
ಈ ಚಿತ್ರ ಮಲಯಾಳಂ ಜತೆಗೆ ತಮಿಳಿನಲ್ಲೂ ನಿರ್ಮಾಣವಾಗುತ್ತಿದೆ.
ಮಲಯಾಳಂನ ಚಿತ್ರ ಸಾಹಿತಿ ಅಶ್ವಿನ್ ಮ್ಯಾಥ್ಯೂ ಆ್ಯಕ್ಷನ್ ಕಟ್ ಹೇಳುತ್ತಿದ್ದು, ಪ್ರತಿಷ್ಟಿತ ನಿರ್ಮಾಣ ಸಂಸ್ಥೆಯೇ ಈ ಚಿತ್ರದ ನಿರ್ಮಾಣಕ್ಕೆ ಬಂಡವಾಳ ಹೂಡುತ್ತಿದೆ. ‘ಕನ್ನಡದ ಜತೆಗೆ ತೆಲುಗು ಹಾಗೂ ತಮಿಳಿನಲ್ಲಿ ಅಭಿನಯಿಸಿದ್ದೆ. ಆದರೆ ಮಲಯಾಳಂ ಸಿನಿಮಾದಲ್ಲಿ ಅವಕಾಶ ಸಿಕ್ಕಿಲ್ಲ ಎನ್ನುವ ಕೊರಗು ಇತ್ತು. ಅದು ಈಗ ಈಡೇರಿದೆ. ಕತೆಯ ಜತೆಗೆ ಪಾತ್ರದ ಬಗ್ಗೆ ಕೇಳಿದೆ. ಚೆನ್ನಾಗಿದೆ ಎಂದೆನಿಸಿತು. ಒಪ್ಪಿಕೊಂಡೆ’ ಎನ್ನುತ್ತಾರೆ ಶುಭಾ ಪೂಂಜ.
ಈಗಾಗಲೇ ಚಿತ್ರೀಕರಣದಲ್ಲಿ ಭಾಗವಹಿಸಿದ್ದಾರೆ. ಕೇರಳಕ್ಕೆ ಹೋಗಿ ವಾರವೇ ಕಳೆದಿದೆ. ಎಲ್ಲಾ ರೀತಿಯ ಪಾತ್ರಗಳಿಗೆ ಬಣ್ಣ ಹಚ್ಚಿದ ಖ್ಯಾತಿ ಶುಭಾ ಅವರದ್ದು. ಈಗ ‘ತೆನ್‌ಕಾಸಿ ಬ್ರದರ್ಸ್’ನಲ್ಲಿ ತರಕಾರಿ ಮಾರುವ ಹುಡುಗಿ ಆಗಿ ಅಭಿನಯಿಸುತ್ತಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.