ಬಹದ್ದೂರ್ ಚೇತನ್ ಕುಮಾರ್ ನಿರ್ದೇಶನದ ಸಿನಿಮಾ ಎಂದ ಮೇಲೆ ಸಿಕ್ಕಾಪಟ್ಟೆಡ್ಯಾಷಿಂಗ್ ಮಾಸ್ ಆಗಿರುತ್ತವೆ. ಇಂಥ ಮಾಸ್ ಸಿನಿಮಾ ನಿರ್ದೇಶಕನಿಗೆ ಶ್ರೀಮುರಳಿಯಂತಹ ಕಮರ್ಷಿಯಲ್ ಹೀರೋ ಸಿಕ್ಕರೆ ಹೇಗಿರುತ್ತದೆ ಎಂಬುದಕ್ಕೆ ಅವರ ‘ಭರಾಟೆ’ಯ ಆ್ಯಕ್ಷನ್ ಟ್ರೇಲರ್ ನೋಡಬೇಕು.
ಭರ್ಜರಿ ಆ್ಯಕ್ಷನ್‌ಗಳಿಂದಲೇ ಕೂಡಿರುವ ಈ ಟ್ರೇಲರ್‌ನಲ್ಲಿ ಚಿತ್ರದ ನಾಯಕ ಶ್ರೀಮುರಳಿಯ ಹೊಡೆದಾಟದ ದೃಶ್ಯಗಳಿಗೆ ಅವರ ಅಭಿಮಾನಿಗಳು ಫುಲ್ ಖುಷಿ ಆಗಿದ್ದಾರೆ. ನೆಚ್ಚಿನ ಹೀರೋನ ಹೊಡೆದಾಟದ ಸಾಹಸಗಳನ್ನು ನೋಡಿ ಅಭಿಮಾನಿಗಳು ಕುಣಿದಾಡಿದ್ದಾರೆ.
ಈಗ ನಿರ್ದೇಶಕರು ಸೇಲ್ಸ್‌ಮ್ಯಾನ್‌ಗಳೂ ಆಗಿರಬೇಕು: ಚೇತನ್ ಕುಮಾರ್
ಹೀಗಾಗಿಯೇ ಟ್ರೇಲರ್ ಬಿಡುಗಡೆಯಾಗಿ 4 ಗಂಟೆ ಕಳೆಯುವಷ್ಟರಲ್ಲಿ ಎರಡು ಲಕ್ಷ ಜನ ಯೂಟ್ಯೂಬ್‌ನಲ್ಲಿ ಟ್ರೇಲರ್ ನೋಡಿರುವುದೇ ಇದಕ್ಕೆ ಸಾಕ್ಷಿ.
ಆನಂದ್ ಆಡಿಯೋ ಯೂಟ್ಯೂಬ್ ಚಾನಲ್‌ನಲ್ಲಿ ಸಾಹಸದ ಟ್ರೇಲರ್ ನಿನ್ನೆಯಷ್ಟೆಬಿಡುಗಡೆಯಾಗಿದ್ದು, ಇದರ ವೀಕ್ಷಣೆ ಐದು ಲಕ್ಷ ದಾಟಿದೆ. ಮೊನ್ನೆ ದುನಿಯಾ ವಿಜಯ್, ಡಾಲಿ ಧನಂಜಯ್, ನೀನಾಸಂ ಸತೀಶ್, ಕೆಂಡಸಂಪಿಗೆ ವಿಕ್ಕಿ, ಬಜಾರ್ ಹುಡುಗ ಧನ್ವೀರ್ ಹೀಗೆ ಐದು ಮಂದಿ ಹೀರೋಗಳು ಸೇರಿ ‘ಭರಾಟೆ’ ಚಿತ್ರದ ಆ್ಯಕ್ಷನ್ ಟ್ರೇಲರ್ ಬಿಡುಗಡೆ ಮಾಡಿದ್ದು ವಿಶೇಷವಾಗಿತ್ತು. ಜತೆಗೆ ಕಲಾವಿದರ ಸಂಘದಲ್ಲಿ ಸೇರಿದ್ದ ಶ್ರೀಮುರಳಿ ಅಭಿಮಾನಿಗಳು ಈ ಟ್ರೇಲರ್ ಬಿಡುಗಡೆಗೆ ಸಾಕ್ಷಿಯಾದರು. ಸುಪ್ರಿತ್ ನಿರ್ಮಾಣದ ಈ ಸಿನಿಮಾ ಇದೇ ತಿಂಗಳು ತೆರೆಗೆ ಬರುತ್ತಿದೆ.
ಭರಾಟೆಯಲ್ಲಿ ಭರ್ಜರಿ ಸೌಂಡ್ ಮಾಡಲು ಬರ್ತಿದ್ದಾನೆ ಅಗಸ್ತ್ಯಾ!