Sreeleela: ಸೈಡಿಗ್ ಹೋಗು ಶ್ರೀಲೀಲಾ: ಕನ್ನಡ ನಟಿಗೆ ಅವಮಾನ ಮಾಡಿದ್ರಾ ಮಹಾರಾಷ್ಟ್ರ ಸಿಎಂ ಪತ್ನಿ?

Published : Jun 24, 2026, 05:21 PM IST
Sreeleela

ಸಾರಾಂಶ

Sreeleela: ಯೋಗ ದಿನದ ಕಾರ್ಯಕ್ರಮದಲ್ಲಿ ನಟಿ ಶ್ರೀಲೀಲಾ ಭಾಗವಹಿಸಿದ್ದ ವೇಳೆ ನಡೆದ ಫೋಟೋ ಸೆಷನ್ ವಿವಾದಕ್ಕೆ ಕಾರಣವಾಗಿದೆ. ಅಮೃತಾ ಫಡ್ನವಿಸ್ ಶ್ರೀಲೀಲಾರನ್ನು ಪಕ್ಕಕ್ಕೆ ಕಳುಹಿಸಿದ ವಿಡಿಯೋ ವೈರಲ್ ಆಗಿದೆ.

ಕಿಸ್ ಬ್ಯೂಟಿ ಶ್ರೀಲೀಲಾ ಈಗ ಕೇವಲ ಸ್ಯಾಂಡಲ್‌ವುಡ್ ಅಷ್ಟೇ ಅಲ್ಲ, ಇಡೀ ಸೌತ್ ಇಂಡಸ್ಟ್ರಿ ಕ್ರೇಜಿ ಸ್ಟಾರ್. ಆದರೆ, ಇತ್ತೀಚೆಗೆ ಮುಂಬೈನಲ್ಲಿ ನಡೆದ ಯೋಗಾ ದಿನದ ಕಾರ್ಯಕ್ರಮದಲ್ಲಿ ನಮ್ಮ ಕನ್ನಡತಿ ಶ್ರೀಲೀಲಾಗೆ ಅವಮಾನ ಮಾಡಲಾಯ್ತಾ ಅನ್ನೋ ಪ್ರಶ್ನೆ ಈಗ ಜೋರಾಗಿ ಕೇಳಿಬರ್ತಾ ಇದೆ. ಅಷ್ಟಕ್ಕೂ ನಡೆದಿದ್ದೇನು..? ಈ ಸ್ಟೋರಿ ನೋಡಿ. ಮುಂಬೈನಲ್ಲಿ ನಡೆದ ಅದ್ದೂರಿ ಯೋಗಾ ದಿನದ ಇವೆಂಟ್. ಬಾಲಿವುಡ್ ಸ್ಟಾರ್ ಶಾಹಿದ್ ಕಪೂರ್ ಸೇರಿದಂತೆ ಘಟಾನುಘಟಿಗಳು ಭಾಗಿಯಾಗಿದ್ದ ವೇದಿಕೆ ಅದು.

ಈ ಕಾರ್ಯಕ್ರಮಕ್ಕೆ ಮಹಾರಾಷ್ಟ್ರ ಸಿಎಂ ಪತ್ನಿ ಅಮೃತಾ ಫಡ್ನವಿಸ್ ಜೊತೆಗೆ ಸೌತ್ ಸನ್ಸೇಷನ್ ಶ್ರೀಲೀಲಾ ಕೂಡ ಅತಿಥಿಯಾಗಿ ಆಗಮಿಸಿದ್ರು. ಅದ್ಯಾಕೋ ಗೊತ್ತಿಲ್ಲ ಶ್ರೀಲೀಲಾಗೆ ಯೋಗಾ ಮಾಡೋದಕ್ಕೆ ಮನಸೇ ಇದ್ದಂತೆ ಕಾಣ್ತಿರಲಿಲ್ಲ. ಒತ್ತಾಯದಿಂದ ಎಬ್ಬಿಸಿ ಕೂರಿಸಿರೋ ಮಗು ತರಹ ಪೋಸ್ ಕೊಡ್ತಾ ಇದ್ರು ನಮ್ಮ ಕಿಸ್ ಬ್ಯೂಟಿ. ಇಲ್ಲಿವರೆಗೂ ಎಲ್ಲಾ ಸರಿ ಇತ್ತು. ಆದ್ರೆ ಆ ಬಳಿಕ ನಡೆದ ಘಟನೆಯೇ ದೊಡ್ಡ ವಿವಾದಕ್ಕೆ ಕಾರಣ ಆಗಿದೆ.

