
ಇಂದು ಬಿಡಿ. ಪ್ರಚಾರಕ್ಕಾಗಿ ಜೀವವನ್ನೇ ಬಿಡೋಕೂ ರೆಡಿ ಇದ್ದಾರೆ ಕೆಲವರು. ಇನ್ನು ಚಿತ್ರ ನಟಿಯರ ವಿಷಯಕ್ಕೆ ಬರುವುದಾದರೆ, ಅರ್ಧಂಬರ್ಧ ದೇಹ ಪ್ರದರ್ಶನದಿಂದ ಬೇಸತ್ತು ಪೂರ್ತಿ ಬಟ್ಟೆ ಕಳಚೋಕೂ ಹೇಸಲ್ಲ. ಪ್ರಚಾರ, ದುಡ್ಡು, ಲೈಕ್ಸು, ಕಮೆಂಟ್ಸು... ಹೀಗೆ ಒಬ್ಬೊಬ್ಬರಿಗೆ ಒಂದೊಂದು ರೀತಿಯ ಹುಚ್ಚು. ಅದಕ್ಕಾಗಿ ಏನು ಬೇಕಾದರೂ ಮಾಡಲು ಸೈ ಎನ್ನುವ ಮನಸ್ಥಿತಿ. ಹಲವು ನಟಿಯರು ಬಿಂದಾಸ್ ಆಗಿ ಡ್ರೆಸ್ ಮಾಡಿಕೊಂಡು ಫೋಟೋಶೂಟ್ ಮಾಡಿಸಿಕೊಳ್ಳುವುದು ಮಾಮೂಲು. ಮೈಮೇಲೆ ಅತ್ಯಂತ ಕಡಿಮೆ ಬಟ್ಟೆ ತೊಡುವಲ್ಲಿ ಪೈಪೋಟಿಗೆ ಬಿದ್ದು ಫೋಟೋ ತೆಗೆಸಿಕೊಳ್ಳುವ ನಟಿಯರೇ ಇಂದು ಹೆಚ್ಚಾಗಿದ್ದಾರೆ. ಕೆಲವೊಮ್ಮೆ ತೀರಾ ಅಶ್ಲೀಲ ಎನ್ನಿಸುವಂಥ ಫೋಟೋಗಳನ್ನು ಶೇರ್ ಮಾಡಿ ಫ್ಯಾನ್ಸ್ಗಳಿಂದ ಭೇಷ್ ಭೇಷ್ ಎನಿಸಿಕೊಂಡು, ಕೆಲವರಿಂದ ಟ್ರೋಲ್ಗೂ ಒಳಗಾಗುತ್ತಾರೆ. ಆದರೆ ಇಲ್ಲಿ ಇವೆಲ್ಲವುಗಳಿಂತಲೂ ಭಿನ್ನವಾದ ವಿಡಿಯೋ ಒಂದನ್ನು ನಟಿ ಸೋನಮ್ ಬಾಜ್ವಾ ಶೇರ್ ಮಾಡಿದ್ದಾರೆ.
