'ನನ್ನ ಕರ್ಮಕ್ಕೆ ಇವನು ಸಿಕ್ಕಿದ್ನಲ್ಲಪ್ಪಾ': ರಾಜಮೌಳಿ ಅಂದುಕೊಂಡಿದ್ದು ಯಾವ ಸ್ಟಾರ್ ಹೀರೋ ಬಗ್ಗೆ ಗೊತ್ತಾ?

Published : Apr 02, 2026, 11:27 PM IST
SS Rajamouli

ಸಾರಾಂಶ

ಟಾಲಿವುಡ್ ಹೀರೋಗಳನ್ನು ಪ್ಯಾನ್ ಇಂಡಿಯಾ ಸ್ಟಾರ್‌ಗಳನ್ನಾಗಿ ಮಾಡುತ್ತಿರುವ ನಿರ್ದೇಶಕ ರಾಜಮೌಳಿ. ತೆಲುಗು ಚಿತ್ರರಂಗವನ್ನು ಹಾಲಿವುಡ್ ಮಟ್ಟಕ್ಕೆ ಕೊಂಡೊಯ್ದ ಈ ಜಕ್ಕಣ್ಣ, ಒಬ್ಬ ಸ್ಟಾರ್ ನಟನನ್ನು ನೋಡಿ 'ನನ್ನ ಕರ್ಮಕ್ಕೆ ಇವನು ಸಿಕ್ಕಿದ್ನಲ್ಲಪ್ಪಾ' ಎಂದುಕೊಂಡಿದ್ದರಂತೆ. ಆ ಹೀರೋ ಯಾರು ಗೊತ್ತಾ?

ರಾಜಮೌಳಿ ತೆಲುಗು ಹೀರೋಗಳಾದ ಎನ್‌ಟಿಆರ್, ರಾಮ್ ಚರಣ್, ಪ್ರಭಾಸ್ ಅವರನ್ನು ಪ್ಯಾನ್ ಇಂಡಿಯಾ ಹೀರೋಗಳನ್ನಾಗಿ ಮಾಡಿದ್ದಾರೆ. ನಮ್ಮ ಪ್ರತಿಭೆಯನ್ನು ಹಾಲಿವುಡ್ ಮಟ್ಟಕ್ಕೆ ಕೊಂಡೊಯ್ದಿದ್ದಾರೆ. ಸದ್ಯ ಮಹೇಶ್ ಬಾಬು ಜೊತೆ 1500 ಕೋಟಿ ಬಜೆಟ್‌ನ ಸಿನಿಮಾ ಮಾಡುತ್ತಿದ್ದು, ಹಾಲಿವುಡ್ ಮೇಲೆ ಕಣ್ಣಿಟ್ಟಿದ್ದಾರೆ. ಇಷ್ಟೆಲ್ಲಾ ಎತ್ತರಕ್ಕೆ ಬೆಳೆದರೂ ರಾಜಮೌಳಿ ಮಾತ್ರ ತುಂಬಾ ಸರಳವಾಗಿ ಕಾಣಿಸಿಕೊಳ್ಳುತ್ತಾರೆ.

ರಾಜಮೌಳಿ ತಮಗೆ ಬೇಕಾದ ಔಟ್‌ಪುಟ್ ಬರುವವರೆಗೂ ಯಾವುದೇ ನಟನನ್ನು ಬಿಡುವುದಿಲ್ಲ. ಆದರೆ, 'ಈ ಹೀರೋ ನನ್ನ ಕರ್ಮಕ್ಕೆ ಸಿಕ್ಕಿದ್ನಲ್ಲಪ್ಪಾ' ಎಂದು ರಾಜಮೌಳಿ ಅಂದುಕೊಂಡಿದ್ದು ಯಾರ ಬಗ್ಗೆ ಗೊತ್ತಾ? ಆ ಹೀರೋ ಬೇರಾರೂ ಅಲ್ಲ, ಜೂನಿಯರ್ ಎನ್‌ಟಿಆರ್. ರಾಜಮೌಳಿ ನಿರ್ದೇಶನದ ಮೊದಲ ಸಿನಿಮಾ 'ಸ್ಟೂಡೆಂಟ್ ನಂ. 1' ನಾಯಕನೇ ಜೂ. ನ್‌ಟಿಆರ್. ಅತಿ ಹೆಚ್ಚು ಸಿನಿಮಾ ಮಾಡಿದ್ದೂ ಅವರ ಜೊತೆಯೇ.

