ರಾಜಕಾರಣದಲ್ಲೊಬ್ಬ ಕ್ರೇಜಿ ರಾಜಕಾರಣಿ; ‘ನಿಷ್ಕರ್ಷ’ ರೀ ರಿಲೀಸ್ ಗೆ ಬಿಗ್ ಪ್ಲ್ಯಾನ್!

Published : Aug 25, 2019, 02:12 PM ISTUpdated : Aug 26, 2019, 04:57 PM IST
ರಾಜಕಾರಣದಲ್ಲೊಬ್ಬ ಕ್ರೇಜಿ ರಾಜಕಾರಣಿ;  ‘ನಿಷ್ಕರ್ಷ’ ರೀ ರಿಲೀಸ್ ಗೆ ಬಿಗ್ ಪ್ಲ್ಯಾನ್!

ಸಾರಾಂಶ

ವಿಷ್ಣು ಅಭಿಮಾನಿಗಳಿಗೆ ಗುಡ್ ನ್ಯೂಸ್ | ಸೂಪರ್ ಹಿಟ್ ಚಿತ್ರ ’ನಿಷ್ಕರ್ಷ’ ಮತ್ತೆ ರೀ ರಿಲೀಸ್ | ವಿಷ್ಣು ದಾದಾ ಹುಟ್ಟುಹಬ್ಬದ ಪ್ರಯುಕ್ತ ತೆರೆಗೆ ಬರಲಿದೆ ನಿಷ್ಕರ್ಷ | ಬಿ ಸಿ ಪಾಟೀಲ್ ರೀ ರೀಲೀಸ್ ಗೆ ತಯಾರಾಗಿದ್ದಾರೆ 

ಬೆಂಗಳೂರು (ಆ. 25): ಒಂದು ಕಡೆ ರಾಜ್ಯ ರಾಜಕಾರಣದಲ್ಲಿ ಗಣನೀಯ ಬೆಳವಣಿಗೆ ನಡೆಯುತ್ತಿದ್ದರೆ ಇನ್ನೊಂದು ಕಡೆ ಈ ರಾಜಕಾರಣಿಯೊಬ್ಬರು ಡಿಫರೆಂಟ್ ಆಗಿ ಸಿನಿಮಾ ರಿಲೀಸ್ ಮಾಡಲು ಪ್ಲ್ಯಾನ್ ಮಾಡಿದ್ದಾರೆ.

ಸಿನಿಮಾ ರಂಗದಲ್ಲೇ ಸಂಚಲನ ಸೃಷ್ಟಿಸಲು ಬಿ.ಸಿ.ಪಾಟಿಲ್ ಸಜ್ಜಾಗಿದ್ದಾರೆ. ಕನ್ನಡಚಿತ್ರರಂಗದ ಮೇರು ನಟ, ವಿಷ್ಣುದಾದಾರ ಸೂಪರ್ ಹಿಟ್ ಥ್ರಿಲ್ಲರ್ ಸಿನಿಮಾ ನಿಷ್ಕರ್ಷ ವನ್ನು ರೀ- ರಿಲೀಸ್ ಮಾಡಲು ಹೊರಟಿದ್ದಾರೆ ಬಿ ಸಿ ಪಾಟೀಲ್.  1993 ರಲ್ಲಿ ತೆರೆಕಂಡ ಸೂಪರ್ ಹಿಟ್  ಸ್ಯಾಂಡಲ್ ವುಡ್ ಚಿತ್ರ ‘ನಿಷ್ಕರ್ಷ’ವನ್ನು ವಿಷ್ಣುವರ್ಧನ್ ಹುಟ್ಟುಹಬ್ಬದ ಪ್ರಯುಕ್ತ ಸೆಪ್ಟೆಂಬರ್ 20 ರಂದು ರಿಲೀಸ್ ಮಾಡಲು ನಿರ್ಧರಿಸಲಾಗಿದೆ. ಏಕಕಾಲದಲ್ಲಿ ಕನ್ನಡ-ಹಿಂದಿ ಭಾಷೆಯಲ್ಲಿ ನೂರಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ. 

ಖ್ಯಾತ ನಿರ್ದೇಶಕ ಸುನೀಲ್ ಕುಮಾರ್ ದೇಸಾಯಿ ನಿರ್ದೇಶನದಲ್ಲಿ ಮೂಡಿ ಬಂದ ಸೂಪರ್ ಹಿಟ್ ಥ್ರಿಲ್ಲರ್  ಚಿತ್ರ ನಿಷ್ಕರ್ಷ.  ಚಿತ್ರದಲ್ಲಿ ಸಹಾಸ ಸಿಂಹ ವಿಷ್ಣುವರ್ಧನ್, ಅನಂತ್ ನಾಗ್, ಬಿ.ಸಿ. ಪಾಟಿಲ್, ಪ್ರಕಾಶ್ ರಾಜ್, ಸುಮನ್ ನಗಾಕರ್ ಹಾಗೂ ರಮೇಶ್ ಭಟ್ ಅಂತಹ ಖ್ಯಾತ ನಟರು ನಟಿಸಿದ್ದಾರೆ. 

‘ನಿಷ್ಕರ್ಷ’ಕ್ಕೆ ಮೂರು ರಾಜ್ಯ ಪ್ರಶಸ್ತಿ ಪಡೆದುಕೊಂಡಿದೆ. ವಿಷ್ಣುವರ್ಧನ್ ಇನ್ನೊಂದು ಸೂಪರ್ ಹಿಟ್ ಸಿನಿಮಾ ನಾಗರಹಾವು ಡಿಜಿಟಲೀಕರಣಗೊಂಡು ರಿಲೀಸ್ ಆಗಿ ಪ್ರೇಕ್ಷಕರಿಂದ ಸಿಕ್ಕಾಪಟ್ಟೆ ಮೆಚ್ಚುಗೆ ಪಡೆದಿತ್ತು. ಇದೀಗ ನಿಷ್ಕರ್ಷ ಕೂಡಾ ರೀ ರಿಲೀಸ್ ಆಗಲು ಸಿದ್ಧವಾಗಿದೆ. 

 

"

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

ಐಶ್ವರ್ಯಾ ರೈ ಮಗಳು ಆರಾಧ್ಯ ಬಾಲಿವುಡ್‌ಗೆ ಎಂಟ್ರಿ ಕೊಡೋದು ಯಾವಾಗ?
ಎದ್ದೇಳಿ ಹಿಂದೂಗಳೇ ಮೌನ ನಿಮ್ಮನ್ನು ರಕ್ಷಿಸುವುದಿಲ್ಲ, ಬಾಂಗ್ಲಾದೇಶ ಘಟನೆ ಖಂಡಿಸಿ ನಟಿ ಕಾಜಲ್ ಎಚ್ಚರಿಕೆ