‘ಮಗಳ ಜೊತೆ ಸೆಕ್ಸ್ ಎಜುಕೇಶನ್ ಬಗ್ಗೆ ಮಾತನಾಡಲು ಕಾಯುತ್ತಿದ್ದೇನೆ’

Published : Aug 03, 2019, 03:58 PM ISTUpdated : Aug 03, 2019, 04:09 PM IST
‘ಮಗಳ ಜೊತೆ ಸೆಕ್ಸ್ ಎಜುಕೇಶನ್ ಬಗ್ಗೆ ಮಾತನಾಡಲು ಕಾಯುತ್ತಿದ್ದೇನೆ’

ಸಾರಾಂಶ

ಸೆಕ್ಸ್ ಎಜುಕೇಶನ್ ಬಗ್ಗೆ ಧ್ವನಿ ಎತ್ತಿದ ಗಾಯಕ ಬಾದ್ ಶಾ | ಮಗಳು ವಯಸ್ಸಿಗೆ ಬಂದಾಗ ಸೆಕ್ಸ್ ಬಗ್ಗೆ ಮಾತನಾಡಲು ಕಾಯುತ್ತಿದ್ದೇನೆ ಎಂದ ಬಾದ್ ಶಾ | ಸೋಷಿಯಲ್ ಮೀಡಿಯಾದಲ್ಲಿ ಸದ್ದು ಮಾಡುತ್ತಿದೆ ಇವರ ಹೇಳಿಕೆ 

ಇಂಡಿಯನ್ ರ್ಯಾಪ್ ಸ್ಟಾರ್ ಬಾದ್ ಶಾ ಹೇಳಿಕೆಯೊಂದು ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಸದ್ದು ಮಾಡುತ್ತಿದೆ. 

‘ನನ್ನ ಮಗಳು ವಯಸ್ಸಿಗೆ ಬಂದಾಗ ಸೆಕ್ಸ್ ಬಗ್ಗೆ ಮಾತನಾಡುವುದನ್ನು ಕಾಯುತ್ತಿದ್ದೇನೆ‘ ಎಂದು ಬಾದ್ ಶಾ ಹೇಳಿದ್ದಾರೆ. ಅರೇ, ಇದೇನಿದು ಬಾದ್ ಶಾ ಯಾಕೆ ಹೀಗೆಲ್ಲಾ ಮಾತಾಡ್ತಾರೆ ಅಂದ್ಕೋಬೇಡಿ. ಇದಕ್ಕೆ ಅವರು ಸ್ಪಷ್ಟೀಕರಣವನ್ನೂ ನೀಡಿದ್ದಾರೆ. 

’ನೀವು ನಿಮ್ಮ ತಂದೆ- ತಾಯಿ ಬಳಿ ಸೆಕ್ಸ್ ಬಗ್ಗೆ ಮಾತನಾಡುತ್ತೀರಾ? ನಾನಂತೂ ಮಾತನಾಡುವುದಿಲ್ಲ. ಮಡಿವಂತಿಕೆಯನ್ನು ಬಿಟ್ಟು ಎಲ್ಲರೂ ಮಾತನಾಡಬೇಕು. ನನ್ನ ಮಗಳು ಒಂದು ವಯಸ್ಸಿಗೆ ಬಂದಾಗ ಸೆಕ್ಸ್ ಎಜುಕೇಶನ್ ಬಗ್ಗೆ ಮಾತನಾಡುವುದಕ್ಕೆ ಕಾಯುತ್ತಿದ್ದೇನೆ. ಅವಳಿಗೆ ಅದರ ಬಗ್ಗೆ ತಿಳುವಳಿಕೆ ಇರಬೇಕು. ಅಪ್ಪನಿಗೆ ಏನಾಗಿದೆ ಎಂದು ಅವಳಿಗೆ ವಿಚಿತ್ರ ಎನಿಸಬಹುದು. ಇದನ್ನು ಹೇಗೆ ಫನ್ ಮಾಡಬೇಕೆಂದು ನನಗೆ ಗೊತ್ತಿದೆ’ ಎಂದಿದ್ದಾರೆ. 

ಬಾದ್ ಶಾ, ಸೋನಾಕ್ಷಿ ಸಿನ್ಹಾ ಜೊತೆ ‘ಖಾಂದಾನಿ ಶಫಾಖಾನಾ’ ಎನ್ನುವ ಸಿನಿಮಾದಲ್ಲಿ ನಟಿಸಿದ್ದಾರೆ. ಆಗಸ್ಟ್ 2 ರಂದು ಈ ಚಿತ್ರ ತೆರೆಗೆ ಬರಲಿದೆ. 

ಸೆಕ್ಸ್ ಕ್ಲಿನಿಕ್ ವೊಂದರಲ್ಲಿ ಸೋನಾಕ್ಷಿ ಸಿನ್ಹಾ ಕೆಲಸ ಮಾಡುತ್ತಿರುತ್ತಾರೆ. ಭಾರತೀಯ ಸಮಾಜ ಸೆಕ್ಸ್ ಬಗ್ಗೆ ಇನ್ನೂ ಹೇಗೆ ಮೂಢನಂಬಿಕೆ ಇಟ್ಟುಕೊಂಡಿದೆ? ಮಡಿವಂತಿಕೆ ಇಟ್ಟುಕೊಂಡಿದೆ ಎಂಬುದನ್ನು ಈ ಸಿನಿಮಾದಲ್ಲಿ ತೋರಿಸಲಾಗಿದೆ. 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

Aadi Lakshmi Purana Serial: ವಿರುದ್ಧ ದಿಕ್ಕಿನಲ್ಲಿ ಸಾಗುವ, ಒಬ್ಬರನ್ನೊಬ್ಬರು ಕಂಡರೆ ಆಗದವ್ರು ಮದುವೆಯಾಗುವ ಕಥೆ
ಅತ್ತ ಪಂಚೆ ಉದುರಿ ಹೋಗುತ್ತಿದೆ.. ಇತ್ತ ಕುಣಿದು ಕುಪ್ಪಳಿಸಿ ಇಳಯರಾಜಾ ಕಂಪೋಸ್ ಮಾಡಿದ ಮಜವಾದ ಹಾಡು ಯಾವುದು?