ಸುಕೃತಾ ವಾಗ್ಳೆ ಕೇಳಿದ ನೋವಿನ ಪ್ರಶ್ನೆ : ತಮ್ಮನ್ನು ಪೋರ್ನ್ ನಟಿಯರಿಗೆ ಹೋಲಿಕೆ ಮಾಡಿದ್ದಕ್ಕೆ ನೊಂದ ನಟಿ

Published : Dec 23, 2017, 10:10 PM ISTUpdated : Apr 11, 2018, 01:10 PM IST
ಸುಕೃತಾ ವಾಗ್ಳೆ  ಕೇಳಿದ ನೋವಿನ ಪ್ರಶ್ನೆ : ತಮ್ಮನ್ನು ಪೋರ್ನ್ ನಟಿಯರಿಗೆ ಹೋಲಿಕೆ ಮಾಡಿದ್ದಕ್ಕೆ ನೊಂದ ನಟಿ

ಸಾರಾಂಶ

‘ನಾವು ಧರಿಸುವ ದಿರಿಸು, ನಮ್ಮ ಮಾತು, ನಮ್ಮ ನಡಿಗೆಯನ್ನು ನೋಡಿ ನಾವು ಹೀಗೇ ಅಂತ ನಿರ್ಧರಿಸಲು ಹೇಗೆ ಸಾಧ್ಯ. ನಾನು ಸಿನಿಮಾದಲ್ಲಿ ಕಾಣಿಸಿಕೊಂಡಿದ್ದಕ್ಕೂ ನನ್ನ ನಿಜ ವ್ಯಕ್ತಿತ್ವಕ್ಕೂ ತುಂಬಾ ವ್ಯತ್ಯಾಸವಿದೆ. ಆದರೂ ನನ್ನ ಸಿನಿಮಾ ಪಾತ್ರಗಳನ್ನು ನೋಡಿ ನನ್ನನ್ನು ಜಡ್ಜ್ ಮಾಡಲಾಗುತ್ತಿದೆ. ಇದು ಸರಿಯಲ್ಲ’

‘ನೋ ಡುಗರಿಗೆ ಮುಜುಗರ ತರಿಸುವಷ್ಟು ನಾನು ಎಕ್ಸ್'ಫೋಸ್ ಮಾಡಿಲ್ಲ. ಆ ರೀತಿ ಅಶ್ಲೀಲವಾಗಿ ಕಾಣಿಸಿಕೊಳ್ಳುವುದು ನನಗೆ ಆಗಿಬರೋದಿಲ್ಲ. ಅದನ್ನು ಎಂದಿಗೂ ಒಪ್ಪಿಲ್ಲ, ಬೆಂಬಲಿಸಿಯೂ ಇಲ್ಲ. ಆದರೆ, ನಟಿಯಾಗಿ ನಾನು ಇತಿ-ಮಿತಿಯ ಒಳಗೆ ಒಂದು ಪಾತ್ರ ಅಥವಾ ಈ ಕಾಲಕ್ಕೆ ತಕ್ಕಂತೆ ಫೋಟೋಶೂಟ್ ಮಾಡಿಸುವುದರಲ್ಲಿ ತಪ್ಪಿಲ್ಲ. ಅದೇ ರೀತಿ ಅಶ್ಲೀಲ ಎನಿಸದ ಹಾಗೆ ಈ ಫೋಟೋಶೂಟ್ ಮಾಡಿಸಿದ್ದೇನೆ. ಅದರ ಒಂದು ಸ್ಯಾಂಪಲ್ ಈ ಫೋಟೋ. ಸುಮ್ನೆ ಕುತೂಹಲಕ್ಕಾಗಿ ನಾನು ಎರಡು ದಿನಗಳ ಹಿಂದೆ ನನ್ನದೇ ಫೇಸ್‌ಬುಕ್ ಅಕೌಂಟ್‌ನಲ್ಲಿ ಪೋಸ್ಟ್ ಮಾಡಿದ್ದೆ. ಅದಕ್ಕೆ ಕೆಲವರು ಹಾಕಿರುವ ಕಾಮೆಂಟ್ ವಿಚಿತ್ರವಾಗಿದೆ.

