ಗಾಯಕಿಯ ಧ್ವನಿ ಅಲ್ಲ, ಮೈ ಬೇಕೆಂದ: ಪೊಲೀಸರ ಬಾಸುಂಡೆ ಬಿದ್ದರೆ ಚೆಂದ!

Published : Jul 27, 2019, 02:14 PM IST
ಗಾಯಕಿಯ ಧ್ವನಿ ಅಲ್ಲ, ಮೈ ಬೇಕೆಂದ: ಪೊಲೀಸರ ಬಾಸುಂಡೆ ಬಿದ್ದರೆ ಚೆಂದ!

ಸಾರಾಂಶ

ಸಿಂಗರ್ ಸುಚಿತ್ರಾ ಕೃಷ್ಣಮೂರ್ತಿಗೆ ವ್ಯಕ್ತಿಯೊಬ್ಬನಿಂದ ಅಶ್ಲೀಲ ಮೆಸೇಜ್ | ಮುಂಬೈ ಪೊಲೀಸರ ಮೊರೆ ಹೋದ ಗಾಯಕಿ |  ದೂರು ದಾಖಲಿಸಿಕೊಂಡ ಸೈಬರ್ ಪೊಲೀಸರು 

ಸೋಷಿಯಲ್ ಮೀಡಿಯಾದಲ್ಲಿ ಹೆಣ್ಣು ಮಕ್ಕಳಿಗೆ ಅಶ್ಲೀಲವಾಗಿ ಮೆಸೇಜ್ ಮಾಡುವ, ಮಾನಸಿಕವಾಗಿ ಕಿರಿಕಿರಿ ಮಾಡುವ ಪ್ರಕರಣಗಳು ಹೆಚ್ಚಾಗುತ್ತಿವೆ. ಇದೀಗ ಗಾಯಕಿಯೊಬ್ಬರಿಗೆ ವ್ಯಕ್ತಿಯೊಬ್ಬ ಅಶ್ಲೀಲವಾಗಿ ಮೆಸೇಜ್ ಮಾಡಿರುವುದು ಬಹಿರಂಗವಾಗಿದೆ.

ಗಾಯಕಿ ಸುಚಿತ್ರಾ ಕೃಷ್ಣಮೂರ್ತಿಯವರಿಗೆ ವ್ಯಕ್ತಿಯೊಬ್ಬ ಅಶ್ಲೀಲವಾಗಿ ಮೆಸೇಜ್ ಮಾಡಿದ್ದಾನೆ. ರಾಷ್ಟ್ರೀಯ ಅಪರಾಧ ನಿಯಂತ್ರಣ ಮಂಡಳಿಯಲ್ಲಿ ಕೆಲಸ ಮಾಡುತ್ತಿರುವುದಾಗಿ ಪ್ರೊಫೈಲ್ ನಲ್ಲಿ ಬರೆದುಕೊಂಡಿರುವ ವ್ಯಕ್ತಿಯೊಬ್ಬ, ಕೃಷ್ಣಮೂರ್ತಿ ಸೆಕ್ಸ್ ಮಾಡಲು ಬರುತ್ತೀಯಾ ಎಂದು ಅಶ್ಲೀಲವಾಗಿ ಮೆಸೇಜ್ ಮಾಡಿದ್ದಾನೆ. 

 

ಇವನ ಮೆಸೇಜ್ ಸ್ಕ್ರೀನ್ ಶಾಟ್ ತೆಗೆದು ಸುಚಿತ್ರಾ ಕೃಷ್ಣಮೂರ್ತಿ ಮುಂಬೈ ಪೊಲೀಸರಿಗೆ ಟ್ಯಾಗ್ ಮಾಡಿ, ವ್ಯಕ್ತಿಯೊಬ್ಬ ಅಸಭ್ಯವಾಗಿ ಮೆಸೇಜ್ ಮಾಡಿ  ಕಿರುಕುಳ ನೀಡುತ್ತಿದ್ದಾನೆ. ದಯವಿಟ್ಟು ಇದ ನ್ನು ಪರಿಗಣಿಸಿ ಎಂದು ಬರೆದುಕೊಂಡಿದ್ದಾರೆ. 

ಮೇಡಂ ನಾವು ನಿಮ್ಮನ್ನು ಫಾಲೋ ಮಾಡುತ್ತಿದ್ದೇವೆ. ಇದನ್ನು ನಾವು ಸೈಬರ್ ಪೊಲೀಸರಿಗೆ ತಿಳಿಸಿದ್ದೇವೆ. ಅಗತ್ಯ ಕ್ರಮ ಕೈಗೊಳ್ಳಲಿದ್ದಾರೆ ಎಂದು ಸಪೋರ್ಟ್ ಮಾಡಿದ್ದಾರೆ. 

ಸುಚಿತ್ರಾ ಕೃಷ್ಣಮೂರ್ತಿ ಡೋಲೆ ಡೋಲೆ, ಡಮ್ ತಾರಾ, ಆಹಾ, ಜಿಂದಗಿ ಆಲ್ಬಮ್ ಗಳಲ್ಲಿ ಹಾಡಿದ್ದಾರೆ.   

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

Karna Serial ನಿಧಿ ಅರೆಸ್ಟ್​: ಪೊಲೀಸರು ಬಂಧಿಸಿ ಜೈಲಿಗೆ ಹಾಕಿದ್ದೇಕೆ? ಅಷ್ಟಕ್ಕೂ ಆಗಿದ್ದೇನು?
ಅಬ್ಬಬ್ಬಾ! ಟ್ವಿಸ್ಟ್‌ ಅಂದ್ರೆ ಇದಪ್ಪಾ- ಎದ್ದು ಬಂದ ಸತ್ತ ಸಂಧ್ಯಾ: ಲಾಯರ್‌ ಭಾರ್ಗವಿನೇ ಜೈಲಿಗೆ ಹೋಗ್ತಾಳಾ?