ಆದರೆ ಅದೇ ರೀತಿ ಬಹುಭಾಷಾ ನಟಿ ಮತ್ತು ರೂಪದರ್ಶಿಯಾಗಿರುವ ಸೋನಮ್ ಬಾಜ್ವಾ ತಾವು ಸ್ನಾನ ಮಾಡಿರುವ ವಿಡಿಯೋ ಒಂದನ್ನು ಶೇರ್ ಮಾಡಿದ್ದು, ಎಲ್ಲರ ಹುಬ್ಬೇರಿಸಿದ್ದಾರೆ! ತಮ್ಮ ಮನೆಯ ಬಾತ್ರೂಮಿನಲ್ಲಿ ಸ್ನಾನ ಮಾಡುವಾಗಿನ ವಿಡಿಯೋ ಶೇರ್ ಮಾಡಿಕೊಂಡಿದ್ದಾರೆ. ತಮ್ಮ ಒದ್ದೆಯಾದ ದೇಹದ ಫೋಟೋವನ್ನು ಪೋಸ್ಟ್ ಮಾಡಿದ್ದಾರೆ. ಸಾಮಾನ್ಯವಾಗಿ ಸಿನಿಮಾಗಳಲ್ಲಿ ನಟಿಯರು ಸ್ನಾನ ಮಾಡುವ ಇಲ್ಲವೇ ಮಳೆಯಲ್ಲಿ ಚಳಿ ಬಿಟ್ಟು ನಟಿಸುವ ದೃಶ್ಯಗಳನ್ನು ನೋಡಿರಬಹುದು. ಆದರೆ ಇಲ್ಲಿ ನಟಿ ಬಾಜ್ವಾ ನಿಜವಾಗಿಯೂ ಸ್ನಾನ ಮಾಡುವ ವಿಡಿಯೋ ಒಂದನ್ನು ತಮ್ಮ ಇನ್ಸ್ಟಾಗ್ರಾಮ್ನಲ್ಲಿ ಶೇರ್ ಮಾಡಿಕೊಂಡು ಹಲ್ಚಲ್ ಸೃಷ್ಟಿಸಿದ್ದಾರೆ. ಅಸಲಿಗೆ ಈಕೆ ಇಂಥ ವಿಡಿಯೋ, ಫೋಟೋ ಹಾಕಿ ಆಗಾಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಸಂಚಲನ ಮೂಡಿಸುತ್ತಲೇ ಇರುತ್ತಅರೆ. ಸಾಮಾಜಿಕ ಜಾಲತಾಣಗಳಲ್ಲಿ ಸಕ್ರಿಯರಾಗಿರುವ ನಟಿ ಇದೀಗ ತಮ್ಮ ಇನ್ಸ್ಟಾಗ್ರಾಮ್ನಲ್ಲಿ ಅಪ್ಲೋಡ್ ಮಾಡಿರುವ ಫೋಟೋ, ವಿಡಿಯೋ ನೋಡಿ ಅಭಿಮಾನಿಗಳ ಉಸಿರು ನಿಂತಂತಾಗಿದೆ.
ಮೊದಲು ಶವರ್ ಬಿಟ್ಟುಕೊಂಡು ಬಿಕಿನಿಯಲ್ಲಿ ಸ್ನಾನಗೃಹಕ್ಕೆ ಹೋಗುವ ನಟಿ ನಂತರ ಶವರ್ ಮಾಡುವ ಮೂಲಕ ನೀರಿನಲ್ಲಿ ಮುಳುಗುವುದನ್ನು ನೋಡಬಹುದು. ನಂತರ ಆಕೆಯ ಮೈಮೇಲೆ ನೀರಿನ ಹನಿಗಳು ಬೀಳುತ್ತಿವೆ. ಅದೇ ಸಮಯದಲ್ಲಿ ಅವರು ನೀಡಿದ ಪೋಸ್ ಕೂಡ ಅದ್ಭುತವಾಗಿದೆ. ನಟಿಯ ಈ ಫೋಟೋಶೂಟ್ ಅವರ ಅಭಿಮಾನಿಗಳ ಬೆವರಿಳಿಸಿದೆ. ಒದ್ದೆಯಾದ ದೇಹವು ಅವಳ ಸೌಂದರ್ಯದ ಸಿರಿ ಕಾಣಿಸುತ್ತಿದೆ ಎಂದು ಹಲವರು ಹೇಳುತ್ತಿದ್ದರೆ, ಇದು ಅಶ್ಲೀಲತೆಯ ಪರಮಾವಧಿ ಎಂದು ಇನ್ನು ಕೆಲವರು ಬೈಯುತ್ತಿದ್ದಾರೆ. ಬಜ್ವಾ ಅವರ ಇಂತಹ ಹಾಟ್ ಮತ್ತು ಮಾದಕ ನೋಟವನ್ನು ತಾವೆಂದಿಗೂ ನೋಡಿರಲಿಲ್ಲ, ಹೀಗೊಂದು ಫೋಟೋಶೂಟ್ ಮಾಡಿಸಿಕೊಳ್ಳಬಹುದು ಎಂದು ಊಹಿಸಿಯೂ ಇರಲಿಲ್ಲ ಎಂದು ಕೆಲವರು ಹೇಳಿದ್ದಾರೆ. ಈ ಚಿತ್ರಗಳಲ್ಲಿ ಸೋನಂ ಕೆಂಪು ಬಣ್ಣದ ಮೊನೊಕಿನಿ ಧರಿಸಿರುವುದನ್ನು ನೋಡಬಹುದು.
