ಉಪ್ಪಿಗೆ ಐ ಲವ್ ಯೂ ಅಂತಾರಂತೆ ರಚಿತಾ ರಾಮ್

Published : Jun 04, 2018, 02:17 PM IST
ಉಪ್ಪಿಗೆ ಐ ಲವ್ ಯೂ ಅಂತಾರಂತೆ ರಚಿತಾ ರಾಮ್

ಸಾರಾಂಶ

ರಚಿತಾ ರಾಮ್ ಮತ್ತೆ ಸ್ಟಾರ್ ನಟರ ಟ್ರ್ಯಾಕ್‌ಗೆ ಬಂದಂತೆ ಕಾಣುತ್ತಿದ್ದಾರೆ. ಸ್ಟಾರ್ ನಟರ ಚಿತ್ರಗಳ ಮೂಲಕವೇ ಚಿತ್ರರಂಗಕ್ಕೆ ಬಂದವರು ನಡುವೆ ಒಂದಿಷ್ಟು ಅವಕಾಶಗಳು ಇಲ್ಲ ಎಂದುಕೊಳ್ಳುತ್ತಿರುವಾಗಲೇ ರಚಿತಾ ರಾಮ್ ಈಗ ಐದು ಸಿನಿಮಾಗಳ ಒಡತಿ ಎನಿಸಿಕೊಂಡಿದ್ದಾರೆ. 

ಬೆಂಗಳೂರು (ಜೂ. 04): ರಚಿತಾ ರಾಮ್ ಮತ್ತೆ ಸ್ಟಾರ್ ನಟರ ಟ್ರ್ಯಾಕ್‌ಗೆ ಬಂದಂತೆ ಕಾಣುತ್ತಿದ್ದಾರೆ. ಸ್ಟಾರ್ ನಟರ ಚಿತ್ರಗಳ ಮೂಲಕವೇ ಚಿತ್ರರಂಗಕ್ಕೆ ಬಂದವರು ನಡುವೆ ಒಂದಿಷ್ಟು ಅವಕಾಶಗಳು ಇಲ್ಲ ಎಂದುಕೊಳ್ಳುತ್ತಿರುವಾಗಲೇ ರಚಿತಾ ರಾಮ್ ಈಗ ಐದು ಸಿನಿಮಾಗಳ ಒಡತಿ ಎನಿಸಿಕೊಂಡಿದ್ದಾರೆ. 

ಅಂದಹಾಗೆ  ಮತ್ತೊಮ್ಮೆ ರಿಯಲ್ ಸ್ಟಾರ್ ಉಪೇಂದ್ರ ಚಿತ್ರಕ್ಕೆ ನಾಯಕಿ ಆಗಿದ್ದಾರೆ. ಆರ್ ಚಂದ್ರು ನಿರ್ದೇಶನದ, ಉಪೇಂದ್ರ ನಾಯಕನಾಗಿ ನಟಿಸಲಿರುವ ‘ಐ ಲವ್ ಯು’ ಚಿತ್ರಕ್ಕೆ ರಚಿತಾ ರಾಮ್ ನಾಯಕಿ ಆಗಿದ್ದಾರೆ. ತೆಲುಗು ಹಾಗೂ ಕನ್ನಡ ಭಾಷೆಯಲ್ಲಿ ಮೂಡಿಬರಲಿರುವ ಚಿತ್ರವಾಗಿರುವ ಕಾರಣ ಎರಡೂ ಭಾಷೆಗೂ ಸೂಕ್ತ ಎನಿಸುವ ನಾಯಕಿಯ ಹುಡುಕಾಟದಲ್ಲಿದ್ದರು ಆರ್ ಚಂದ್ರು. ಆದರೆ, ಅವರು ಅಂದುಕೊಂಡಂತೆ ನಾಯಕಿಯರಿಗೆ ಡೇಟ್ಸ್ ಸಮಸ್ಯೆ. ಹೀಗಾಗಿ ಕನ್ನಡದ ನಟಿಯನ್ನೇ ಆಯ್ಕೆ ಮಾಡಿಕೊಂಡಿದ್ದು, ಉಪ್ಪಿಗೆ  ಐ ಲವ್‌ ಯು ಎನ್ನುವ ಭಾಗ್ಯ ರಚಿತಾ ರಾಮ್ ಪಾಲಿಗೆ ಸಿಕ್ಕಿದೆ.

ಇದೇ ತಿಂಗಳು 5  ರಿಂದ ಚಿತ್ರೀಕರಣ ಶುರುವಾಗಲಿದೆ. ಬೆಂಗಳೂರು, ಮಂಗಳೂರು, ಹೈದರಾಬಾದ್‌ನಲ್ಲಿ ಒಂದೇ ಹಂತದಲ್ಲಿ ಚಿತ್ರೀಕರಣ ನಡೆಯಲಿದೆ. ಅಲ್ಲದೆ ಗುಜರಾತ್‌ನ ಮರಳುಗಾಡಿನಲ್ಲಿ ಒಂದು ಹಾಡಿನ ಚಿತ್ರೀಕರಣ ಪ್ಲಾನ್ ಮಾಡಿಕೊಂಡಿದ್ದಾರೆ ನಿರ್ದೇಶಕ ಆರ್ ಚಂದ್ರು. ನವೀನ್ ಕ್ಯಾಮೆರಾ, ಡಾ ಕಿರಣ್  ಸಂಗೀತ ಸಂಯೋಜನೆ ಮಾಡಲಿದ್ದಾರೆ. ಹಾಗೆ ನೋಡಿದರೆ ನಟಿ ರಚಿತಾ ರಾಮ್ ಈಗಾಗಲೇ ಉಪೇಂದ್ರ ಜತೆ ‘ಉಪ್ಪಿ ರುಪಿ’ ಚಿತ್ರದಲ್ಲಿ ನಟಿಸಿದ್ದಾರೆ. ಅದು ಚಿತ್ರೀಕರಣದ ಹಂತದಲ್ಲಿದೆ.

ಒಂದು ಚಿತ್ರ ಮುಗಿಯುವ ಮುನ್ನವೇ ‘ಐ ಲವ್‌ ಯು’ ಮೂಲಕ ಮತ್ತೊಮ್ಮೆ ಉಪ್ಪಿ ಜತೆ ಹೆಜ್ಜೆ  ಹಾಕುತ್ತಿದ್ದಾರೆ.  

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

ಅನೇಕರ ಆಸೆ, ಹಾರೈಕೆ ಈಡೇರಿತು; Anchor Anushree-Roshan ಜೋಡಿಗೆ ಯಾರೂ ದೃಷ್ಟಿ ಹಾಕ್ಬೇಡಿ..ಪ್ಲೀಸ್
ಮದುವೆ ಮುರಿದುಬಿದ್ದ ಬಳಿಕ ಸ್ಮೃತಿ ಮಂಧಾನ-ಪಲಾಶ್ ಲೈಫ್‌ ಸ್ಟೈಲ್‌ನಲ್ಲಿ ಏನೆಲ್ಲಾ ಆಗೋಯ್ತು ನೋಡಿ...!