
ಈ ಇಬ್ಬರೂ ಸದ್ಯದ ಮೋಸ್ಟ್ ಹ್ಯಾಪನಿಂಗ್ ಹೀರೋಯಿನ್‌ಗಳು. ಭಾಷೆಯ ಗಡಿ ಎನ್ನುವುದನ್ನೇ ಲೆಕ್ಕಿಸದೆ ಬ್ಯಾಕ್ ಟು ಬ್ಯಾಕ್ ಸಿನಿಮಾಗಳ ಅವಕಾಶಗಳನ್ನು ಪಡೆದುಕೊಳ್ಳುತ್ತಾ ಮುನ್ನುಗ್ಗುತ್ತಿದ್ದಾರೆ. ಆದರೆ ಸದ್ಯ ಒಬ್ಬರಿಗೆ ಸಾಲು ಸಾಲು ಹಿಟ್‌ಗಳು ಸಿಗುತ್ತಿದ್ದರೆ, ಮತ್ತೊಬ್ಬರು ಸತತ ಸೋಲುಗಳಿಂದ ರೇಸ್‌ನಲ್ಲಿ ಹಿಂದೆ ಬೀಳುತ್ತಿದ್ದಾರೆ. ಹಾಗಾದರೆ ಈ ಇಬ್ಬರು ಬ್ಯೂಟಿಗಳು ಯಾರು? ಈ ಸ್ಟೋರಿಯಲ್ಲಿ ನೋಡೋಣ.
ಮಮಿತಾ ಬೈಜು ಕೈಹಿಡಿದಿದ್ದೆಲ್ಲವೂ ಚಿನ್ನವಾಗುತ್ತಿದೆ ಎನ್ನುವಂತಾಗಿದೆ. ಬ್ಯಾಕ್ ಟು ಬ್ಯಾಕ್ ದೊಡ್ಡ ಯಶಸ್ಸುಗಳನ್ನು ತಮ್ಮದಾಗಿಸಿಕೊಳ್ಳುತ್ತಿರುವ ಈ ಬ್ಯೂಟಿ ಸೌತ್ ಇಂಡಸ್ಟ್ರಿಯಲ್ಲಿ ಸದ್ದು ಮಾಡುತ್ತಿದ್ದಾರೆ. ಇತ್ತೀಚೆಗೆ ‘ವಿಶ್ವನಾಥ್ ಅಂಡ್ ಸನ್ಸ್’ ಸಿನಿಮಾದ ಮೂಲಕ ಬರೋಬ್ಬರಿ 260 ಕೋಟಿಗೂ ಅಧಿಕ ಕಲೆಕ್ಷನ್ ಮಾಡಿ ತೆಲುಗು ಹಾಗೂ ತಮಿಳಿನಲ್ಲಿ ಬ್ಲಾಕ್‌ಬಸ್ಟರ್ ಹಿಟ್ ದಾಖಲಿಸಿದ್ದಾರೆ. ಇನ್ನು ಮಲಯಾಳಂನಲ್ಲೂ ‘ಬೆತ್ಲಹೆಂ ಫ್ಯಾಮಿಲಿ ಯುನಿಟ್’ ಸಿನಿಮಾದ ಮೂಲಕ ಇಂಡಸ್ಟ್ರಿ ಹಿಟ್ ಪಡೆದುಕೊಂಡಿದ್ದಾರೆ.
ಇನ್ನೊಂದೆಡೆ ಕಯಾದು ಲೋಹರ್ ಪರಿಸ್ಥಿತಿ ಮಾತ್ರ ಭಿನ್ನವಾಗಿದೆ. ಸಾಲು ಸಾಲು ಸಿನಿಮಾಗಳಲ್ಲಿ ನಟಿಸುತ್ತಿದ್ದರೂ, ನಿರೀಕ್ಷಿತ ಮಟ್ಟದ ಯಶಸ್ಸು ಮಾತ್ರ ಅವರ ಕೈಗೆ ಸಿಗುತ್ತಿಲ್ಲ. ಮಲಯಾಳಂನಲ್ಲಿ ದುಲ್ಕರ್ ಸಲ್ಮಾನ್ ಜೊತೆ ನಟಿಸಿದ್ದ ‘ಐ ಆಮ್ ಗೇಮ್’ ಸಿನಿಮಾ ಖಂಡಿತವಾಗಿಯೂ ಹಿಟ್ ಆಗಲಿದೆ ಎಂಬ ನಿರೀಕ್ಷೆ ಇತ್ತು. ಆದರೆ ಸಿನಿಮಾ ನಿರೀಕ್ಷೆಗಳನ್ನು ತಲುಪದೆ ಡಿಸಾಸ್ಟರ್ ಆಗಿ ಉಳಿಯಿತು.
ತಮಿಳಿನಲ್ಲಿ ಜಿವಿ ಪ್ರಕಾಶ್ ಜೊತೆ ನಟಿಸಿದ ‘ಇಮ್ಮಾರ್ಟಲ್’ ಸಿನಿಮಾ ಕೂಡ ಪ್ರೇಕ್ಷಕರನ್ನು ನಿರಾಶೆಗೊಳಿಸಿತು. ‘ಇದಯಂ ಮುರಳಿ’ ಹೊರತುಪಡಿಸಿದರೆ ಕಯಾದು ಲೋಹರ್ ಅವರ ವೃತ್ತಿಜೀವನದಲ್ಲಿ ಹೇಳಿಕೊಳ್ಳುವಂತಹ ಮತ್ತೊಂದು ದೊಡ್ಡ ಹಿಟ್ ಕಾಣಿಸುತ್ತಿಲ್ಲ ಎನ್ನಲಾಗಿದೆ. ಸತತ ಸೋಲುಗಳಿಂದ ಕಂಗೆಟ್ಟಿರುವ ಕಯಾದು ಲೋಹರ್ ಇದೀಗ ‘ದಿ ಪ್ಯಾರಡೈಸ್’ ಸಿನಿಮಾದ ಮೇಲೆಯೇ ಭಾರೀ ನಿರೀಕ್ಷೆ ಇಟ್ಟುಕೊಂಡಿದ್ದಾರೆ.
ಇನ್ನು ಈ ಚಿತ್ರದ ಮೂಲಕವಾದರೂ ಸೂಪರ್ ಹಿಟ್ ಪಡೆದು ಸ್ಟಾರ್ ಲೀಗ್‌ಗೆ ಎಂಟ್ರಿ ಕೊಡಬೇಕು ಎಂಬ ನಿರೀಕ್ಷೆಯಲ್ಲಿದ್ದಾರೆ. ಹಾಗಾದರೆ ‘ದಿ ಪ್ಯಾರಡೈಸ್’ ಸಿನಿಮಾದ ಮೂಲಕವಾದರೂ ಕಯಾದು ಲೋಹರ್ ಅವರ ಆಸೆ ಈಡೇರುತ್ತದೆಯೇ? ಮತ್ತೊಮ್ಮೆ ಗೆಲುವಿನ ಹಾದಿಗೆ ಮರಳಲು ಈ ಸಿನಿಮಾ ಬ್ರೇಕ್ ನೀಡುತ್ತದೆಯೇ? ಅನ್ನೋದನ್ನು ಕಾದು ನೋಡಬೇಕಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.