ಶ್ರೀ ಮುರುಳಿ ಬಗೆಗಿನ ಆ 2 ಹೊಸ ವಿಚಾರಗಳೇನು ಗೊತ್ತಾ..?

Published : Dec 16, 2017, 04:55 PM ISTUpdated : Apr 11, 2018, 12:43 PM IST
ಶ್ರೀ ಮುರುಳಿ ಬಗೆಗಿನ ಆ 2 ಹೊಸ ವಿಚಾರಗಳೇನು ಗೊತ್ತಾ..?

ಸಾರಾಂಶ

`ಮಫ್ತಿ' ಚಿತ್ರಕ್ಕೆ ಜನಮನ್ನಣೆ ಸಿಕ್ಕಿದ್ದೇ ತಡ ಎಲ್ಲರ ಕಣ್ಣು ಶ್ರೀಮುರಳಿ ಮೇಲೆ ಬಿದ್ದಿದೆ.  ಮುಂದೆ ಯಾವ ಸಿನಿಮಾದಲ್ಲಿ ನಟಿಸಲಿದ್ದಾರೆ ಎನ್ನುವ ಕುತೂಹಲ. ಆ ಕುತೂಹಲಕ್ಕೆ ಉತ್ತರ ಸಿಕ್ಕಿದೆ. ಇಂಟರೆಸ್ಟಿಂಗ್ ಅಂದರೆ ಶ್ರೀಮುರಳಿ ಅಭಿಮಾನಿಗಳ ಬಾಯಿಗೆ ಒಂದೇ ಸಲ ಎರಡು ಲಡ್ಡು ಬಿದ್ದಿದೆ.

ಬೆಂಗಳೂರು (ಡಿ.16): `ಮಫ್ತಿ' ಚಿತ್ರಕ್ಕೆ ಜನಮನ್ನಣೆ ಸಿಕ್ಕಿದ್ದೇ ತಡ ಎಲ್ಲರ ಕಣ್ಣು ಶ್ರೀಮುರಳಿ ಮೇಲೆ ಬಿದ್ದಿದೆ.  ಮುಂದೆ ಯಾವ ಸಿನಿಮಾದಲ್ಲಿ ನಟಿಸಲಿದ್ದಾರೆ ಎನ್ನುವ ಕುತೂಹಲ. ಆ ಕುತೂಹಲಕ್ಕೆ ಉತ್ತರ ಸಿಕ್ಕಿದೆ. ಇಂಟರೆಸ್ಟಿಂಗ್ ಅಂದರೆ ಶ್ರೀಮುರಳಿ ಅಭಿಮಾನಿಗಳ ಬಾಯಿಗೆ ಒಂದೇ ಸಲ ಎರಡು ಲಡ್ಡು ಬಿದ್ದಿದೆ. ಶ್ರೀಮುರಳಿ ಎರಡು ಸಿನಿಮಾ ಘೋಷಣೆಯಾಗಿದೆ.  ಜಯಣ್ಣ ನಿರ್ಮಾಣದ ಸಿನಿಮಾ. ಈ ಚಿತ್ರಕ್ಕೆ ಇನ್ನೂ ಹೆಸರಿಟ್ಟಿಲ್ಲ. ಯಾರು ನಿರ್ದೇಶಕರು ಅನ್ನುವುದೂ ಪಕ್ಕಾ ಆಗಿಲ್ಲ. ಇನ್ನೊಂದು ವಾರದಲ್ಲಿ ಈ ಚಿತ್ರದ ಅಂತಿಮ ಕೆಲಸಗಳು ಹೊರಗೆ ಬರಲಿವೆ.

2 ಮತ್ತೊಂದು ಬಿಗ್ ನ್ಯೂಸ್ ಎಂದರೆ ನಟ ಶ್ರೀಮುರಳಿ ಮುಂದೆ ಮತ್ತೊಂದು ಸಿನಿಮಾ ಬಂದಿರುವುದು. ಹೊಂಬಾಳೆ ಪ್ರೊಡಕ್ಷನ್ ಅರ್ಪಣೆಯಲ್ಲಿ ಕಾರ್ತಿಕ್ ಗೌಡ ಅವರು ತಮ್ಮ ಕೆಆರ್ಕೆ ಸ್ಟುಡಿಯೋ ಬ್ಯಾನರ್’ನಡಿ ಶ್ರೀಮುರಳಿ ಅವರಿಗೊಂದು ಸಿನಿಮಾ ನಿರ್ಮಿಸುತ್ತಿದ್ದಾರೆ. ಜಯಣ್ಣ ನಿರ್ಮಾಣದ ಚಿತ್ರದ ನಂತರ ಸೆಟ್ಟೇರಲಿರುವ ಈ ಚಿತ್ರಕ್ಕೆ ಯೋಗಿ ಜಿ ರಾಜ್ ಅವರು ನಿರ್ದೇಶಕರು.

