'ಸತ್ತವರ ಬಗ್ಗೆ ನಾನು ಯೋಚಿಸಲ್ಲ': ಶ್ರೀದೇವಿ ಬಗ್ಗೆ ರಾಮ್ ಗೋಪಾಲ್ ವರ್ಮಾ ಹೀಗಂದಿದ್ದೇಕೆ?

Published : Aug 17, 2026, 07:31 PM IST
Ram Gopal Varma

ಸಾರಾಂಶ

ನಟಿ ಶ್ರೀದೇವಿ ಅವರ ಜೀವನಚರಿತ್ರೆ 'ದಿ ಎಂಪ್ರೆಸ್'ಗೆ ನಿರ್ದೇಶಕ ರಾಮ್ ಗೋಪಾಲ್ ವರ್ಮಾ ಒಂದು ಅಧ್ಯಾಯ ಬರೆದಿದ್ದಾರೆ. ಈ ವೇಳೆ, ದಂತಕಥೆಯಂತಿದ್ದ ನಟಿಯ ನಟನೆ, ಅದರಲ್ಲೂ 'ಮಿಸ್ಟರ್ ಇಂಡಿಯಾ' ಚಿತ್ರದ ಅಭಿನಯವನ್ನು ನೆನಪಿಸಿಕೊಂಡು ಅಚ್ಚರಿ ವ್ಯಕ್ತಪಡಿಸಿದ್ದಾರೆ.

ಖ್ಯಾತ ನಿರ್ದೇಶಕ ರಾಮ್ ಗೋಪಾಲ್ ವರ್ಮಾ, ದಿವಂಗತ ನಟಿ ಶ್ರೀದೇವಿ ಅವರ ಜೀವನಚರಿತ್ರೆ 'ದಿ ಎಂಪ್ರೆಸ್' ಪುಸ್ತಕಕ್ಕೆ ಒಂದು ಅಧ್ಯಾಯವನ್ನು ಬರೆದುಕೊಟ್ಟಿದ್ದಾರೆ. ಧೀರಜ್ ಯು. ಕುಮಾರ್ ಬರೆದಿರುವ ಈ ಪುಸ್ತಕವನ್ನು ಶ್ರೀದೇವಿ ಅವರ ಜನ್ಮದಿನದಂದು ಪ್ರಿಯಾಂಕಾ ಚೋಪ್ರಾ ಅನೌನ್ಸ್ ಮಾಡಿದ್ದರು. ಈ ಪುಸ್ತಕದ ಟೈಟಲ್ 'ದಿ ಎಂಪ್ರೆಸ್' ಅಂತ ನನಗೆ ಗೊತ್ತಿರಲಿಲ್ಲ. ಆಕೆಗೆ 'ಸ್ಕ್ರೀನ್ ಕ್ವೀನ್' ಅನ್ನೋ ಬಿರುದು ಹೆಚ್ಚು ಸೂಕ್ತವಾಗಿತ್ತು ಅಂತ ನನಗನಿಸುತ್ತೆ. ಯಾಕಂದ್ರೆ, ಆ ಸ್ಥಾನವನ್ನು ಶ್ರೀದೇವಿ ನಿಜವಾಗಿಯೂ ಗಳಿಸಿದ್ದರು. ಉಳಿದ ನಟಿಯರೆಲ್ಲಾ ಆಕೆಯ ದಾರಿಯಲ್ಲೇ ಬಂದವರು' ಎಂದು ವರ್ಮಾ ಹೇಳಿದ್ದಾರೆ.

‘ಸತ್ತವರ ಬಗ್ಗೆ ನಾನು ಯೋಚಿಸಲ್ಲ’

ಶ್ರೀದೇವಿ ಅವರ ಜನ್ಮದಿನದ ಬಗ್ಗೆ ಮಾತನಾಡಿದ ವರ್ಮಾ, 'ಸಾಮಾನ್ಯವಾಗಿ ನಾನು ಯಾರಾದರೂ ತೀರಿಕೊಂಡ ಮೇಲೆ ಅವರ ಬಗ್ಗೆ ಹೆಚ್ಚು ಯೋಚಿಸುವುದಿಲ್ಲ. ನನ್ನ ಜೀವನ ಮತ್ತು ಕೆಲಸದ ಕಡೆಗೆ ಗಮನ ಕೊಡುತ್ತೇನೆ' ಎಂದಿದ್ದಾರೆ. 'ಆದರೆ, ಶ್ರೀದೇವಿ ತೀರಿಕೊಂಡು ವರ್ಷಗಳೇ ಕಳೆದರೂ, ಅವರ ಕೆಲವು ಅದ್ಭುತ ನಟನೆಗಳ ಹಿಂದಿನ ಕಲೆಗಾರಿಕೆ ನನಗೆ ಈಗಲೂ ಅರ್ಥವಾಗುವುದಿಲ್ಲ' ಎಂದು ಒಪ್ಪಿಕೊಂಡಿದ್ದಾರೆ.

