ಸೌತ್ ನಟಿಯರೆಂದರೆ ಅಷ್ಟೊಂದು ತಾತ್ಸಾರವೇ? ನೀವೇನು ದೊಡ್ಡವರಾ? ಬಾಲಿವುಡ್ ವಿರುದ್ಧ ರೆಜಿನಾ ಗರಂ!

Published : Nov 07, 2026, 08:51 PM IST
Regena Cassandrra

ಸಾರಾಂಶ

ಕೇಸರಿ ಸಿನಿಮಾ ಪ್ರಚಾರದಲ್ಲಿ ತಮ್ಮನ್ನು ಕಡೆಗಣಿಸಲಾಗಿದೆ ಎಂದು ನಟಿ ರೆಜಿನಾ ಕಾಸಾಂಡ್ರಾ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಧರ್ಮ ಪ್ರೊಡಕ್ಷನ್ಸ್ ಮತ್ತು ಬಾಲಿವುಡ್ ವಿರುದ್ಧ ಅವರು ಮಾಡಿರುವ ಹೇಳಿಕೆಗಳೇನು? ಇಲ್ಲಿದೆ ವಿವರ.

ಸೌಂದರ್ಯ ಮತ್ತು ಅದ್ಭುತ ಅಭಿನಯ ಪ್ರತಿಭೆ ಇದ್ದರೂ ನಿರೀಕ್ಷಿತ ಮಟ್ಟದ ಅವಕಾಶಗಳನ್ನು ಪಡೆಯಲು ಸಾಧ್ಯವಾಗದ ನಟಿಯರು ದಕ್ಷಿಣ ಚಿತ್ರರಂಗದಲ್ಲಿದ್ದಾರೆ. ಅಂಥವರಲ್ಲಿ ನಟಿ ರೆಜಿನಾ ಕ್ರಾಸಾಂಡ್ರಾ ಕೂಡ ಒಬ್ಬರು. ತಮ್ಮ ಸೌಂದರ್ಯ ಹಾಗೂ ನಟನೆಯ ಮೂಲಕ ತೆಲುಗು ಪ್ರೇಕ್ಷಕರ ಮನಸ್ಸಿನಲ್ಲಿ ವಿಶೇಷ ಸ್ಥಾನ ಗಳಿಸಿರುವ ಈ ಚೆಲುವೆ, ತೆಲುಗು ಮಾತ್ರವಲ್ಲದೆ ತಮಿಳು, ಕನ್ನಡ ಮತ್ತು ಹಿಂದಿ ಸಿನಿಮಾಗಳಲ್ಲೂ ಅದೃಷ್ಟ ಪರೀಕ್ಷಿಸಿದ್ದಾರೆ.

ಆದರೆ ಯಾವ ಭಾಷೆಯ ಚಿತ್ರರಂಗದಲ್ಲೂ ನಿರೀಕ್ಷಿತ ಮಟ್ಟದ ಸ್ಟಾರ್‌ಡಮ್ ಪಡೆಯಲು ಸಾಧ್ಯವಾಗಿಲ್ಲ. ಹೀಗಾಗಿ ಸದ್ಯ ವಿಭಿನ್ನ ಪಾತ್ರಗಳನ್ನು ಆಯ್ಕೆ ಮಾಡಿಕೊಳ್ಳುತ್ತಾ ಎಚ್ಚರಿಕೆಯಿಂದ ಹೆಜ್ಜೆ ಇಡುತ್ತಿದ್ದಾರೆ. ನಯನತಾರಾ ಪ್ರಮುಖ ಪಾತ್ರದಲ್ಲಿ ನಟಿಸಿರುವ 'ಮಹಾಶಕ್ತಿ' ಸಿನಿಮಾದಲ್ಲಿ ರೆಜಿನಾ ನೆಗೆಟಿವ್ ಶೇಡ್ ಇರುವ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಈ ಸಿನಿಮಾ ಇದೀಗ ಚಿತ್ರಮಂದಿರಗಳಲ್ಲಿ ಉತ್ತಮ ಪ್ರತಿಕ್ರಿಯೆ ಪಡೆದುಕೊಳ್ಳುತ್ತಿದೆ.

ಇವೆಲ್ಲದರ ನಡುವೆ ನಟಿ ರಾಧಿಕಾ ಆಪ್ಟೆ ದಕ್ಷಿಣ ಭಾರತದ ಚಿತ್ರರಂಗದ ಬಗ್ಗೆ ಮಾಡಿರುವ ಹೇಳಿಕೆಗಳು ಚರ್ಚೆಯಾಗುತ್ತಿವೆ. ಮತ್ತೊಂದೆಡೆ, ರೆಜಿನಾ ಕೂಡ ಬಾಲಿವುಡ್ ನಿರ್ಮಾಪಕರ ನಡೆ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಅದರಲ್ಲೂ ಬಾಲಿವುಡ್‌ನ ಪ್ರತಿಷ್ಠಿತ ನಿರ್ಮಾಣ ಸಂಸ್ಥೆ ಧರ್ಮ ಪ್ರೊಡಕ್ಷನ್ಸ್ ವಿರುದ್ಧ ಅವರು ಮಾಡಿರುವ ಕಾಮೆಂಟ್‌ಗಳು ಈಗ ವೈರಲ್ ಆಗಿವೆ.

