(ವಿಡಿಯೋ) ಬಣ್ಣದ ಲೋಕದ ಅಸಲಿ ಮುಖ ಬಿಚ್ಚಿಟ್ಟ ಸ್ಟಾರ್ ನಟಿ : ಹೆಸರಾಂತ ಕನ್ನಡದ ನಾಯಕಿಯನ್ನು ಹಾಸಿಗೆಗೆ ಕರೆದರಾ?

Published : Aug 22, 2017, 07:40 PM ISTUpdated : Apr 11, 2018, 01:13 PM IST
(ವಿಡಿಯೋ) ಬಣ್ಣದ ಲೋಕದ ಅಸಲಿ ಮುಖ ಬಿಚ್ಚಿಟ್ಟ ಸ್ಟಾರ್ ನಟಿ : ಹೆಸರಾಂತ ಕನ್ನಡದ ನಾಯಕಿಯನ್ನು ಹಾಸಿಗೆಗೆ ಕರೆದರಾ?

ಸಾರಾಂಶ

ಚಿತ್ರರಂಗದ ಮೆಲೆ ಸ್ವಲ್ಪ ಅಸಮಾಧಾನವಿದ್ರೂ, ಅವರಿಗೆ ಸಿಕ್ಕ ಎಲ್ಲಾ ಚಿತ್ರತಂಡವರು ಒಳ್ಳಯವರಂತೆ. ಇತ್ತೀಚೆಗೆ ನಮ್ಮ ಇಂಡಸ್ಟ್ರಿ ಹೇಗಿದೆ ಅಂದರೆ ಸಿಂಧು ಭಯಂಕರ ಸತ್ಯ ಬಿಚ್ಚಿಟ್ಟರು.

ಸಿಂಧುಲೋಕನಾಥ್ ಕನ್ನಡ ಚಿತ್ರರಂಗದಲ್ಲಿ ತನ್ನದೆ ಟ್ಯಾಲೆಂಟ್ ಮೂಲಕ ಗುರುತ್ತಿಸಿಕೊಂಡ ನಟಿ. ಪರಿಚಯ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಪರಿಚಯವಾದ ಈ ಬ್ಯೂಟಿ ಲೈಫು ಇಷ್ಟೆನೆ ಚಿತ್ರದ ಮೂಲಕ ಹೆಚ್ಚಾಗಿ ಗುರುತಿಸಿಕೊಂಡಿದ್ದಾರೆ. ಯಾರೆ ಕೂಗಾಡಲಿ,ಕಾಫಿ ವಿತ್ ಮೈ ವೈಫ್, ಎಂದೆಂದೂ ನಿನಗಾಗಿ ಹೀಗೆ ಸಾಕಷ್ಟು ಸಿನಿಮಾಗಳಲ್ಲಿ ನಟಿಸಿದ  ಸಿಂಧು ಲೋಕನಾಥ್ ಗೆ ಮತ್ತೆ ಬ್ರೇಕ್ ಕೊಟ್ಟ ಚಿತ್ರ ಡ್ರಾಮಾ.

ಸಿಂಧುಲೋಕ್ ನಾಥ್  ನಿನಾಸಂ ಸತೀಶ್ ