
ಆಕ್ಷನ್ ಕಿಂಗ್ ಅರ್ಜುನ್ ಸರ್ಜಾ ನಾಯಕರಾಗಿ ನಟಿಸುತ್ತಿರುವ ಮಿಸ್ಟರಿ ಥ್ರಿಲ್ಲರ್ ಸಿನಿಮಾ 'ಪೊಲಿಮೇರ 3'ಯ ಫಸ್ಟ್ ಲುಕ್ ಗ್ಲಿಂಪ್ಸ್ ದೀಪಾವಳಿ ಹಬ್ಬದ ದಿನ ರಿಲೀಸ್ ಆಗಿದೆ. ಈ ಗ್ಲಿಂಪ್ಸ್‌ನಲ್ಲಿ ಅರ್ಜುನ್ ಸರ್ಜಾ 'ವಿರಾವಿ' ಎಂಬ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಡಾ. ಅನಿಲ್ ವಿಶ್ವನಾಥ್ ನಿರ್ದೇಶನದ ಈ ಸಿನಿಮಾ ತೆಲುಗು, ತಮಿಳು, ಕನ್ನಡ ಮತ್ತು ಮಲಯಾಳಂ ಭಾಷೆಗಳಲ್ಲಿ ದೊಡ್ಡ ಮಟ್ಟದಲ್ಲಿ ಬಿಡುಗಡೆಯಾಗಲಿದೆ. ವಂಶಿ ನಂದಿಪಾಟಿ ಎಂಟರ್‌ಟೈನ್‌ಮೆಂಟ್ಸ್ ಬ್ಯಾನರ್ ಅಡಿ ವಂಶಿ ನಂದಿಪಾಟಿ ಮತ್ತು ಶ್ರೀ ವೆಂಕಟೇಶ್ವರ ಸಿನಿಮಾಸ್ ಎಲ್‌ಎಲ್‌ಪಿ (ಏಷ್ಯನ್ ಗ್ರೂಪ್)ನ ಭರತ್ ನರಂಗ್ ಜಂಟಿಯಾಗಿ ಈ ಚಿತ್ರವನ್ನು ನಿರ್ಮಿಸುತ್ತಿದ್ದಾರೆ.
ದೇವಸ್ಥಾನದ ರಹಸ್ಯಮಯ ವಾತಾವರಣದಿಂದ ಶುರುವಾಗುವ ಗ್ಲಿಂಪ್ಸ್ ವಿಡಿಯೋ, ಆಧ್ಯಾತ್ಮ, ಅಲೌಕಿಕತೆ ಮತ್ತು ನಿಗೂಢತೆಯ ದೃಶ್ಯಗಳ ಮೂಲಕ ಸಾಗುತ್ತದೆ. ಅಮಾವಾಸ್ಯೆಯ ಹಿನ್ನೆಲೆಯಲ್ಲಿ ವಿಷ್ಣುವಿನಿಂದ ಶಿವನಿಗೆ, ನಂತರ ಅನಂತಪದ್ಮನಾಭ ಸ್ವಾಮಿಯ ದಿವ್ಯರೂಪಕ್ಕೆ ಬದಲಾಗುವ ದೃಶ್ಯಗಳು ಗಮನ ಸೆಳೆಯುತ್ತವೆ. ಕಥೆಯ ಕರಾಳ ಜಗತ್ತಿಗೆ ಕಾಲಿಡುವ ಗ್ಲಿಂಪ್ಸ್‌ನಲ್ಲಿ ಸತ್ಯಂ ರಾಜೇಶ್ ನಟಿಸಿರುವ ಕೊಮರಯ್ಯ ಪಾತ್ರ ಮಾಟಮಂತ್ರ ಮಾಡುತ್ತಿರುವಂತೆ ಕಾಣಿಸುತ್ತದೆ. ನಿಗೂಢತೆ ಮತ್ತು ಕುತೂಹಲವನ್ನು ಹೆಚ್ಚಿಸುವ ಈ ದೃಶ್ಯಗಳ ಕೊನೆಯಲ್ಲಿ ಅರ್ಜುನ್ ಸರ್ಜಾ ಅವರ 'ವಿರಾವಿ' ಪಾತ್ರದ ಎಂಟ್ರಿ ಆಗುತ್ತದೆ.