ಸಿನಿಮಾ ಪ್ರಚಾರದಿಂದ ನನ್ನನ್ನು ಉದ್ದೇಶಪೂರ್ವಕವಾಗಿ ದೂರವಿಟ್ಟರು

ಅಕ್ಷಯ್ ಕುಮಾರ್ ನಾಯಕನಾಗಿ ನಟಿಸಿರುವ 'ಕೇಸರಿ ಚಾಪ್ಟರ್ 2: ದಿ ಅನ್‌ಟೋಲ್ಡ್ ಸ್ಟೋರಿ ಆಫ್ ಜಲಿಯನ್‌ವಾಲಾ ಬಾಗ್' ಸಿನಿಮಾದಲ್ಲಿ ರೆಜಿನಾ ನಾಯಕನ ಪತ್ನಿಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಈ ಪಾತ್ರ ಚಿತ್ರದಲ್ಲಿ ಸಾಕಷ್ಟು ಮಹತ್ವದ್ದಾಗಿತ್ತು ಎಂದು ಅವರು ಹೇಳಿದ್ದಾರೆ. ಆದರೆ ಸಿನಿಮಾ ಪ್ರಚಾರದ ವಿಚಾರದಲ್ಲಿ ತಮ್ಮನ್ನು ಸಂಪೂರ್ಣವಾಗಿ ಕಡೆಗಣಿಸಲಾಯಿತು ಎಂಬುದು ರೆಜಿನಾ ಅವರ ಅಸಮಾಧಾನ.

ಸಿನಿಮಾದ ಪ್ರಚಾರ ಕಾರ್ಯಕ್ರಮಗಳಿಂದ ಯಾವುದೇ ಸೂಕ್ತ ಕಾರಣ ನೀಡದೆ ತಮ್ಮ ಹೆಸರನ್ನು ಕೈಬಿಡಲಾಗಿತ್ತು ಎಂದು ಅವರು ಬೇಸರ ವ್ಯಕ್ತಪಡಿಸಿದ್ದಾರೆ. ಅಷ್ಟೇ ಅಲ್ಲ, ತಮ್ಮ ಮತ್ತು ಅಕ್ಷಯ್ ಕುಮಾರ್ ಅಭಿನಯಿಸಿದ್ದ ವಿಶೇಷ ಹಾಡನ್ನು ಬಿಡುಗಡೆ ಮಾಡಿದರೂ, ಸಾಮಾಜಿಕ ಜಾಲತಾಣಗಳಲ್ಲಿ ಎಲ್ಲಿಯೂ ತಮ್ಮನ್ನು ಟ್ಯಾಗ್ ಮಾಡಿರಲಿಲ್ಲ ಎಂದು ಹೇಳಿದ್ದಾರೆ.

ದಕ್ಷಿಣದ ನಟಿ ಎಂಬ ಕಾರಣಕ್ಕೆ ಈ ತಾರತಮ್ಯವೇ?

ಈ ಬಗ್ಗೆ ಮಾತನಾಡಿರುವ ರೆಜಿನಾ, "ನನ್ನ ಹೆಸರನ್ನೇ ಹಾಕಲಿಲ್ಲ. ಇದನ್ನು ನಾನೇನು ಎಂದು ಅರ್ಥ ಮಾಡಿಕೊಳ್ಳಬೇಕು? ನಾನು ದಕ್ಷಿಣ ಭಾರತದ ನಟಿ ಎಂಬ ಕಾರಣಕ್ಕೆ ಈ ತಾರತಮ್ಯವೇ?" ಎಂದು ಪ್ರಶ್ನಿಸಿದ್ದಾರೆ. ಅಲ್ಲದೆ, ಉತ್ತರ ಭಾರತದ ನಟಿಯರು ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದರೆ ಅವರನ್ನು ವೃತ್ತಿಪರರು ಎಂದು ಹೊಗಳಲಾಗುತ್ತದೆ. ಆದರೆ ದಕ್ಷಿಣ ಭಾರತದ ಕಲಾವಿದರು ಯಾವುದಾದರೂ ವಿಚಾರವನ್ನು ಪ್ರಶ್ನಿಸಿದರೆ ಅವರನ್ನು ಅಹಂಕಾರಿಗಳು ಎಂಬಂತೆ ಬಿಂಬಿಸಲಾಗುತ್ತದೆ ಎಂದು ಅಸಮಾಧಾನ ಹೊರಹಾಕಿದ್ದಾರೆ.

ಇನ್ನು ದಕ್ಷಿಣ ಭಾರತದ ಸಿನಿಮಾಗಳನ್ನು ಕೀಳಾಗಿ ನೋಡುವುದು ಹಾಗೂ ಉತ್ತರ ಭಾರತದ ಕೆಲವು ನಟರು ಮಾತನಾಡುವ ರೀತಿ ಸರಿಯಲ್ಲ ಎಂಬ ಅಭಿಪ್ರಾಯವನ್ನೂ ರೆಜಿನಾ ವ್ಯಕ್ತಪಡಿಸಿದ್ದಾರೆ. ಇದೀಗ ಬಾಲಿವುಡ್ ನಿರ್ಮಾಣ ಸಂಸ್ಥೆಯ ವಿರುದ್ಧ ರೆಜಿನಾ ಮಾಡಿರುವ ಈ ಆರೋಪಗಳು ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಚರ್ಚೆಗೆ ಕಾರಣವಾಗಿವೆ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಕೆರಿಯರ್ ಕೊಟ್ಟ ಇಂಡಸ್ಟ್ರಿಯನ್ನೇ ಟೀಕಿಸ್ತೀರಾ? ರಾಧಿಕಾಗೆ ಹೆಡ್ ಬುಷ್ ನಟಿ ಖಡಕ್ ಕೌಂಟರ್!
ಗಂಭೀರ ಧ್ವನಿ, ಅದ್ಭುತ ಅಭಿನಯ.. ಸ್ಟಾರ್ ಹೀರೋ ಬೆಳೆಸಿದ ಕೆಟ್ಟ ಅಭ್ಯಾಸವೇ ಕನ್ನಡದ ಖ್ಯಾತ ಖಳನಟನ ಪಾಲಿಗೆ ಮುಳುವಾಯ್ತಾ?