
ಸೋನಂ ಕಪೂರ್ ಮದುವೆಯ ಗುಸುಗುಸು ಆರಂಭವಾದಾಗಿನಿಂದಲೂ ಸೋಷಿಯಲ್ ಮೀಡಿಯಾದಲ್ಲಿ ಟ್ರೋಲಿಗರು ಸಖತ್ ಪಬ್ಲಿಸಿಟಿ ಕ್ರಿಯೇಟ್ ಮಾಡಿದ್ದರು. ಒಂದು ಹಂತದಲ್ಲಿ ಇದು ಹಾಸ್ಯವನ್ನೂ, ಅಪಹಾಸ್ಯವನ್ನೂ ಉಂಟು ಮಾಡಿದ್ದಿದೆ.
ಇದರಿಂದ ರೊಚ್ಚಿಗೆದ್ದಿದ್ದ ಸೋನಂ ಟ್ರೋಲಿಗರನ್ನು ಜಾಡಿಸಿದ್ದರು. ಇದರಿಂದ ಮತ್ತಷ್ಟು ರೊಚ್ಚಿಗೆದ್ದ ಟ್ರೋಲಿಗರು ಸೋನಂನನ್ನು ತೀವ್ರ ತರಾಟೆಗೆ ತೆಗೆದುಕೊಂಡಿದ್ದರು. ಈಗ ಇದೆಲ್ಲಕ್ಕೂ ಫುಲ್‌ಸ್ಟಾಪ್ ಬಿದ್ದಿದೆ.
ಮದುವೆಯ ಸಂಭ್ರಮದಿಂದ ಆಚೆ ಬಂದಿರುವ ಸೋನಂ ಸ್ವತಃ ಟ್ರೋಲಿಗರ ಕ್ಷಮೆಯಾಚಿಸಿದ್ದಾರೆ. ‘ನನ್ನ ಪ್ರತಿಯೊಂದು ಪೋಸ್ಟ್‌ಗಳಿಗೂ ತುಂಬಾ ಜನ ಕಾಮೆಂಟ್ ಮಾಡುತ್ತಾರೆ. ಕೆಲವರು ಬೇಡದ ವಿಚಾರಗಳನ್ನು ಇಟ್ಟುಕೊಂಡು ಮನಸ್ಸಿಗೆ ಬಂದಹಾಗೆ ಮಾತಾಡುತ್ತಿದ್ದರು. ಇದರಿಂದ ನನಗೆ ಬೇಸರವಾಗಿತ್ತು. ಈಗ ಅದೆಲ್ಲ ಏನಿಲ್ಲ. ನನ್ನಿಂದ ತಪ್ಪಾಗಿದ್ದರೆ ಕ್ಷಮೆ ಕೋರುತ್ತೇನೆ’ ಎಂದು ಹೇಳಿಕೊಂಡಿದ್ದಾರೆ.
ತಪ್ಪು ಮಾಡೋದು ಸಹಜ, ತಿದ್ದಿ ನಡೆಯೋನು ಮನುಜ ಎನ್ನುವ ರೀತಿಯಲ್ಲಿನ ಸೋನಂ ನಡೆಗೆ ಈಗ ಟ್ರೋಲ್ ಲೋಕದಲ್ಲಿ ಮುಕ್ತ ಸ್ವಾಗತವೂ ದೊರೆತಿದೆ. ನೆಗೆಟಿವ್ ಟ್ರೋಲ್‌ಗಳೆಲ್ಲಾ ಈಗ ಪಾಸಿಟೀವ್ ಆಗಿವೆ. ಅದಕ್ಕಾಗಿ ಈಗ ಫುಲ್ ಖುಷಿಯಾಗಿದ್ದೇನೆ. ಹೊಸ ಸಂಸಾರ, ಸಂತಸದ ಕ್ಷಣಳಿಂದ ನಾನು ಫುಲ್ ಹ್ಯಾಪಿ ಎಂದು ಹೇಳಿಕೊಂಡು ತನ್ನ ಸಂತಸ ತೋಡಿಕೊಂಡಿದ್ದಾರೆ ಸೋನಂ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.