ಒಂದು ಸಂದರ್ಶನದಲ್ಲಿ ರಾಜಮೌಳಿ ಈ ಘಟನೆಯನ್ನು ನೆನಪಿಸಿಕೊಂಡರು. "ಆಗಷ್ಟೇ ಮೀಸೆ ಬರ್ತಾ ಇದ್ದ ಹುಡುಗ. ಡಿಂಗ್ ಡಿಂಗ್ ಅಂತ ಓಡಾಡ್ಕೊಂಡು, ಸರಿಯಾಗಿ ನಡೆಯೋಕೂ ಬರದ ಹುಡುಗನ್ನ ಹೀರೋ ಮಾಡ್ಬೇಕಾ? ನನ್ನ ಕರ್ಮಕ್ಕೆ ಇವನ್ಯಾವನಪ್ಪಾ ಸಿಕ್ಕಾಕೊಂಡ ಅಂತ ಅನಿಸಿತ್ತು. ಆದರೆ ಹತ್ತು ದಿನ ತಾರಕ್ ಜೊತೆ ಕೆಲಸ ಮಾಡಿದ ಮೇಲೆ ನನ್ನ ಅಭಿಪ್ರಾಯ ಸಂಪೂರ್ಣ ಬದಲಾಯ್ತು. ಅವರ ನಟನೆ, ಸಮರ್ಪಣೆ ಮತ್ತು ವರ್ತನೆ ಅದ್ಭುತವಾಗಿತ್ತು. ತಾರಕ್‌ನಲ್ಲಿ ಒಬ್ಬ ಅದ್ಭುತ ನಟನಿದ್ದಾನೆಂದು ನನಗೆ ಆ ಹತ್ತು ದಿನಗಳಲ್ಲಿ ತಿಳಿಯಿತು" ಎಂದಿದ್ದರು.

ಎನ್‌ಟಿಆರ್ ಜೊತೆ 'ಸ್ಟೂಡೆಂಟ್ ನಂ. 1' ಮೂಲಕ ಸೂಪರ್ ಹಿಟ್ ಕೊಟ್ಟ ಜಕ್ಕಣ್ಣ, ನಂತರ 'ಸಿಂಹಾದ್ರಿ', 'ಯಮದೊಂಗ' ಮತ್ತು 'RRR' ನಂತಹ ಬ್ಲಾಕ್‌ಬಸ್ಟರ್‌ಗಳನ್ನು ನೀಡಿದರು. 'RRR' ಮೂಲಕ ಎನ್‌ಟಿಆರ್ ಅವರನ್ನು ಪ್ಯಾನ್ ಇಂಡಿಯಾ ಹೀರೋ ಮಾಡಿ, ಆಸ್ಕರ್ ಮಟ್ಟಕ್ಕೆ ಕೊಂಡೊಯ್ದರು. ಸದ್ಯ ಮಹೇಶ್ ಬಾಬು ಜೊತೆ 'ವಾರಣಾಸಿ' ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ.

ಈಗಾಗಲೇ ಭಾರಿ ನಿರೀಕ್ಷೆ

ಹಾಲಿವುಡ್ ಮಟ್ಟದಲ್ಲಿ ತಯಾರಾಗುತ್ತಿರುವ ಈ ಸಿನಿಮಾ ಮೇಲೆ ಈಗಾಗಲೇ ಭಾರಿ ನಿರೀಕ್ಷೆಗಳಿವೆ. ಸುಮಾರು 1500 ಕೋಟಿ ಬಜೆಟ್‌ನಲ್ಲಿ ನಿರ್ಮಾಣವಾಗುತ್ತಿರುವ 'ವಾರಣಾಸಿ' ಚಿತ್ರದ ಶೂಟಿಂಗ್ ವೇಗವಾಗಿ ನಡೆಯುತ್ತಿದೆ. 2027ರ ಬೇಸಿಗೆಯಲ್ಲಿ ಸಿನಿಮಾ ಬಿಡುಗಡೆ ಮಾಡಲು ಚಿತ್ರತಂಡ ಯೋಜಿಸಿದೆ. ಈ ಚಿತ್ರದ ನಂತರ ರಾಜಮೌಳಿ ಹಾಲಿವುಡ್‌ಗೆ ಹೋಗುತ್ತಾರಾ ಮತ್ತು ಮಹೇಶ್ ಬಾಬು ಇಮೇಜ್ ಎಲ್ಲಿಗೆ ತಲುಪಲಿದೆ ಎಂಬುದನ್ನು ಕಾದು ನೋಡಬೇಕು.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

Pavithra Bandhana Serial: ತಿಲಕ್‌ ಪಾತ್ರ ಮತ್ತೆ ಬರಲಿದೆಯಾ? ನಟ ಯಶಸ್‌ ಕೃಷ್ಣ ಹೇಳಿದ ಸತ್ಯ ಏನು?
Amruthadhaare Serial: ಕರ್ಮ ಬಿಡ್ಲಿಲ್ಲ, JD ತಂತ್ರಕ್ಕೆ ತಿರುಗು ಮಂತ್ರ ಹಾಕಿದ ಮಲ್ಲಿ; ತತ್ತರಿಸಿ ಹೋದ KD