ಅದರಲ್ಲೂ 'ಮಿಸ್ಟರ್ ಇಂಡಿಯಾ' ಸಿನಿಮಾದಲ್ಲಿ ಚಾರ್ಲಿ ಚಾಪ್ಲಿನ್ ರೀತಿ ಅವರು ಮಾಡಿದ ನಟನೆಯನ್ನು ನೆನಪಿಸಿಕೊಂಡ ವರ್ಮಾ, 'ಅದನ್ನು ಸಂಪೂರ್ಣವಾಗಿ ಅರ್ಥಮಾಡಿಕೊಳ್ಳುವುದು ನನಗೆ ಇಂದಿಗೂ ಅಸಾಧ್ಯ' ಎಂದಿದ್ದಾರೆ. 'ಶ್ರೀದೇವಿ ಒಬ್ಬ ಅದ್ಭುತ ನಟಿ. ನಾನು ನಿರ್ದೇಶಿಸಿದ ಯಾವುದೇ ನಟರಿಗಿಂತ ಆಕೆ ಮಿಗಿಲು' ಎಂದು ಹೊಗಳಿದ್ದಾರೆ.

‘ಚೆನ್ನೈನಲ್ಲಿ ನಡೆದ ಆ ಮೊದಲ ಭೇಟಿ’

ಶ್ರೀದೇವಿಯವರನ್ನು ಮೊದಲ ಬಾರಿಗೆ ಭೇಟಿಯಾದ ಕ್ಷಣವನ್ನು ವರ್ಮಾ ನೆನಪಿಸಿಕೊಂಡಿದ್ದಾರೆ. 'ನನ್ನ ಸಿನಿಮಾಗೆ ಅವರನ್ನು ನಾಯಕಿಯನ್ನಾಗಿ ಹಾಕಿಕೊಳ್ಳುವ ಆಸೆಯಿಂದ ಚೆನ್ನೈನಲ್ಲಿರುವ ಅವರ ಮನೆಗೆ ಹೋಗಿದ್ದೆ. ಆಗ ಅವರು ಫ್ಲೈಟ್ ಹಿಡಿಯುವ ತಯಾರಿಯಲ್ಲಿದ್ದರು. ಆ ವೇಳೆ ಅವರು ಪದೇ ಪದೇ ರೂಮಿನೊಳಗೆ ಹೋಗಿಬರುತ್ತಿದ್ದರು. ಅವರ ಉಪಸ್ಥಿತಿ, ತಣ್ಣನೆಯ ತಾಜಾ ಗಾಳಿ ಬೀಸಿದ ಹಾಗೆ ಇತ್ತು' ಎಂದು ವರ್ಮಾ ಹೇಳಿದ್ದಾರೆ.

ಶ್ರೀದೇವಿ ಅವರು 2018ರ ಫೆಬ್ರವರಿ 24ರಂದು ದುಬೈನಲ್ಲಿ ತಮ್ಮ 54ನೇ ವಯಸ್ಸಿನಲ್ಲಿ ನಿಧನರಾದರು. 'ಮಿಸ್ಟರ್ ಇಂಡಿಯಾ', 'ಚಾಂದನಿ' ಮತ್ತು 'ಹಿಮ್ಮತ್‌ವಾಲಾ' ಸೇರಿದಂತೆ ಹಲವು ಸೂಪರ್‌ಹಿಟ್ ಚಿತ್ರಗಳಲ್ಲಿ ನಟಿಸಿದ್ದ ಅವರು, ಭಾರತೀಯ ಚಿತ್ರರಂಗದ ಸಾರ್ವಕಾಲಿಕ ಶ್ರೇಷ್ಠ ನಟಿಯರಲ್ಲಿ ಒಬ್ಬರಾಗಿದ್ದಾರೆ. ಅವರ ಅಭಿನಯ ಮತ್ತು ಅವರೊಂದಿಗೆ ಕೆಲಸ ಮಾಡಿದವರ ನೆನಪುಗಳ ಮೂಲಕ ಶ್ರೀದೇವಿ ಇಂದಿಗೂ ಜೀವಂತವಾಗಿದ್ದಾರೆ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ವೆಬ್‌ಸೀರಿಸ್ ಜಗತ್ತಿಗೆ ಪ್ರಿಯಾಂಕಾ ಉಪೇಂದ್ರ, ನಿಶ್ವಿಕಾ ನಾಯ್ಡು ಎಂಟ್ರಿ: ಇಲ್ಲಿದೆ ಕುತೂಹಲಕಾರಿ ಮಾಹಿತಿ
‘ಮುಧೋಳ್’ ಹೆಸರಿನ ಹಿಂದೆ ರವಿಚಂದ್ರನ್: ವಿಕ್ರಮ್ ಬಿಚ್ಚಿಟ್ಟ ಆ ಕುತೂಹಲಕಾರಿ ಸೀಕ್ರೆಟ್ ಏನು?