
ಅದೊಂದು ಸುಂದರ ಕಲಾಕ್ಷೇತ್ರ, ಅದರ ಒಡತಿ ನಾಟ್ಯ ವಿಶಾರದೆ ಮೀನಾಕ್ಷಿ, ಅವರಿಗೆ ಮೂವರು ಹೆಣ್ಣು ಮಕ್ಕಳು. ಮೊದಲನೇ ಮಗಳು ಕಾವ್ಯ, ತನ್ನ ಸಮಾಜ ಮತ್ತು ಕುಟುಂಬದ ನ್ಯಾಯಕ್ಕಾಗಿ ಹೋರಾಡುವ ವಕೀಲೆ. ಜೀವ, ಕನ್ನಡ ಚಲನಚಿತ್ರಗಳ ಯಶಸ್ವಿ ನಿರ್ಮಾಪಕ. ತನ್ನ ‘ಜೀವ ನಿರ್ಮಾಣ ಸಂಸ್ಥೆ’ ಮುಖಾಂತರ ಸದಭಿರುಚಿಯ ಕನ್ನಡ ಚಿತ್ರಗಳನ್ನು ನೀಡಬೇಕು ಎನ್ನುವುದೊಂದೇ ಇವನ ಧ್ಯೇಯ. ಇವರಿಬ್ಬರು ಸಂದರ್ಭಗಳ ಕೈಸೆರೆಯಾಗಿ ಬಯಸದೆ ಬಳಿ ಬಂದಾಗ, ಜೀವನದಲ್ಲಿ ಉಂಟಾಗುವ ತಿರುವುಗಳೇ ಧಾರಾವಾಹಿಯ ಕಥೆ.
ಬಯಸದೆ ಬಳಿ ಬಂದೆ ಧಾರಾವಾಹಿಯಲ್ಲಿ ನನ್ನದು ಜವಬ್ದಾರಿಯುತ ವಕೀಲೆ, ಕಾವ್ಯ ಪಾತ್ರ. ನಾನು ಇದುವರೆಗೆ ಮಾಡಿರುವ ಎಲ್ಲ ಪಾತ್ರಗಳಿಗಿಂತ ವಿಭಿನ್ನವಾಗಿರುವುದರಿಂದ ಇದು ಮನಸ್ಸಿಗೆ ತುಂಬ ಇಷ್ಟವಾಗಿರುವ ರೋಲ್. ನನ್ನ ವೃತ್ತಿ ಜೀವನ ಪ್ರಾರಂಭಿಸಿದ್ದೇ ಸ್ಟಾರ್ ಸುವರ್ಣ ವಾಹಿನಿಯಲ್ಲಿ ಈಗ ಕಂಬ್ಯಾಕ್ ಮಾಡಿರುವುದು ನನಗೆ ಸಂತೋಷ ಮತ್ತು ಹೆಮ್ಮೆ ತಂದಿದೆ.- ರಕ್ಷಾ ಹೊಳ್ಳ ನಾಯಕ ನಟಿ
ಬಯಸದೆ ಬಳಿ ಬಂದೆ ಧಾರಾವಾಹಿಯಲ್ಲಿ ಶ್ವೇತಾ ರಾವ್, ಮೈಸೂರು ಮಾಲತಿ, ಭಾಗ್ಯ, ಅನಿರುದ್ಧ, ಸುನೀಲ್ ಸಾಗರ್, ವಿಕಾಸ್ ಮತ್ತು ಶೋಭಿತಾ ಪ್ರಮುಖ ಪಾತ್ರಗಳಲ್ಲಿ ನಟಿಸುತ್ತಿದ್ದಾರೆ. ಈಗಾಗಲೇ ಧಾರಾವಾಹಿಯ ಪ್ರೋಮೋಗಳು ಸಾಮಾಜಿಕ ತಾಣಗಳಲ್ಲಿ ಜನರ ಮೆಚ್ಚುಗೆ ಗಳಿಸಿವೆ. ರೋಲ್ಸ್ ರಾಯ್ಸ್ ಕಾರಿನಲ್ಲಿ ಬರುವ ನಾಯಕನಿಗೆ ಕಾಲ್ನಡಿಗೆಯಲ್ಲಿ ಓಡಾಡುವ ನಾಯಕಿ ಜೊತೆಯಾದಾಗ ಇವರಿಬ್ಬರ ಜೀವನ ಒಂದಾಗಲು ಹೇಗೆ ಸಾಧ್ಯ ಎನ್ನುವುದನ್ನು ಏಪ್ರಿಲ್ ೧೫ರಿಂದ ಸೋಮವಾರದಿಂದ ಶನಿವಾರದವರೆಗೆ ರಾತ್ರಿ 9.30ಕ್ಕೆ ಸ್ಟಾರ್ ಸುವರ್ಣ ವಾಹಿನಿಯಲ್ಲಿ ತಪ್ಪದೇ ನೋಡಿ.
ನಾನು ಜೀವ ಎಂಬ ಸಿನಿಮಾ ನಿರ್ಮಾಪಕನ ಪಾತ್ರ ಮಾಡುತ್ತಿದ್ದೇನೆ. ಘನತೆ ಮತ್ತುಗತ್ತು ಇರುವ ಕ್ಯಾರೆಕ್ಟರ್ ಅವನದು. ಈ ಹಿಂದೆ ನಾನು ಹರ ಹರ ಮಹದೇವನ ಪಾತ್ರ ಮಾಡುವಾಗ ಶಿಸ್ತು, ಸಂಯಮ ಮತ್ತು ಶ್ರಮ ಬಹಳ ಮುಖ್ಯವಾಗಿತ್ತು, ಆ ರೀತಿ ಕಲಿಕೆಗೆ ಅವಕಾಶ ಕೊಟ್ಟ ಸ್ಟಾರ್ ಸುವರ್ಣ ವಾಹಿನಿಗೆ ಥ್ಯಾಂಕ್ಸ್. ಅಂತಹ ಪಾತ್ರ ಮಾಡಿದಮೇಲೆ, ಉಳಿದ ಎಲ್ಲಾ ಪಾತ್ರಗಳು ಸುಲಭ ಅನಿಸುತ್ತೆ. ಸ್ಟಾರ್ ಸುವರ್ಣ ವಾಹಿನಿ ನನ್ನ ಮನೆಯಿದ್ದಂತೆ. ಎಲ್ಲೆಡೆ ಸುತ್ತಾಡಿ, ಸಾಹಸ ಮತ್ತು ಸಾಧನೆ ಮಾಡಿ ನನ್ನವರ ಬಳಿಗೆ ಮರಳಿದ್ದೇನೆ ಅಷ್ಟೇ - ವಿನಯ್ ಗೌಡ ನಾಯಕ ನಟ
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.