‘ಪ್ರಾರಂಭ’ದಲ್ಲೇ ಲಿಪ್ ಲಾಕ್; ಸಿಕ್ಕಿಬಿದ್ದ ಖ್ಯಾತ ನಟನ ಪುತ್ರ!

By Web Desk  |  First Published Aug 25, 2019, 11:41 AM IST

ಕ್ರಿಯೇಟಿವ್ ಫಾದರ್ ಗೆ ಡಿಫರೆಂಟ್ ಸನ್. ತಮ್ಮ ಮೊದಲ ಚಿತ್ರ ’ಪ್ರಾರಂಭ’ ದ ಟೀಸರ್ ನ ಕೆಲವೊಂದು ದೃಶ್ಯಗಳು ಗಾಂಧಿನಗರದ ಸೆನ್ಸೇಷನಲ್ ನ್ಯೂಸ್ ಆಗಿದೆ. ಯಾರೀ ನಟ?


‘ಡ್ಯಾಮೇಜ್ ಅನ್ನೋದು 20 ರಲ್ಲೂ ಆಗುತ್ತೆ 70 ರಲ್ಲೂ ಆಗುತ್ತೆ. ಆದರೆ ಇವನ್ ಗೆ ಆಗಿರೋ ಡ್ಯಾಮೇಜ್ ಕೈ-ಕಾಲು ಗಲ್ಲ ಹೃದಯಕ್ಕೆ’ ಅಂತ ದರ್ಶನ್ ವಾಯ್ಸ್ ಮೂಲಕ ಜೇನುಶ್ರೀ ತನುಶ್ರೀ ಪ್ರೊಡಕ್ಷನ್ ನಲ್ಲಿ ’ಪ್ರಾರಂಭ’ ಚಿತ್ರದ ಮೂಲಕ ಸ್ಯಾಂಡಲ್ ವುಡ್ ಗೆ ಪಾದಾರ್ಪಣೆ ಮಾಡುತ್ತಿರುವುದು ರವಿಚಂದ್ರನ್ ಪುತ್ರ ಮನೋಹರ್ ರವಿಚಂದ್ರನ್.

ದುಬಾರಿ ಬೈಕ್‌ಗೆ ಒಡೆಯನಾದ ಕ್ರೇಜಿಸ್ಟಾರ್ ಪುತ್ರ !

Tap to resize

Latest Videos

ಟೀಸರ್ ನೋಡಿದ ಕೂಡಲೇ ನಿರೀಕ್ಷೆ ಹುಟ್ಟಿಸುವ ಚಿತ್ರಕ್ಕೆ ಚಿತ್ರರಂಗವೇ ಶುಭ ಕೋರಿದೆ. ಇನ್ನು ಟೀಸರ್ ನಲ್ಲಿ  ‘ಲೈಫ್ ಅನ್ನುವ ಎಲೆಗೆ ಸುಣ್ಣ ಅನ್ನುವ ಟೆನ್ಷನ್ ಜಾಸ್ತಿಯಾಗಿ ಬಾಯಿ ಜೊತೆಗೆ ಬಾಡಿಯಲ್ಲಾ ಸುಟ್ಟೋಗಿದೆ’ ಎಂಬ ಪಂಚಿಂಗ್ ಡೈಲಾಗ್ ಬಳಸುವ ಮೂಲಕ ಜನರಿಗೆ ವೀಕ್ಷಿಸಲೇಬೇಕು ಎಂಬ ಭರವಸೆ ಮೂಡಿಸುವುದಂತೂ ಗ್ಯಾರಂಟಿ.

 

ಕಿಸ್ಸಿಂಗ್ ಸೀನ್ ಮೂಲಕ ಟೀಸರ್ ಅಂತ್ಯಗೊಂಡು ಕಮಿಂಗ್ ಸೂನ್ ಎಂದು ತೋರಿಸುತ್ತದೆ. ಇನ್ನು ಮನೋರಂಜನ್ ಗೆ ಜೋಡಿಯಾಗಿ ಕೀರ್ತಿ ಕಲಕೇರಿ ಕಾಣಿಸಿಕೊಂಡಿದ್ದು ಸಂಗೀತ ಸಂಯೋಜನೆಯನ್ನು ಪ್ರಜ್ವಲ್ ಪೈ ಮಾಡುತ್ತಿದ್ದಾರೆ.

click me!