
ಮಾಜಿ ವಿಶ್ವ ಸುಂದರಿ ಸುಶ್ಮಿತಾ ಸೇನ್ ಮಿಸ್ ಯೂನಿವರ್ಸ್ ಕಿರೀಟ ಮುಡಿಗೇರಿಸಿಕೊಂಡು ಇಂದಿಗೆ 25 ವರ್ಷ ಕಂಪ್ಲೀಟ್ ಆಗಿದೆ.
ಈ ಖುಷಿಯನ್ನು ಸುಶ್ಮಿತಾ ಇಬ್ಬರು ಮಕ್ಕಳಾದ ರೀನೇ ಮತ್ತು ಅಲಿಸಾ ಹಾಗೂ ಬಾಯ್ ಫ್ರೆಂಡ್ ರೋಹ್ಮನ್ ಶೌಲ್ ಜೊತೆ ಸೆಲಬ್ರೇಟ್ ಮಾಡಿದ್ದಾರೆ.
ಕೇಕ್ ಕಟ್ ಮಾಡಿ ಸೆಲಬ್ರೇಶನ್ ಮಾಡಿರುವ ಫೋಟೋಗಳನ್ನು ಶೇರ್ ಮಾಡಿಕೊಂಡು, ‘ಎಂಥಾ ಜರ್ನಿ! ‘ನನಗೆ ಹೆಮ್ಮೆ ಎನಿಸುವ ಭಾರತೀಯ ಎಂಬ ಆಸ್ಮಿತೆಯನ್ನು ಕೊಟ್ಟ ನನ್ನ ಭಾರತಕ್ಕೆ ತುಂಬು ಹೃದಯದ ಧನ್ಯವಾದಗಳು. ಈ 25 ವರ್ಷಗಳಲ್ಲಿ ನೀವು ಕೊಟ್ಟ ಪ್ರೀತಿ, ಕಾಳಜಿ, ಗೌರವ ನನ್ನ ಜೀವನದ ಅತ್ಯಮೂಲ್ಯ ಗಳಿಕೆ. ಇದೇ ಸಂದರ್ಭದಲ್ಲಿ ನನ್ನ ಎರಡನೇ ಮನೆ ಫಿಲಿಫೈನ್ಸ್ ಗೂ ಥ್ಯಾಂಕ್ಸ್ ಹೇಳಲು ಇಷ್ಟಪಡುತ್ತಾರೆ. ನನಗೆ ಮಿಸ್ ಯೂನಿವರ್ಸ್ ಪಟ್ಟವನ್ನು ಕೊಟ್ಟು ಪ್ರೀತಿ, ಗೌರವ ತೋರಿಸಿದ್ದಾರೆ ಅಲ್ಲಿಯ ಜನ. ಅಂದು ಅಲ್ಲಿ ಹುಟ್ಟಿದ ಮಕ್ಕಳಿಗೆ ’ಸುಶ್ಮಿತಾ’ ಎಂದೇ ಹೆಸರಿಟ್ಟಿದ್ದಾರೆ. ಅವರ ಪ್ರೀತಿಗೆ ನಾನು ಋಣಿ ‘ಎಂದಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.