ಸ್ಯಾನೆ ಪಸದಾಂಗವ್ನೆ... ಡಿ ಬಾಸ್‌ನ ಕಟೇರಾ ಹಾಡಿಗೆ ಹೆಜ್ಜೆ ಹಾಕಿದ ದಕ್ಷಿಣ ಆಫ್ರಿಕಾದ ಕಿಲಿ & ನೀಮಾ ಪೌಲ್

By Suvarna News  |  First Published Dec 19, 2023, 12:57 PM IST

ದಕ್ಷಿಣ ಆಫ್ರಿಕಾದ ತಂಜೇನಿಯಾದ ಸೋಶಿಯಲ್ ಮೀಡಿಯಾ ಸ್ಟಾರ್‌ಗಳಾದ ನೀಮಾ ಪೌಲ್ ಹಾಗೂ ಕಿಲಿ ಪೌಲ್ ಈಗ ದರ್ಶನ್ ಸಿನಿಮಾದ ಹಾಡೊಂದಕ್ಕೆ ಡಾನ್ಸ್ ಮಾಡಿದ್ದು, ಇದು ಕನ್ನಡದ ಅಭಿಮಾನಿಗಳನ್ನು ರಂಜಿಸಿದೆ.


ದಕ್ಷಿಣ ಆಫ್ರಿಕಾದ ತಂಜೇನಿಯಾದ ಸೋಶಿಯಲ್ ಮೀಡಿಯಾ ಸ್ಟಾರ್‌ಗಳಾದ ನೀಮಾ ಪೌಲ್ ಹಾಗೂ ಕಿಲಿ ಪೌಲ್ ಇಂಟರ್‌ನೆಟ್‌ನಲ್ಲಿ ಸಖತ್ ಫೇಮಸ್. ದೇಶ ಭಾಷೆ ಸಂಸ್ಕೃತಿಯ ಗಡಿ ಮೀರಿ ಈ ಅಣ್ಣ ತಂಗಿ ಇಡೀ ಪ್ರಪಂಚದೆಲ್ಲೆಡೆ ಇರುವ ಕಲೆಯ ಅಭಿಮಾನಿಗಳನ್ನು ರಂಜಿಸುತ್ತಿರುತ್ತಾರೆ. ಈಗಾಗಲೇ ಭಾರತದ ಅದರಲ್ಲೂ ಬಾಲಿವುಡ್‌ನ ಹಲವು ಹಾಡುಗಳಿಗೆ ಈ ಅಣ್ಣಾ ತಂಗಿ ಡಾನ್ಸ್ ಮಾಡಿದ್ದು, ಭಾರತದಲ್ಲೂ ಲಕ್ಷಾಂತರ ಅಭಿಮಾನಿಗಳನ್ನು ಈ ಅಣ್ಣತಂಗಿ ಜೋಡಿ ಹೊಂದಿದ್ದಾರೆ. ಈಗ ಅವರು ದರ್ಶನ್ ಸಿನಿಮಾದ ಹಾಡೊಂದಕ್ಕೆ ಡಾನ್ಸ್ ಮಾಡಿದ್ದು, ಇದು ಕನ್ನಡದ ಅಭಿಮಾನಿಗಳನ್ನು ರಂಜಿಸಿದೆ.

ನೋಡ್ತ ನೋಡ್ತ ಆಗೋಗಯ್ತೇ ಸ್ಯಾನೆ ಪಿರುತೀ
ನೋಡ್ತ ನಿನ್ನ ಆಗೋಗಯ್ತೇ ಸ್ಯಾನೇ ಪಿರುತೀ
ಪಕ್ಕದಲ್ಲಿ ನಿಂತ್ರೆ ಸಿವ ನೀನೇ ನಾನೇ ಪಾರ್ವತಿ
ಪಸದಾಂಗವ್ನೆ… ಸ್ಯಾನೆ ಪಸದಾಂಗವ್ನೆ

Tap to resize

Latest Videos

ಈ ಹಾಡಿಗೆ ಈ ಅಣ್ಣ ತಂಗಿ ಜೋಡಿ ಹಾಡುತ್ತಾ ನರ್ತಿಸಿದ್ದು,  ಇದು ದರ್ಶನ್ ಅಭಿಮಾನಿಗಳಿಗೆ ಫುಲ್ ಖುಷಿ ನೀಡಿದೆ. ಡಿ ಬಾಸ್ ದರ್ಶನ್‌  ಹಾಗೂ ಮಾಲಾಶ್ರೀ ಪುತ್ರಿ ಆರಾಧಾನಾ ರಾಮ್ ಅವರ ನಟನೆಯ ಬಿಡುಗಡೆಗೆ ಸಿದ್ಧಗೊಂಡಿರುವ 'ಕಟೇರಾ' ಸಿನಿಮಾದ ಹಾಡು ಇದಾಗಿದ್ದು, ಅಭಿಮಾನಿಗಳು ಕನ್ನಡ ಹಾಡು ಆಯ್ಕೆ ಮಾಡಿಕೊಂಡಿದ್ದಕ್ಕೆ ಧನ್ಯವಾದ ತಿಳಿಸಿದ್ದಾರೆ. ಸೋನುಗೌಡ ಕೂಡ ಇವರ ವೀಡಿಯೋಗೆ ಮೆಚ್ಚುಗೆ ವ್ಯಕ್ತಪಡಿಸಿ ವಾವ್ ಎಂದು ಕಾಮೆಂಟ್ ಮಾಡಿದ್ದಾರೆ.  