ಕೈಯಲ್ಲಿ ಕತ್ತಿ ಹಿಡಿದ ಅರ್ಜುನ್ ಸರ್ಜಾ
ಕೈಯಲ್ಲಿ ಕತ್ತಿ ಹಿಡಿದು ವೀರಯೋಧನಂತೆ ನಿಂತಿರುವ ಅರ್ಜುನ್ ಸರ್ಜಾ ಅವರ ಮಾಸ್ ಲುಕ್ ಗ್ಲಿಂಪ್ಸ್‌ನ ಹೈಲೈಟ್. ಅವರ ಪವರ್‌ಫುಲ್ ಸ್ಕ್ರೀನ್ ಪ್ರೆಸೆನ್ಸ್ ಮತ್ತು ಕಣ್ಣಿನ ತೀಕ್ಷ್ಣತೆ ಪಾತ್ರಕ್ಕೆ ಇನ್ನಷ್ಟು ಬಲ ತುಂಬಿದೆ. 'ಬಾಸ್ಟ್' ಚಿತ್ರದ ನಂತರ ಅರ್ಜುನ್ ಸರ್ಜಾ ಅವರ ಈ ಪಾತ್ರ 'ಪೊಲಿಮೇರ' ಫ್ರಾಂಚೈಸಿಗೆ ಹೊಸ ಆಯಾಮ ನೀಡುವ ನಿರೀಕ್ಷೆ ಇದೆ. ಅದ್ಭುತ ಹಿನ್ನೆಲೆ ಸಂಗೀತ, ಛಾಯಾಗ್ರಹಣ ಮತ್ತು ಉನ್ನತ ಮಟ್ಟದ ನಿರ್ಮಾಣ ಗ್ಲಿಂಪ್ಸ್‌ನ ಗುಣಮಟ್ಟವನ್ನು ಹೆಚ್ಚಿಸಿದೆ.
'ಮಾ ಊರಿ ಪೊಲಿಮೇರ' ಮೊದಲ ಭಾಗ ಒಟಿಟಿಯಲ್ಲಿ ಭಾರಿ ಜನಪ್ರಿಯತೆ ಪಡೆದಿತ್ತು. ಬೇರೆ ಬೇರೆ ಭಾಷೆಗಳಲ್ಲೂ ಇದು ದೊಡ್ಡ ಪ್ರೇಕ್ಷಕ ವರ್ಗವನ್ನು ತಲುಪಿತ್ತು. ಎರಡನೇ ಭಾಗ 'ಪೊಲಿಮೇರ 2' ಥಿಯೇಟರ್‌ಗಳಲ್ಲಿ ಬ್ಲಾಕ್‌ಬಸ್ಟರ್ ಹಿಟ್ ಆಗುವ ಮೂಲಕ ಈ ಫ್ರಾಂಚೈಸಿಯ ಕ್ರೇಜ್ ಹೆಚ್ಚಿಸಿತು. ಈಗ ಅದರ ಮುಂದಿನ ಭಾಗವಾಗಿ 'ಪೊಲಿಮೇರ 3' ಬರುತ್ತಿದೆ. ಅರ್ಜುನ್ ಸರ್ಜಾ ಅವರ ಎಂಟ್ರಿ ಮತ್ತು 4 ಭಾಷೆಗಳಲ್ಲಿ ದೊಡ್ಡ ಮಟ್ಟದ ರಿಲೀಸ್ ಚಿತ್ರದ ಮೇಲಿನ ನಿರೀಕ್ಷೆಯನ್ನು ದುಪ್ಪಟ್ಟು ಮಾಡಿದೆ.
ಇನ್ನು ಡಾ. ಅನಿಲ್ ವಿಶ್ವನಾಥ್ ಕಥೆ, ಚಿತ್ರಕಥೆ, ಸಂಭಾಷಣೆ ಬರೆದು ನಿರ್ದೇಶಿಸುತ್ತಿರುವ ಈ ಚಿತ್ರದಲ್ಲಿ ಸತ್ಯಂ ರಾಜೇಶ್ ಮತ್ತೆ ಕೊಮರಯ್ಯ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಕಾಮಾಕ್ಷಿ ಭಾಸ್ಕರ್ಲ, ಗೆಟಪ್ ಶ್ರೀನು, ಬಾಲಾದಿತ್ಯ ಮತ್ತು ರಾಕೇಂದು ಮೌಳಿ ಪ್ರಮುಖ ಪಾತ್ರಗಳಲ್ಲಿದ್ದಾರೆ. ಹಿಂದಿನ ಭಾಗಗಳಲ್ಲಿ ಪ್ರೇಕ್ಷಕರಿಗೆ ಕನೆಕ್ಟ್ ಆಗಿದ್ದ ಕಥೆಯನ್ನು ಇನ್ನಷ್ಟು ವಿಸ್ತರಿಸುತ್ತಿರುವ ಈ ಚಿತ್ರದಲ್ಲಿ ಅರ್ಜುನ್ ಸರ್ಜಾ ಅವರ 'ವಿರಾವಿ' ಪಾತ್ರ ಬಹಳ ನಿರ್ಣಾಯಕವಾಗಿದೆ ಎಂದು ಹೊಸ ಗ್ಲಿಂಪ್ಸ್ ಸೂಚಿಸುತ್ತಿದೆ. ತೆಲುಗು, ತಮಿಳು, ಕನ್ನಡ ಮತ್ತು ಮಲಯಾಳಂ ಭಾಷೆಗಳಲ್ಲಿ ಸಿನಿಮಾ ಥಿಯೇಟರ್‌ಗೆ ಬರಲಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.