ಹೊಸ ಗೆಟಪ್'ನಲ್ಲಿ ಸನ್ನಿ ಲಿಯೋನ್; ತನ್ನ ಹಳೆ ಇಮೇಜ್ ಬದಲಿಸಿಕೊಳ್ಳಲು ಮುಂದಾದ ಮಾಜಿ ನೀಲಿ ತಾರೆ

Published : Dec 05, 2017, 12:05 PM ISTUpdated : Apr 11, 2018, 12:43 PM IST
ಹೊಸ ಗೆಟಪ್'ನಲ್ಲಿ ಸನ್ನಿ ಲಿಯೋನ್; ತನ್ನ ಹಳೆ ಇಮೇಜ್ ಬದಲಿಸಿಕೊಳ್ಳಲು ಮುಂದಾದ ಮಾಜಿ ನೀಲಿ ತಾರೆ

ಸಾರಾಂಶ

ಇನ್ನೂ ಹೆಸರಿಡದ ಈ ಚಿತ್ರ ತೆಲುಗು, ಮಲಯಾಳಂ ಮತ್ತು ಹಿಂದಿ ಭಾಷೆಯಲ್ಲೂ ನಿರ್ಮಾಣವಾಗುತ್ತಿದೆ. ವಿಸಿ ವಾದಿವುದಯನ್‌ ಈ ಸಿನಿಮಾವನ್ನು ನಿರ್ದೇಶಿಸುತ್ತಿದ್ದಾರೆ. ಐತಿಹಾಸಿಕ ಯುದ್ಧವೊಂದರ ಕಥೆಯುಳ್ಳ ಈ ಸಿನಿಮಾದಲ್ಲಿ ಸನ್ನಿ ಲಿಯೋನ್‌'ರನ್ನು ಪವರ್‌'ಫುಲ್‌ ಕ್ವೀನ್‌ ಪಾತ್ರದಲ್ಲಿ ತೋರಿಸಲಾಗುವುದು. ನಾಯಕಿ ಕೇಂದ್ರಿತ ಈ ಸಿನಿಮಾದಲ್ಲಿ ತೆಲುಗು ನಟ ನವದೀಪ್‌ ವಿಲನ್‌ ಪಾತ್ರ ಮಾಡಲಿದ್ದಾರೆ ಎಂದು ವಾದಿವುದಯನ್‌ ಹೇಳಿದ್ದಾರೆ.

ನವದೆಹಲಿ(ಡಿ.05): ಈವರೆಗೆ ಮಾದಕ ರೋಲ್‌'ಗಳಲ್ಲಿ ಮಾತ್ರ ಕಾಣಿಸಿಕೊಳ್ಳುತ್ತಿದ್ದ ನಟಿ ಸನ್ನಿ ಲಿಯೋನ್‌ ಇದೀಗ ಹೊಸ ಐತಿಹಾಸಿಕ ತಮಿಳು ಚಿತ್ರವೊಂದರಲ್ಲಿ ವೀರ ರಾಣಿಯಾಗಿ ಮಿಂಚಲಿದ್ದಾರೆ. ಇದರಲ್ಲಿ ಅವರು ಸಾಹಸ ದೃಶ್ಯಗಳಲ್ಲಿ ಕಾಣಿಸಿಕೊಳ್ಳಲಿದ್ದು, ಇದಕ್ಕಾಗಿ ಕತ್ತಿ ವರಸೆ ಮತ್ತು ಕುದುರೆ ಸವಾರಿ ತರಬೇತಿ ಪಡೆಯುತ್ತಿದ್ದಾರೆ.

ಇನ್ನೂ ಹೆಸರಿಡದ ಈ ಚಿತ್ರ ತೆಲುಗು, ಮಲಯಾಳಂ ಮತ್ತು ಹಿಂದಿ ಭಾಷೆಯಲ್ಲೂ ನಿರ್ಮಾಣವಾಗುತ್ತಿದೆ. ವಿಸಿ ವಾದಿವುದಯನ್‌ ಈ ಸಿನಿಮಾವನ್ನು ನಿರ್ದೇಶಿಸುತ್ತಿದ್ದಾರೆ. ಐತಿಹಾಸಿಕ ಯುದ್ಧವೊಂದರ ಕಥೆಯುಳ್ಳ ಈ ಸಿನಿಮಾದಲ್ಲಿ ಸನ್ನಿ ಲಿಯೋನ್‌'ರನ್ನು ಪವರ್‌'ಫುಲ್‌ ಕ್ವೀನ್‌ ಪಾತ್ರದಲ್ಲಿ ತೋರಿಸಲಾಗುವುದು. ನಾಯಕಿ ಕೇಂದ್ರಿತ ಈ ಸಿನಿಮಾದಲ್ಲಿ ತೆಲುಗು ನಟ ನವದೀಪ್‌ ವಿಲನ್‌ ಪಾತ್ರ ಮಾಡಲಿದ್ದಾರೆ ಎಂದು ವಾದಿವುದಯನ್‌ ಹೇಳಿದ್ದಾರೆ.

ವೀರಾಗ್ರಣಿಯ ಪಾತ್ರಕ್ಕೆ ಸನ್ನಿಯನ್ನು ಯಾಕೆ ಆಯ್ಕೆ ಮಾಡಲಾಯಿತು ಎಂಬ ಪ್ರಶ್ನೆಗೆ ಉತ್ತರಿಸಿರುವ ಅವರು, 'ಈಗ ತಮಿಳು ಸಿನಿಮಾಗಳೂ ಜಗತ್ತಿನಾದ್ಯಂತ ಅಸಂಖ್ಯಾತ ಪ್ರೇಕ್ಷಕರನ್ನು ಹೊಂದಿವೆ. ಆದ್ದರಿಂದ ಸಿನಿಮಾ ಇಂಡಸ್ಟ್ರಿ ಮಾತ್ರವಲ್ಲದೆ, ಜಗತ್ತಿನೆಲ್ಲೆಡೆ ಜನಪ್ರಿಯವಾಗಿರುವ ನಟಿಯೊಂದರನ್ನು ನಾವು ಹುಡುಕುತ್ತಿದ್ದೆವು. ಆಗ ಸನ್ನಿ ಈ ಪಾತ್ರಕ್ಕೆ ಸೂಕ್ತ ಎಂದು ಅನಿಸಿತು. ಅವರು ಕೂಡಾ ತಾವು ಇನ್ನು ಗ್ಲಾಮರ್‌ ಪಾತ್ರ ಮತ್ತು ಐಟಂ ಸಾಂಗ್‌'ಗಳಲ್ಲಿ ನಟಿಸುವುದಿಲ್ಲ ಎಂದು ಹೇಳಿದ್ದಾರೆ. ಆದ್ದರಿಂದ ನಾವು ಆಕೆಯನ್ನು ಆಯ್ಕೆ ಮಾಡಿದೆವು ಎಂದು ವಿವರಿಸಿದ್ದಾರೆ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

ಬಿಗ್ ಬಾಸ್ ಮನೆಯಿಂದ ಹೊರ ಬಂದ ಜಾಹ್ನವಿ ಏನು ಮಾಡ್ತಿದ್ದಾರೆ?
ಬೆಂಗಳೂರಿನ ಹೆಸರಿಗೆ ಅಮೆರಿಕಾದಲ್ಲಿ 'ಕೀರ್ತಿ' ತಂದ ಅನೂಯಾ ಸ್ವಾಮಿ.. ಯಾರು ಈ 'ಪಂಕಜ'..?!