ತಲೆನೋವು ಮಾಯ..! ದೀಪಿಕಾ ಪಡುಕೋಣೆ ಸ್ಥಾನಕ್ಕೆ ಸೌತ್ ಇಂಡಿಯನ್ ಬಿಗ್ ಸ್ಟಾರ್ ನಟಿ ಆಯ್ಕೆ!

Published : Sep 22, 2026, 11:50 AM IST
Deepika Padukone Prabhas

ಸಾರಾಂಶ

ಆರಂಭದಲ್ಲಿ ದೀಪಿಕಾ ಬದಲಿಗೆ ಆಲಿಯಾ ಭಟ್ ನಟಿಸಲಿದ್ದಾರೆ ಎಂಬ ಮಾತುಗಳು ಕೇಳಿಬಂದಿದ್ದವು. ನಂತರ ರಶ್ಮಿಕಾ ಮಂದಣ್ಣ ಹಾಗೂ ಜಾನ್ಹವಿ ಕಪೂರ್ ಅವರ ಹೆಸರುಗಳೂ ಚರ್ಚೆಗೆ ಬಂದಿದ್ದವು. ಇದೀಗ ಈ ಎಲ್ಲಾ ಊಹಾಪೋಹಗಳಿಗೆ ತೆರೆ ಬೀಳುವಂತೆ ಈ ನಟಿ ಆಯ್ಕೆ ಆಗಿದ್ದಾರೆ.

South Indian star actress selected for Deepika Padukone place in the movie 'Kalki 2898 AD'- 'ಕಲ್ಕಿ 2898 ಎಡಿ 2’ರಲ್ಲಿ ದೀಪಿಕಾ ಜಾಗಕ್ಕೆ ಸೌತ್ ಇಂಡಿಯನ್ ಸ್ಟಾರ್ ನಟಿ!

ಪ್ರಭಾಸ್ ಅಭಿಮಾನಿಗಳು ಮಾತ್ರವಲ್ಲದೆ ಭಾರತೀಯ ಚಿತ್ರರಂಗವೇ ಕುತೂಹಲದಿಂದ ಎದುರು ನೋಡುತ್ತಿರುವ ಬಹುನಿರೀಕ್ಷಿತ ಸಿನಿಮಾ ‘ಕಲ್ಕಿ 2898 ಎಡಿ’ಯ ಎರಡನೇ ಭಾಗದ ಚಿತ್ರೀಕರಣ ಭರದಿಂದ ಸಾಗುತ್ತಿದೆ. ನಾಗ್ ಅಶ್ವಿನ್ ನಿರ್ದೇಶನದ ಈ ಸೈನ್ಸ್ ಫಿಕ್ಷನ್ ಚಿತ್ರಕ್ಕೆ ಈಗಾಗಲೇ ಭಾರಿ ನಿರೀಕ್ಷೆ ಮೂಡಿದೆ. ಇದರ ನಡುವೆ ಸಿನಿಮಾದ ಎರಡನೇ ಭಾಗಕ್ಕೆ ಸಂಬಂಧಿಸಿದಂತೆ ಕೇಳಿಬರುತ್ತಿರುವ ಹೊಸ ಸುದ್ದಿಯೊಂದು ಸಿನಿಪ್ರಿಯರ ಗಮನ ಸೆಳೆದಿದೆ. ಚಿತ್ರದ ಮೊದಲ ಭಾಗದಲ್ಲಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದ ದೀಪಿಕಾ ಪಡುಕೋಣೆ ಇದೀಗ ಎರಡನೇ ಭಾಗದಲ್ಲಿ ಇರಲಿದ್ದಾರೆ ಎಂಬುದು ಖಚಿತವಾಗಿಲ್ಲ. ಅವರ ಜಾಗಕ್ಕೆ ದಕ್ಷಿಣ ಭಾರತದ ಜನಪ್ರಿಯ ನಟಿ ಸಾಯಿ ಪಲ್ಲವಿ ಎಂಟ್ರಿ ನೀಡಿರುವ ಸುದ್ದಿ ಸದ್ದು ಮಾಡುತ್ತಿದೆ.