ಗಣೇಶ್ ಅಭಿನಯದ `ಖುಷಿ ಖುಷಿಯಾಗಿ' ಹಾಗೂ ಶಿವರಾಜ್ ಕುಮಾರ್ ಅಭಿನಯದ `ಬಂಗಾರ ಸನ್ ಆಫ್ ಬಂಗಾರದ ಮನುಷ್ಯ' ಚಿತ್ರಗಳಿಗೆ ಆ್ಯಕ್ಷನ್ ಕಟ್ ಹೇಳಿದ ಅವರು ಯೋಗಿ ಜಿ ರಾಜ್. ಈಗ ಅವರ ಮೂರನೇ ಚಿತ್ರ ಶ್ರೀಮುರಳಿ ನಟನೆಯಲ್ಲಿ  ಸೆಟ್ಟೇರುತ್ತಿದೆ.

ನಾಲ್ಕು ತಿಂಗಳ ಅಂತರದಲ್ಲಿ ಎರಡು ಚಿತ್ರಗಳು `ನಾನು ಯೋಗಿ ಜಿ ರಾಜ್ ಅವರ ನಿರ್ದೇಶನದ ಚಿತ್ರವನ್ನು ಒಪ್ಪಿಕೊಂಡಿದ್ದೇನೆ. ಆದರೆ, ಇದಕ್ಕೂ ಮುನ್ನ ಜಯಣ್ಣ ಅವರ ನಿರ್ಮಾಣದ ಚಿತ್ರ ಮುಗಿಸಬೇಕಿತ್ತು. ಹಾಗಂತ ಈ ಬಾರಿ ಒಂದು ಅಥವಾ ಎರಡು ವರ್ಷ ಒಂದೇ ಚಿತ್ರಕ್ಕೆ ಸಮಯ ತೆಗೆದುಕೊಳ್ಳುವುದಿಲ್ಲ. ತುಂಬಾ ಬೇಗ ಎರಡೂ ಚಿತ್ರಗಳನ್ನು ಮುಗಿಸುವ ಯೋಚನೆಯಲ್ಲಿದ್ದೇವೆ.ನಾಲ್ಕು ತಿಂಗಳುಗಳ ಅಂತರದಲ್ಲಿ ಎರಡು ಚಿತ್ರಗಳನ್ನು ಮುಕ್ತಾಯ ಮಾಡಬೇಕೆಂಬುದು ನನ್ನ ಯೋಚನೆ.

 ಈಗಾಗಲೇ ಜಯಣ್ಣ ಅವರ ನಿರ್ಮಾಣದ ಚಿತ್ರಕ್ಕೆ ಕತೆ ಸಿದ್ಧವಾಗುತ್ತಿದೆ. ನಿರ್ದೇಶನ ಯಾರು, ಚಿತ್ರದ ಹೆಸರು ಇತ್ಯಾದಿ ವಿವರಣೆಗಳನ್ನು ಸದ್ಯದಲ್ಲೇ ಹೇಳುತ್ತೇನೆ' ಎನ್ನುತ್ತಾರೆ ಶ್ರೀಮುರಳಿ ಅವರು. ನಿರ್ಮಾಪಕ ಕಾರ್ತಿಕ್ ಗೌಡ ಅವರು ವಿತರಣೆಯಲ್ಲಿ ತುಂಬಾ ಬಿಜಿಯಾಗಿದ್ದರೂ ತಾವು ಕೈಗೆತ್ತಿಕೊಳ್ಳುವ ನಿರ್ಮಾಣದ ಸಿನಿಮಾಗಳನ್ನು ಅದ್ಧೂರಿಯಾಗಿಯೇ  ನಿರ್ಮಿಸುವ ಪ್ಲಾನ್ ಮಾಡಿಕೊಂಡಿದ್ದಾರೆ. ಈ ಕಾರಣಕ್ಕೆ ಈಗಲೇ ಕೆಲಸಗಳನ್ನು ಶುರು ಮಾಡಿದ್ದು, ಅಂದುಕೊಂಡಂತೆ ಜಯಣ್ಣ ನಿರ್ಮಾಣದ ಸಿನಿಮಾ ಸೆಟ್ಟೇರಿ ಮುಗಿದರೆ ತಮ್ಮ ನಿರ್ಮಾಣದ ಚಿತ್ರವನ್ನು ನಾಲ್ಕು ತಿಂಗಳ ನಂತರ ಶುರು ಮಾಡುವ ಯೋಜನೆ ಕಾರ್ತಿಕ್ ಅವರದ್ದು.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

Bigg Boss ಬಗ್ಗೆ ನಂಬಲಸಾಧ್ಯ, ಯಾರೂ ಹೇಳದ ಗುಟ್ಟುಗಳನ್ನು ರಿವೀಲ್​ ಮಾಡಿದ ಅಭಿಷೇಕ್​ ಶ್ರೀಕಾಂತ್​
ಶಿರಸಿ ಸಾಯಿಬಾಬಾಗೆ ಬಲು ದುಬಾರಿಯ ಚಿನ್ನದ ಕಿರೀಟ ಅರ್ಪಿಸಿದ ನಟಿ ಮಾಲಾಶ್ರೀ: ಕಾರಣವೂ ರಿವೀಲ್​!