'ಕಥೆಯೊಂದು ಶುರುವಾಗಿದೆ'ಯಲ್ಲಿ ಏನಿದೆ ಫ್ರೆಶ್‌ನೆಸ್

By Kannadaprabha NewsFirst Published Aug 3, 2018, 10:52 AM IST
Highlights

ರಕ್ಷಿತ್ ಶೆಟ್ಟಿ ಹಾಗೂ ಪುಷ್ಕರ್ ಮಲ್ಲಿಕಾರ್ಜುನಯ್ಯ ನಿರ್ಮಾಣದ, ಸೆನ್ನಾ ಹೆಗ್ಡೆ ನಿರ್ದೇಶನದ ‘ಕಥೆಯೊಂದು ಶುರುವಾಗಿದೆ’ ಇಂದಿನಿಂದ ಚಿತ್ರಮಂದಿರದಲ್ಲಿ

ಈ ಸಿನಿಮಾ ನಿಮಗೆ ಯಾಕೆ ಮಹತ್ವ?

 ‘ಕಥೆಯೊಂದು ಶುರುವಾಗಿದೆ’ ಸಿನಿಮಾ ತಂಡ ನನಗೆ ಹೊಸದು. ಪಕ್ಕಾ ವೃತ್ತಿಪರ ಮತ್ತು ಪ್ಯಾಷನ್ ಇಟ್ಟುಕೊಂಡು ಮಾಡಿರುವ ತಂಡ. ನಿರ್ದೇಶಕ ಸೆನ್ನಾ ಹೆಗಡೆ, ನಿರ್ಮಾಪಕರಾದ ಪುಷ್ಕರ್ ಮಲ್ಲಿಕಾರ್ಜುನಯ್ಯ, ರಕ್ಷಿತ್ ಶೆಟ್ಟಿ, ನಾಯಕಿ ಪೂಜಾ ದೇವರಿಯಾ ಎಲ್ಲರಲ್ಲೂ ಉತ್ಸಾಹ.೩೦ ದಿನಗಳಲ್ಲಿ ಚಿತ್ರೀಕರಣ ಮುಗಿಸಿದ ಚಿತ್ರ. ಶ್ರಮ ಮತ್ತು ಕ್ರಿಯಾಶೀಲತೆ ಎರಡು ಸೇರಿಕೊಂಡರೆ ಹುಟ್ಟಿಕೊಂಡ ಕತೆ. ವಿದೇಶಗಳಲ್ಲಿ ಪ್ರಿಮಿಯರ್ ಶೋ ಕಂಡ ಸಿನಿಮಾ. ನನಗೆ ಓವರ್‌ಸೀಸ್ ಮಾರುಕಟ್ಟೆ ಓಪನ್ ಮಾಡಿದ ಚಿತ್ರವಿದು.

ಮುಂದೆ ದಿಗಂತ್‌ರನ್ನು ಕಾಣಬಹುದೇ?

ನನಗೂ ಆ ಭರವಸೆ ಇದೆ. ಯಾಕೆಂದರೆ ಈ ಚಿತ್ರದ ಪೋಸ್ಟರ್, ಟ್ರೇಲರ್‌ಗೆ ಬರುತ್ತಿರುವ ಪ್ರತಿಕ್ರಿಯೆಗಳು, ಈಗಾಗಲೇ ಸಿನಿಮಾ ನೋಡಿದವರು ಹೇಳುತ್ತಿರುವ ಮಾತುಗಳನ್ನು ಕೇಳಿದಾಗ ಎಲ್ಲರು ಸೇರಿ ಹೊಸ ರೀತಿಯ ಫ್ರೆಶ್ ಸಿನಿಮಾ ಮಾಡಿದ್ದೇವೆ ಅನಿಸುತ್ತಿದೆ. ಆ ಕಾರಣಕ್ಕೆ ನಾನೇ ಗ್ಯಾರಂಟಿ ಕೊಡುತ್ತೇನೆ, ‘ಕಥೆಯೊಂದು ಶುರುವಾಗಿದೆ’ ಚಿತ್ರದ ನಂತರ ಹೊಸ ದಿಗಂತ್ ನಿಮಗೆ ಕಾಣುತ್ತಾರೆ.

