಮತ್ತೊಬ್ಬರು ವಿಕೆಟ್ ಅಂತಾ ಯಾರೋ ಹೇಳಿದ್ದನ್ನ ಕೇಳಿದೆ. ಇದರಲ್ಲಿ ಬ್ಯಾಟ್ ಯಾರು..? ವಿಕೆಟ್ ಯಾರು ಅನ್ನೋದಕ್ಕೆ ನೀವೇ ಉತ್ತರ ಕೊಡಿ ಎಂದು ಉಪೇಂದ್ರ ಪ್ರಶ್ನಿಸಿದ್ದಾರೆ.
ಉಪೇಂದ್ರ ಪ್ರಶ್ನೆಗೆ ವಿಡಿಯೋ ಮೂಲಕವೇ ಉತ್ತರ ಕೊಟ್ಟಿರುವ ಸುದೀಪ್ ಕ್ರಿಕೆಟ್`ನಲ್ಲಿ ಬ್ಯಾಟ್, ವಿಕೆಟ್ ಜೊತೆ ಬಾಲು ಸಹ ತುಂಬಾ ಮುಖ್ಯವಾದದ್ದು. ಬಾಲು ಯಾರು ಅಂತಾ ನೀವು ಹೇಳಿದರೆ ನಿಮ್ಮ ಪ್ರಶ್ನೆಗೆ ಉತ್ತರಿಸುತ್ತೇನೆ ಎಂದು ಸುದೀಪ್ ಪ್ರತಿ ಪ್ರಶ್ನೆ ಹಾಕಿದ್ದಾರೆ.ಸುದೀಪ್ ಮರುಪ್ರಶ್ನೆಗೆ ಉತ್ತರಿಸಿರುವ ಉಪೇಂದ್ರ, ಅದು ಕಾರ್ಕ್ ಬಾಲಾ..? ಟೆನ್ನಿಸ್ ಬಾಲಾ..? ಲೆದರ್ ಬಾಲಾ..? ಉತ್ತರಿಸಿ ಎಂದಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.