ಅನೂಪ್‌ಗೆ ಕಮರ್ಷಿಯಲ್‌ ಬ್ರೇಕ್‌ ಕೊಟ್ಟ ಶಿವಣ್ಣ!

Published : Jun 25, 2019, 09:26 AM IST
ಅನೂಪ್‌ಗೆ ಕಮರ್ಷಿಯಲ್‌ ಬ್ರೇಕ್‌ ಕೊಟ್ಟ ಶಿವಣ್ಣ!

ಸಾರಾಂಶ

ಚಿತ್ರಗಳಿಗೆ ಹಾರರ್‌ ಮಾಡುವುದರಲ್ಲಿ ಸಾಕಷ್ಟುಹೊಸತನ ತೋರುವ ಅನೂಪ್‌ ಸೀಳಿನ್‌ ತುಂಬಾ ಗ್ಯಾಪ್‌ನ ನಂತರ ಮತ್ತೊಂದು ಕಮರ್ಷಿಯಲ್‌ ಹಿಟ್‌ ಕೊಡುವ ಸೂಚನೆ ಕೊಟ್ಟಿದ್ದಾರೆ. ಪ್ರಯೋಗಾತ್ಮಕ ಹಾಗೂ ಹೊಸ ಅಲೆಯ ಚಿತ್ರಗಳಲ್ಲೇ ಹೆಚ್ಚು ಗಮನ ಸೆಳೆಯುತ್ತಿದ್ದ ಅನೂಪ್‌, ಈಗ ‘ರುಸ್ತುಂ’ ಮೂಲಕ ಸೌಂಡು ಮಾಡುತ್ತಿದ್ದಾರೆ. 

ಸಂಗೀತದಷ್ಟೆಅದ್ಭುತವಾಗಿ ಹಾಡುವ ಪ್ರತಿಭೆಯೂ ಆಗಿರುವ ಅನೂಪ್‌ ಸಂಗೀತ ಸಂಯೋಜನೆಯ ‘ಪೊಲೀಸ್‌ ಬೇಬಿ’ ಹಾಡು ಈಗಾಗಲೇ ಒಂದು ಮಿಲಿಯನ್‌ ಗಡಿ ದಾಟಿದೆ. ‘ಭಲೆ ಭಲೆ’ ಹಾಡುಗಳ ಯಶಸ್ಸಿನ ಗುಂಗಿನಲ್ಲೇ ಮತ್ತೊಂದು ಹಾಡನ್ನು ಯೂಟ್ಯೂಬ್‌ನಲ್ಲಿ ಬಿಡುಗಡೆ ಮಾಡಿದ್ದಾರೆ. ಈ ಹಾಡು ಕೂಡ ದೊಡ್ಡ ಮಟ್ಟದಲ್ಲಿ ಹಿಟ್‌ ಆಗುತ್ತದೆಂಬ ನಂಬಿಕೆ ಅನೂಪ್‌ ಸೀಳಿನ್‌ ಅವರದ್ದು.

ನಾನು ಕಮರ್ಷಿಯಲ್‌ ಸಿನಿಮಾಗಳಿಗೆ ಹೆಚ್ಚು ಸಂಗೀತ ನೀಡಿಲ್ಲ ಎನ್ನುವ ಅಪವಾದವನ್ನು ಈ ಚಿತ್ರ ದೂರ ಮಾಡಲಿದೆ. ಆ ಮಟ್ಟಿಗೆ ಹಾಡುಗಳು ಬಂದಿವೆ. ನನಗೆ ಇದು ಕಮ್‌ ಬ್ಯಾಕ್‌ ಸಿನಿಮಾ ಆಗುವ ಭರವಸೆ ಇದೆ. ಈಗಾಗಲೇ ಪೊಲೀಸ್‌ ಬೇಬಿ ಹಾಡು ಸೂಪರ್‌ ಹಿಟ್‌ ಆಗಿದೆ. ಅದೇ ರೀತಿ ಈ ಹಾಡು ಕೂಡ ಯಶಸ್ಸು ಕಾಣುತ್ತದೆಂಬ ನಂಬಿಕೆ ಇದೆ.- ಅನೂಪ್‌ ಸೀಳಿನ್‌

ಕೈಲಾಶ್‌ ಖೇರ್‌ ಹಾಡಿರುವ, ಬಿಆರ್‌ ಲಕ್ಷ್ಮಣರಾವ್‌ ರಚನೆಯ ‘ದೇವರೇ ಅಗಾಧ ನಿನ್ನ ಕರುಣೆಯ ಕಡಲು’ ಎನ್ನುವ ಹಾಡು ಈಗಷ್ಟೆಅನಾವರಣಗೊಂಡಿದೆ. ಭಕ್ತಿ ಮತ್ತು ಭಾವುಕತೆಯ ದಾಟಿಯಲ್ಲಿ ಸಾಗುವ ಈ ಹಾಡು ಚಿತ್ರದ ಕತೆಗೆ ಮಹತ್ವದ ತಿರುವು ಕೊಡುತ್ತದೆಂಬುದು ಅನೂಪ್‌ ಮಾತು. ರವಿವರ್ಮ ನಿರ್ದೇಶನದ ಈ ಸಿನಿಮಾ ಸದ್ಯದಲ್ಲೇ ತೆರೆಗೆ ಬರಲಿದೆ. ಮೊದಲ ಬಾರಿಗೆ ಶಿವರಾಜ್‌ಕುಮಾರ್‌ ಹಾಗೂ ವಿವೇಕ್‌ ಒಬೆರಾಯ್‌ ಜತೆಯಾಗಿ ನಟಿಸಿದ್ದಾರೆ. ಶ್ರದ್ಧ ಶ್ರೀನಾಥ್‌ ನಾಯಕಿಯಾಗಿ ನಟಿಸಿದ್ದು, ಜಯಣ್ಣ ಈ ಚಿತ್ರವನ್ನು ನಿರ್ಮಿಸಿದ್ದಾರೆ.

 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

ನಾವು ಊಟಕ್ಕಾಗೇ ಮದುವೆಗೆ ಹೋಗ್ತೇವೆ, ಕರಣ್ ಜೋಹರ್ ಮದುವೆಗೆ ಹೋದ್ರೂ ಊಟ ಮಾಡಲ್ಲ, ಕಾರಣ ?!
ಸೊಂಟಕ್ಕೆ ಸನ್‌ಗ್ಲಾಸ್‌ ಸಿಕ್ಕಿಸಿಕೊಂಡು ನಟಿಯ ಪೋಸ್‌.. ಟ್ರೋಲಿಗರ ಕಾಮೆಂಟ್ಸ್‌ಗೆ ಕಂಗಾಲಾದ ಸೀರಿಯಲ್‌ ತಾರೆ!