‘ಕಲ್ಕಿ 2898 ಎಡಿ’ ಮೊದಲ ಭಾಗದಲ್ಲಿ ದೀಪಿಕಾ ಪಡುಕೋಣೆ ‘ಸುಮತಿ’ ಎಂಬ ಅತ್ಯಂತ ಮಹತ್ವದ ಪಾತ್ರವನ್ನು ನಿರ್ವಹಿಸಿದ್ದರು. ಸಿನಿಮಾದ ಕಥೆಯ ಕೇಂದ್ರಭಾಗದಲ್ಲೇ ಈ ಪಾತ್ರ ಸಾಗುವುದರಿಂದ, ಎರಡನೇ ಭಾಗದಲ್ಲಿಯೂ ಸುಮತಿ ಪಾತ್ರಕ್ಕೆ ಹೆಚ್ಚಿನ ಪ್ರಾಮುಖ್ಯತೆ ಇದೆ ಎನ್ನಲಾಗುತ್ತಿದೆ. ಹೀಗಾಗಿ ದೀಪಿಕಾ ಪಡುಕೋಣೆ ಚಿತ್ರದಿಂದ ಹೊರಬಂದ ಬಳಿಕ, ಆ ಪಾತ್ರವನ್ನು ಯಾರು ನಿರ್ವಹಿಸಲಿದ್ದಾರೆ ಎಂಬ ಪ್ರಶ್ನೆ ಅಭಿಮಾನಿಗಳಲ್ಲಿ ಮೂಡಿತ್ತು.

ದೀಪಿಕಾ ಮತ್ತು ಚಿತ್ರತಂಡದ ನಡುವೆ ಕೆಲಸದ ಸಮಯ, ಸಂಭಾವನೆ ಸೇರಿದಂತೆ ಕೆಲವು ವಿಚಾರಗಳಲ್ಲಿ ಭಿನ್ನಾಭಿಪ್ರಾಯ ಉಂಟಾದ ಕಾರಣ ಅವರು ಸಿನಿಮಾದಿಂದ ಹೊರನಡೆದಿದ್ದಾರೆ ಎಂಬ ವರದಿಗಳು ಈ ಹಿಂದೆ ಹರಿದಾಡಿದ್ದವು. ಆದರೆ ಈ ಬಗ್ಗೆ ಅಧಿಕೃತವಾಗಿ ಎಲ್ಲ ವಿವರಗಳೂ ಬಹಿರಂಗವಾಗಿಲ್ಲ. ದೀಪಿಕಾ ನಿರ್ವಹಿಸಿದ್ದ ಪಾತ್ರವನ್ನು ಬದಲಾಯಿಸುವುದು ಚಿತ್ರತಂಡಕ್ಕೂ ಸವಾಲಿನ ಕೆಲಸವಾಗಿತ್ತು.

ಆರಂಭದಲ್ಲಿ ದೀಪಿಕಾ ಬದಲಿಗೆ ಆಲಿಯಾ ಭಟ್ ನಟಿಸಲಿದ್ದಾರೆ ಎಂಬ ಮಾತುಗಳು ಕೇಳಿಬಂದಿದ್ದವು. ನಂತರ ರಶ್ಮಿಕಾ ಮಂದಣ್ಣ ಹಾಗೂ ಜಾನ್ಹವಿ ಕಪೂರ್ ಅವರ ಹೆಸರುಗಳೂ ಚರ್ಚೆಗೆ ಬಂದಿದ್ದವು. ಇದೀಗ ಈ ಎಲ್ಲಾ ಊಹಾಪೋಹಗಳಿಗೆ ತೆರೆ ಬೀಳುವಂತೆ ಸಾಯಿ ಪಲ್ಲವಿ ಅವರ ಹೆಸರು ಮುನ್ನೆಲೆಗೆ ಬಂದಿದೆ. ವರದಿಗಳ ಪ್ರಕಾರ, ‘ಸುಮತಿ’ ಪಾತ್ರವನ್ನು ಸಾಯಿ ಪಲ್ಲವಿ ನಿರ್ವಹಿಸಲಿದ್ದಾರೆ.

ಈ ಪಾತ್ರದ ಮಹತ್ವ ಎಷ್ಟಿದೆ ಎಂಬುದಕ್ಕೆ ಪ್ರಭಾಸ್ ಮತ್ತು ಅಮಿತಾಬ್ ಬಚ್ಚನ್ ಅವರ ಪಾತ್ರಗಳೇ ಸಾಕ್ಷಿ ಎನ್ನಬಹುದು. ‘ಸುಮತಿ’ ಪಾತ್ರದ ರಕ್ಷಕರಾಗಿ ಪ್ರಭಾಸ್ ಮತ್ತು ಅಮಿತಾಬ್ ಬಚ್ಚನ್ ಕಾಣಿಸಿಕೊಂಡಿದ್ದರು. ಹೀಗಾಗಿ ಸಾಯಿ ಪಲ್ಲವಿಗೆ ಸಿಕ್ಕಿರುವ ಪಾತ್ರ ಸಾಮಾನ್ಯ ಪಾತ್ರವಲ್ಲ ಎಂಬುದು ಸ್ಪಷ್ಟವಾಗುತ್ತದೆ.