ಇನ್ನು ನಟಿಯ ಕುರಿತು ಹೇಳುವುದಾದರೆ, ನಟಿ, ಹೆಚ್ಚು ಫೇಮಸ್ ಆಗಿದ್ದು 2012ರಲ್ಲಿ ಮಿಸ್ ಇಂಡಿಯಾ ಸ್ಪರ್ಧೆಯಲ್ಲಿ ಭಾಗವಹಿಸಿದ್ದ ಮೇಲೆ. 34 ವರ್ಷಗಳ ಈ ಚೆಲುವೆ ಪಂಜಾಬಿ ಚಿತ್ರರಂಗದಲ್ಲಿ ಸಕತ್ ಫೇಮಸ್. ಹಾಟ್ ಪಾತ್ರಗಳಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತಾರೆ. ಇವರ ಅಸಲಿ ಹೆಸರು ಸೋನಮ್‌ಪ್ರೀತ್ ಬಾಜ್ವಾ. ಪಂಜಾಬಿ ಚಲನಚಿತ್ರ ಬೆಸ್ಟ್ ಆಫ್ ಲಕ್ (2013) ನೊಂದಿಗೆ ಸಿನಿ ಪ್ರಪಂಚಕ್ಕೆ ಪದಾರ್ಪಣೆ ಮಾಡಿರೋ ನಟಿ, ತಮಿಳು ಚಿತ್ರರಂಗದಲ್ಲಿಯೂ ಸಕತ್ ಫೇಮಸ್. ಕಪ್ಪಾಲ್ ಎಂಬ ಚಿತ್ರದ ಮೂಲಕ ಈಕೆ ತಮಿಳು ಚಿತ್ರರಂಗಕ್ಕೆ ಎಂಟ್ರಿ ಕೊಟ್ಟರು. ಇವರಿಗೆ ತುಂಬಾ ಹೆಸರು ತಂದುಕೊಟ್ಟ ಚಿತ್ರಗಳೆಂದರೆ ಪಂಜಾಬ್ 1984 (2014), ಸರ್ದಾರ್ ಜಿ 2 (2016), ನಿಕ್ಕಾ ಜೈಲ್ದಾರ್ (2016), ಮಂಜೇ ಬಿಸ್ತ್ರೆ (2017), ನಿಕ್ಕಾ ಜೈಲ್ದಾರ್ 2 (2017), ಕ್ಯಾರಿ ಆನ್ ಜಟ್ಟಾ ಮುಂತಾದವು. ಗುಡ್ಡಿಯನ್ ಪಟೋಲೆ (2019), ಅರ್ದಾಬ್ ಮುತಿಯಾರನ್ (2019) ಮತ್ತು ಆಟಾದುಕುಂದಂ ರಾ (2016) ನೊಂದಿಗೆ ತೆಲುಗು ಚಿತ್ರದಲ್ಲಿಯೂ ಕಾಣಿಸಿಕೊಂಡಿದ್ದಾರೆ. ಅರ್ದಾಬ್ ಮುತಿಯಾರನ್ ಚಿತ್ರದಲ್ಲಿನ ಅಭಿನಯಕ್ಕಾಗಿ ಬಾಜ್ವಾ ಅತ್ಯುತ್ತಮ ನಟಿಗಾಗಿ ಪಿಟಿಸಿ ಪಂಜಾಬಿ ಚಲನಚಿತ್ರ ಪ್ರಶಸ್ತಿಯನ್ನು ಗೆದ್ದರು . ಅವರು ಎರಡು ಫಿಲ್ಮ್‌ಫೇರ್ ಪ್ರಶಸ್ತಿಗಳಲ್ಲಿ ಅತ್ಯುತ್ತಮ ನಟಿಯಾಗಿ ನಾಮನಿರ್ದೇಶನಗೊಂಡಿದ್ದಾರೆ. ಕೆಲವು ಹಿಂದಿ ಚಿತ್ರಗಳಲ್ಲಿಯೂ ಅವರು ತಮ್ಮ ನಟನಾ ಕೌಶಲ್ಯವನ್ನು ಸಾಬೀತುಪಡಿಸಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.