ಕಥೆ ಹಾಗೂ ನಿಮ್ಮ ಪಾತ್ರದ ಕುರಿತು ಹೇಳಿ

ನನ್ನ ಪಾತ್ರದ ಹೆಸರು ತರುಣ್. ನಾನು ಲಾಭವಿಲ್ಲದ ಒಂದು ರೆಸ್ಟೋರೆಂಟ್ ನಡೆಸುವ ಹುಡುಗ. ನನ್ನ ಈ ನಿರ್ಲಿಪ್ತ ಬದುಕಿನಲ್ಲಿ ನಾಯಕಿ ಭೇಟಿ ಹೇಗಾಗುತ್ತದೆ ಎಂಬುದನ್ನು ನನ್ನ ಪಾತ್ರ ಮೂಲಕ ನೋಡಬಹುದು. ಸಿಂಪಲ್ ಕತೆ. ನಾಲ್ಕು ದಿನಗಳಲ್ಲಿ ನಡೆಯುವ ನಾಲ್ಕೈದು ಜೋಡಿಗಳ ಬೇರೆ ಬೇರೆ ಕತೆಗಳು. ಅದನ್ನು ಹೇಳುವುದಕ್ಕಿಂತ ನೋಡುವುದಕ್ಕೇ ಮಜಾ ಇರುತ್ತದೆ.

ಚಿತ್ರ ನೋಡಿದವರ ಅಭಿಪ್ರಯಾಗಳೇನು?

ಚಿತ್ರ ನೋಡಿದ ಶೇ.೯೦ರಷ್ಟು ಜನಕ್ಕೆ ಇಷ್ಟವಾಗಿದೆ. ಒಳ್ಳೆಯ ಅಭಿಪ್ರಾಯಗಳನ್ನೇ ಹೇಳುತ್ತಿದ್ದಾರೆ. ಮುಖ್ಯವಾಗಿ ನನ್ನ ಪಾತ್ರ ಹೊಸದಾಗಿದೆ, ಚಿತ್ರ ನೋಡಿದ ಪ್ರತಿಯೊಬ್ಬರಿಗೂ ಕತೆ ಕನೆಕ್ಟ್ ಆಗುತ್ತದೆ, ತುಂಬಾ ದಿನಗಳ ನಂತರ ಕನ್ನಡಕ್ಕೆ ಒಂದು ಹೊಸ ಫ್ರೆಶ್ ಕತೆ ಬಂದಿದೆ, ಪಾತ್ರಧಾರಿಗಳ ಸಂಯೋಜನೆ, ನಿರೂಪಣೆ, ನಿರ್ದೇಶಕರ ಟೇಕಿಂಗ್ ಹೀಗೆ ಎಲ್ಲದರ ಬಗ್ಗೆಯೂ ಮಾತನಾಡಿ ಮೆಚ್ಚಿಕೊಳ್ಳುತ್ತಿದ್ದಾರೆ.

ಈ ಚಿತ್ರವನ್ನು ಪ್ರೇಕ್ಷಕರು ಯಾಕೆ ನೋಡಬೇಕು?

ಸರಳವಾದ ಕತೆ. ಅಡ್ವಾನ್ಸ್ ತಾಂತ್ರಿಕತೆಯನ್ನು ಬಳಸಿಕೊಂಡು ಮಾಡಿರುವ ಸಿನಿಮಾ. ನಮ್ಮ ಮೂಲಕ ಪ್ರತಿಯೊಬ್ಬರ ಕತೆಯನ್ನು ಹೇಳುತ್ತಿದ್ದೇವೆ. ನೋಡುಗರು ಯಾವುದೇ ರೀತಿಯ ಗೊಂದಲ ಇಲ್ಲದೆ, ಮುಜುಗರ ಅನಿಸದೆ ನೀಟಾಗಿ ಕನೆಕ್ಟ್ ಮಾಡಿಕೊಳ್ಳುವಂತಹ ಕತೆ ಇಲ್ಲಿದೆ. ಕನ್ನಡ ಭಾಷೆ ಬಾರದಿದ್ದರೂ ನಾಯಕಿ ಪೂಜಾ ದೇವರಿಯಾ ಭಾಷೆ ಕಲಿತು ನಟಿಸಿದ್ದಾರೆ. ನಮ್ಮ ಕಾಂಬಿನೇಷನ್ ಚೆನ್ನಾಗಿದೆ. ಪುಷ್ಕರ್ ಮತ್ತು ರಕ್ಷಿತ್ ಶೆಟ್ಟಿ ತಂಡ ಹೊಸ ಪ್ರಯತ್ನಗಳಿಗೆ ಕೈ ಹಾಕಿದೆ. 

click me!