ಇನ್ನೊಂದೆಡೆ, ‘ಕಲ್ಕಿ 2898 ಎಡಿ 2’ ಚಿತ್ರದ ಚಿತ್ರೀಕರಣವೂ ವೇಗ ಪಡೆದುಕೊಂಡಿದೆ. ಈಗಾಗಲೇ ಸಿನಿಮಾದ ಸುಮಾರು 30ರಷ್ಟು ಚಿತ್ರೀಕರಣ ಪೂರ್ಣಗೊಂಡಿದೆ ಎನ್ನಲಾಗಿದ್ದು, ಅಮಿತಾಬ್ ಬಚ್ಚನ್ ಅವರ ಕೆಲವು ಪ್ರಮುಖ ದೃಶ್ಯಗಳ ಚಿತ್ರೀಕರಣವೂ ಮುಗಿದಿದೆ. ಪ್ರಭಾಸ್ ಸೇರಿದಂತೆ ಹಲವು ಸ್ಟಾರ್ ನಟ-ನಟಿಯರು ಈ ಬಹುತಾರಾಗಣದ ಸಿನಿಮಾದ ಭಾಗವಾಗಿದ್ದಾರೆ.

ಸಾಯಿ ಪಲ್ಲವಿಗೂ ಇದು ಮತ್ತೊಂದು ಮಹತ್ವದ ಹಂತವಾಗಿದೆ. ದಕ್ಷಿಣ ಭಾರತದ ಚಿತ್ರರಂಗದಲ್ಲಿ ತಮ್ಮದೇ ಆದ ಅಭಿಮಾನಿ ಬಳಗ ಹೊಂದಿರುವ ಅವರು ಬಾಲಿವುಡ್‌ನಲ್ಲೂ ಈಗಾಗಲೇ ಗಮನ ಸೆಳೆದಿದ್ದಾರೆ. ಸದ್ಯ ‘ರಾಮಾಯಣ’ ಸಿನಿಮಾದಲ್ಲಿ ಸೀತೆಯ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿರುವ ಸಾಯಿ ಪಲ್ಲವಿ, ಹಲವು ಪ್ರಮುಖ ಪ್ರಾಜೆಕ್ಟ್‌ಗಳಲ್ಲಿ ಬ್ಯುಸಿಯಾಗಿದ್ದಾರೆ. ಮಣಿರತ್ನಂ ನಿರ್ದೇಶನದ, ವಿಜಯ್ ಸೇತುಪತಿ ಜೊತೆಯಾಗಿ ನಟಿಸುತ್ತಿರುವ ಸಿನಿಮಾದಲ್ಲೂ ಅವರು ಕಾಣಿಸಿಕೊಳ್ಳುತ್ತಿದ್ದಾರೆ.

ಈ ನಡುವೆ ‘ಕಲ್ಕಿ 2898 ಎಡಿ 2’ಗೆ ಸಾಯಿ ಪಲ್ಲವಿ ಸೇರ್ಪಡೆಯಾಗಿರುವ ಸುದ್ದಿ ಮತ್ತಷ್ಟು ಕುತೂಹಲ ಮೂಡಿಸಿದೆ. ದೀಪಿಕಾ ಪಡುಕೋಣೆ ಸೃಷ್ಟಿಸಿದ್ದ ‘ಸುಮತಿ’ ಪಾತ್ರವನ್ನು ಸಾಯಿ ಪಲ್ಲವಿ ಹೇಗೆ ತಮ್ಮದೇ ಶೈಲಿಯಲ್ಲಿ ನಟಿಸಲಿದ್ದಾರೆ ಎಂಬುದು ಮುಂದಿನ ದಿನಗಳಲ್ಲಿ ಸಿನಿಪ್ರಿಯರ ಪ್ರಮುಖ ನಿರೀಕ್ಷೆಯಾಗಲಿದೆ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಅಂದಿನ ಕಾಲದಲ್ಲೇ ಬೆಂಗಳೂರನ್ನ ಆಳಿದ್ದ ನಟ ಅನಂತ್ ನಾಗ್, ಮಿನಿಸ್ಟರ್ ದರ್ಬಾರ್ ಹೇಗಿತ್ತು ಗೊತ್ತಾ?
ಗುಜರಾತಿನ ಕೆವಾಡಿಯಾದಲ್ಲಿ ಇಂದು ಅನಂತ್‌ ನಾಗ್‌ಗೆ ಫಾಲ್ಕೆ ಪ್ರಶಸ್ತಿ ಪ್ರದಾನ, ಕನ್ನಡಕ್ಕೆ 4, ತುಳುವಿಗೆ 1 ಪ್ರಶಸ್ತಿ