ಮಹಾರಾಷ್ಟ್ರ ಸಿಎಂ ದೇವೇಂದ್ರ ಫಡ್ನವೀಸ್ ಪತ್ನಿ ಅಮೃತಾ ಮತ್ತವರ ಮಗಳು ವೇದಿಕೆ ಮೇಲೆ ಪೋಸ್ ಕೊಡ್ತಾ ಇರ್ತಾರೆ. ಅವರ ಜೊತೆಗೆ ಶ್ರೀಲೀಲಾ ಕೂಡ ಇರ್ತಾರೆ. ಆಗ ಕ್ಯಾಮೆರಾಮನ್ಗಳು ನೀವು ಅಮ್ಮ-ಮಗಳು ಇಬ್ಬರೇ ಪೋಸ್ ಕೊಡಿ ಅಂತಾರೆ. ಆಗ ಅಮೃತಾ ಶ್ರೀಲೀಲಾಗೆ ಸೈಡಿಗ್ ಹೋಗು ಅಂತ ಪಕ್ಕಕ್ಕೆ ಕಳಿಸ್ತಾರೆ. ಅಷ್ಟಲ್ಲೂ ಶ್ರೀಲೀಲಾ ಏನೂ ಬಯಸಿ ಬಯಸಿ ಅಲ್ಲಿಗೆ ಹೋದವರಲ್ಲ. ಇವರೇ ಅವರನ್ನ ಕರೆಸಿಕೊಂಡಿದ್ದಾರೆ. ಅಮ್ಮ-ಮಗಳ ಪೋಟೋ ಸೆಷೆನ್ಗೆ ನಟಿಯನ್ನ ದೂರ ತಳ್ಳಬೇಕಾ..?

ಈ ಜಾಗದಲ್ಲಿ ಬಾಲಿವುಡ್ ನಟಿ ಇದ್ರೆ ಇವರು ಹೀಗೆ ನಡೆದುಕೊಳ್ತಾ ಇದ್ರಾ ಅಂತ ಲೀಲಾ ಫ್ಯಾನ್ಸ್ ಪ್ರಶ್ನೆ ಮಾಡ್ತಾ ಇದ್ದಾರೆ. ಸಿಎಂ ಪತ್ನಿ ಸೈಡಿಗೆ ಹೋಗಿ ಅಂದ ತಕ್ಷಣ ಶ್ರೀಲೀಲಾ ಬೇಸರ ಮಾಡಿಕೊಳ್ಳದೆ, ಮುಗುಳ್ನಗುತ್ತಲೇ ಅಲ್ಲಿಂದ ಪಕ್ಕಕ್ಕೆ ಸರೀತಾರೆ. ಆದರೆ ಶ್ರೀಲೀಲಾ ಅಭಿಮಾನಿಗಳು ಮಾತ್ರ ಸುಮ್ಮನಾಗ್ತಿಲ್ಲ. ಇಷ್ಟೊಂದು ದೊಡ್ಡ ಸ್ಟಾರ್ ಹೀರೊಯಿನ್ ಆಗಿರೋ ಶ್ರೀಲೀಲಾಗೆ ಕನಿಷ್ಠ ಗೌರವ ಕೊಡೋಕೂ ಬರಲ್ವಾ? ಅಂತ ಆಕ್ರೋಶ ಹೊರಹಾಕ್ತಾ ಇದ್ದಾರೆ.

ಯಾರಿಗೂ ಇಷ್ಟ ಆಗ್ತಿಲ್ಲ

ಕೆಲವರು ಇದು ಕೇವಲ ಫೋಟೋಗಾಗಿ ಮಾಡಿದ್ದು, ಇದರಲ್ಲಿ ಯಾವುದೇ ದುರುದ್ದೇಶ ಇಲ್ಲ ಅಂತ ಹೇಳ್ತಿದ್ರೂ ಕೂಡ, ಅಮೃತಾ ಫಡ್ನವಿಸ್ ಶ್ರೀಲೀಲಾ ಅವರನ್ನ ಸೈಡಿಗೆ ಕಳುಹಿಸಿದ ರೀತಿ ಮಾತ್ರ ಯಾರಿಗೂ ಇಷ್ಟ ಆಗ್ತಿಲ್ಲ. ನಮ್ಮ ನಟಿಗೆ ಮುಂಬೈನಲ್ಲಿ ಸೂಕ್ತ ಗೌರವ ಸಿಗಬೇಕಿತ್ತು ಅನ್ನೋದು ಅಭಿಮಾನಿಗಳ ವಾದ. ಅಷ್ಟಕ್ಕೂ ನೀವ್ಯಾಕೆ ಮುಂಬೈಗೆ ಹೋಗಿ ಅವಮಾನ ಮಾಡಿಸಿಕೊಳ್ತೀರಿ.. ಬೆಂಗಳೂರಲ್ಲೇ ಇರಿ ನಿಮ್ಮ ಹೊತ್ತು ಮರೆಸ್ತಿವಿ ಅಂತಿದ್ದಾರೆ ಶ್ರೀಲೀಲಾ ಫ್ಯಾನ್ಸ್.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

Thalapathy Vijay: ರಾಜಕೀಯದಲ್ಲೂ ಮಾಸ್ ಮಹಾರಾಜನಾ ವಿಜಯ್? ವೈರಲ್ ವಿಡಿಯೋ ಹಿಂದಿನ ಸತ್ಯ ಏನು?
Darshan Bail Plea: ದರ್ಶನ್ ಕೇಸ್‌ನಲ್ಲಿ ಏಕಾಏಕಿ ವಕೀಲರ ಬದಲಾವಣೆ: ಇದರ ಹಿಂದೆ ಏನಿದೆ?