ಕೆಲವರಂತೂ ಪೋರ್ನ್ ನಟಿಯರಿಗೆ ಹೋಲಿಕೆ ಮಾಡಿ ಕಾಮೆಂಟ್ ಹಾಕುವ ಮೂಲಕ ತಮ್ಮ ವಿಕೃತ ಮನಸ್ಥಿತಿ ಪ್ರದ ರ್ಶಿಸಿದ್ದಾರೆ. ಮತ್ತೆ ಕೆಲವರು ಒಳ್ಳೆಯ ಸಲಹೆ ನೀಡಿದ್ದಾರೆ. ನಾನಿಲ್ಲಿ ಹೇಳ ಹೊರಟಿದ್ದು, ನಮ್ಮದೇ ಅಭಿವ್ಯಕ್ತಿಯ ಬಗ್ಗೆ. ಯಾರೋ ಕಾಮೆಂಟ್ ಹಾಕಬೇಕು, ಲೈಕ್ ಒತ್ತಬೇಕು ಅಂತ ಈ ಫೋಟೋ ಪೋಸ್ಟ್ ಮಾಡಿರಲಿಲ್ಲ. ಸುಮ್ಮೆ ನನ್ನದೇ ಕುತೂಹಲಕ್ಕೆ ಹಾಕಿದ್ದೆ. ಅದಕ್ಕೆ ಕೆಲವರು ಇಷ್ಟೆಲ್ಲ ಕೆಟ್ಟದಾಗಿ ಕಾಮೆಂಟ್ ಯಾಕೆ ಹಾಕಬೇಕಿತ್ತು ಅನ್ನೋದು ನನ್ನ ಪ್ರಶ್ನೆ’. - ಹೀಗೆ ಹೇಳಿದ್ದು ಸುಕೃತಾ ವಾಗ್ಳೆ.

ಇಷ್ಟೆಲ್ಲಾ ಮಾತನಾಡಲು ಕಾರಣ ಈ ಫೋಟೋ. ‘ಜಟ್ಟ’ ಖ್ಯಾತಿಯ ಈ ನಟಿ ಈಗ ‘ಮ್ಯಾಗಿ ಅಲಿಯಾಸ್ ಮೇಘ’ ಹಾಗೂ ‘ಅವುತಿ’ ಹೆಸರಿನ ಚಿತ್ರಗಳ ಮೂಲಕ ತೆರೆ ಮೇಲೆ ಬರಲು ರೆಡಿ ಆಗಿದ್ದಾರೆ. ಈ ನಡುವೆ ಹೊಸ ಅವಕಾಶಗಳತ್ತ ಮುಖ ಮಾಡಿರುವ ಸುಕೃತಾ ಮೊನ್ನೆಯಷ್ಟೇ ಛಾಯಾಗ್ರಹಕ ಅಭಿಷೇಕ್ ಬಳಿ ಹೊಸದೊಂದು ಫೋಟೋಶೂಟ್ ಮಾಡಿಸಿದ್ದಾರೆ. ಆ ಫೋಟೋಶೂಟ್‌ನ ಒಂದು ಫೋಟೋವನ್ನು ಅವರು ಸೋಷಿಯಲ್ ಮೀಡಿಯಾದಲ್ಲಿ ಪ್ರಕಟಿಸಿದ್ದರು. ಆ ಫೋಟೋ ನೋಡಿದ ಅನೇಕರು ಕೆಟ್ಟದಾಗಿ ಕಮೆಂಟ್ ಮಾಡಿದ್ದಾರೆ. ಕೆಲವರು ಅಶ್ಲೀಲ ಪದಗಳಿಂದ ನಿಂದಿಸಿದ್ದಾರೆ. ಈ ಪ್ರತಿಕ್ರಿಯೆ ಸುಕೃತಾ ಅವರಿಗೆ ಕೋಪ ತರಿಸಿದ್ದಷ್ಟೇ ಅಲ್ಲದೇ, ನೋವುಂಟು ಮಾಡಿದೆ. ಅವರು ತಮ್ಮ ಅಕೌಂಟ್‌ನಲ್ಲಿ ದಾಖಲಾದ ಆ ಎಲ್ಲಾ ಕಾಮೆಂಟ್ ಗಳನ್ನು ಡಿಲೀಟ್ ಮಾಡಿದ್ದಾರೆ. ಜತೆಗೆ ಅದಕ್ಕೊಂದು ಪ್ರತಿಕ್ರಿಯೆ ನೀಡಿ, ಆಕ್ರೋಶ ಹೊರ ಹಾಕಿದ್ದಾರೆ.