ಇಂಟರ್ ನ್ಯಾಷನಲ್ ಸೋಷಿಯಲ್ ಮೀಡಿಯಾ ಸ್ಟಾರ್ ಜೊತೆ ರಣವೀರ್‌ ಸಿಂಗ್‌ ಡ್ಯಾನ್ಸ್‌

ಇನ್ನು ಈ ಅಣ್ಣ ತಂಗಿ ಜೋಡಿ ಹೀಗೆ ಭಾರತೀಯ ಹಾಡುಗಳಿಗೆ ನಟಿಸಿದ್ದು, ಇದೇ ಮೊದಲೇನಲ್ಲ, ಈ ಹಿಂದೆ ಯಶ್‌ ನಟನೆಯ ಕೆಜಿಎಫ್ ಸಿನಿಮಾದ ಹಾಡುಗಳಿಗೂ ಕಿಲಿ ಪೌಲ್ ಡಾನ್ಸ್ ಮಾಡಿದ್ದರು. ಅಲ್ಲದೇ ಯಶ್ ಡೈಲಾಗ್ ಹೇಳಿ ಅಭಿಮಾನಿಗಳನ್ನು ಮೆಚ್ಚಿಸಿದ್ದರು. ಬಾಲಿವುಡ್ ನಟಿ ನೋರಾ ಪತ್ಹೇಹಿ ಕೂಡ ಕಿಲಿ ಪೌಲ್ ಡಾನ್ಸ್‌ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದರು. 

ಕಿಲಿ ಪೌಲ್ ಮತ್ತು ಸಹೋದರಿ ನೀಮಾ ಪೌಲ್ ಇಬ್ಬರು ಭಾರತದ ಹಾಡುಗಳಿಗೆ ಲಿಪ್ ಸಿಂಕ್ ಮಾಡುವ ಮೂಲಕ ಸಿಕ್ಕಾಪಟ್ಟೆ ಖ್ಯಾತಿ ಗಳಿಸಿದ್ದರು. ಬಾಲಿವುಡ್, ಸ್ಯಾಂಡಲ್ ವುಡ್, ಟಾಲಿವುಡ್ ಸೇರಿದಂತೆ ಬಹುತೇಕ ಭಾಷೆಯ ಹಾಡುಗಳಿಗೆ ಲಿಪ್ ಸಿಂಕ್ ಮಾಡಿ ರೀಲ್ ಮಾಡುತ್ತಿರುತ್ತಾರೆ. ಕಿಲಿ ಪೌಲ್ ರೀಲ್ ಸಿಕ್ಕಾಪಟ್ಟೆ ವೈರಲ್ ಆಗುವ ಜೊತೆಗೆ ಭಾರಿ ಮೆಚ್ಚುಗೆಗೆ ಪಾತ್ರವಾಗುತ್ತವೆ. ಇನ್ಸ್ಟಾಗ್ರಾಮ್ ನಲ್ಲಿ ಮಿಲಿಯನ್ ಗಟ್ಟಲೇ ಫಾಲೋವರ್ಸ್ ಹೊಂದಿರುವ ಕಿಲಿ ಪೌಲ್ ಭಾರತೀಯರಿಗೆ ಬಹಳ ಅಚ್ಚುಮೆಚ್ಚು. ಈಗ ದರ್ಶನ್‌ ನಟನೆಯ ಸಿನಿಮಾದ ಹಾಡಿಗೆ ಹೆಜ್ಜೆ ಹಾಕುವ ಮೂಲಕ ಮತ್ತಷ್ಟು ಅಭಿಮಾನಿಗಳನ್ನು ಗಳಿಸಿದ್ದಾರೆ ಕಿಲಿ & ನೀಮಾ. ಇನ್ನು ದರ್ಶನ್‌ ಹಾಗೂ ಮಾಲಾಶ್ರೀ ಪುತ್ರಿ ಆರಾಧನಾ ರಾಮ್ ನಟನೆಯ ಕಟೇರಾ ಸಿನಿಮಾ ಬಿಡುಗಡೆಗೆ ಸಿದ್ಧವಾಗಿದ್ದು, ಡಿಸೆಂಬರ್ 29ರಂದು ರಿಲೀಸ್ ಆಗಲಿದೆ. ತರುಣ್ ಸುಧೀರ್ ಈ ಸಿನಿಮಾವನ್ನು ನಿರ್ದೇಶಿಸಿದ್ದು, ರಾಕ್‌ಲೈನ್ ವೆಂಕಟೇಶ್ ನಿರ್ಮಾಣ ಮಾಡುತ್ತಿದ್ದಾರೆ. 

ತಾಂಜೇನಿಯಾದಲ್ಲೂ ಕೆಜಿಎಫ್‌ 2 ಹವಾ; ಕಿಲಿ ಪಾಲ್ ಬಾಯಲ್ಲಿ ಕೆಜಿಎಫ್ ಡೈಲಾಗ್.!
 

 
 
 
 
 
 
 
 
 
 
 
 
 
 
 

A post shared by Kili Paul (@kili_paul)

 

 

click me!