‘ನಾವು ಧರಿಸುವ ದಿರಿಸು, ನಮ್ಮ ಮಾತು, ನಮ್ಮ ನಡಿಗೆಯನ್ನು ನೋಡಿ ನಾವು ಹೀಗೇ ಅಂತ ನಿರ್ಧರಿಸಲು ಹೇಗೆ ಸಾಧ್ಯ. ನಾನು ಸಿನಿಮಾದಲ್ಲಿ ಕಾಣಿಸಿಕೊಂಡಿದ್ದಕ್ಕೂ ನನ್ನ ನಿಜ ವ್ಯಕ್ತಿತ್ವಕ್ಕೂ ತುಂಬಾ ವ್ಯತ್ಯಾಸವಿದೆ. ಆದರೂ ನನ್ನ ಸಿನಿಮಾ ಪಾತ್ರಗಳನ್ನು ನೋಡಿ ನನ್ನನ್ನು ಜಡ್ಜ್ ಮಾಡಲಾಗುತ್ತಿದೆ. ಇದು ಸರಿಯಲ್ಲ’ ಎಂದಿರುವ ಸುಕೃತಾ ವಾಗ್ಳೆ ಬೇಸರ ವ್ಯಕ್ತಪಡಿಸಿದ್ದಾರೆ. ವಿಕೃತ ಮನಸ್ಸಿನ ವ್ಯಕ್ತಿಗಳಿಗೆ ನಟ-ನಟಿಯರ ಬದುಕು ಯಾಕೆ ಕೆಟ್ಟದಾಗಿ ಕಾಣುತ್ತೆ ಎಂದು ಖಾರವಾಗಿ ಪ್ರಶ್ನಿಸಿದ್ದಾರೆ. ‘ಸೋಷಲ್ ಮೀಡಿಯಾದಲ್ಲಿ ನಟಿಯರ ಫೋಟೋಗಳಿಗೆ ಕೆಟ್ಟದಾಗಿ ಕಾಮೆಂಟ್ ಮಾಡುವ ಒಂದು ಪಡೆಯೇ ಇದೆ. ಟ್ರಾಲ್ ಮೂಲಕವೂ ನಟ-ನಟಿಯರನ್ನು ಕಾಲೆಳೆದು ಅವಮಾನಿಸಲಾಗುತ್ತಿದೆ. ಇದೆನ್ನೆಲ್ಲ ನಿರ್ಲಕ್ಷ್ಯ ಮಾಡಿ, ಸುಮ್ಮನಿರಬಹುದು. ಆದರೆ ಇದೆಲ್ಲ ಎಷ್ಟು ದಿನ? ಸುಮ್ಮನೆ ಬಿಟ್ಟರೆ ಇದು ನಿರಂತರವಾಗಿ ನಡೆಯುತ್ತದೆ. ಹೀಗಾಗಿಯೇ ನಾನು ಕೆಟ್ಟದಾಗಿ ಕಾಮೆಂಟ್ ಹಾಕಿದವರಿಗೆ ಪ್ರತಿ ಕಾಮೆಂಟ್ ಹಾಕಬೇಕಾಗಿ’ ಬಂತು ಅಂತಾರೆ ಸುಕೃತಾ

 

 

 

 

 

 

 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

BBK 12: ಅರೇ.. ಗಿಲ್ಲಿ...; ನರೇಂದ್ರ ಮೋದಿ ಅವ್ರೇ ಗಿಲ್ಲಿ ನಟನ ಬಗ್ಗೆ ಕನ್ನಡದಲ್ಲೇ ಪೋಸ್ಟ್‌ ಮಾಡಿದ್ರಾ? ಸತ್ಯ ಏನು?
ಕರ್ಣನ ಮನೆಯಲ್ಲಿ ಹೊಸ ಸಂಚಲನ! ಅನಾವರಣ ಆಗುತ್ತಾ ಬಚ್ಚಿಟ್ಟ ಗುಟ್ಟು? ಇಬ್ಬರಿಂದಲೂ ನಿರ್ಧಾರ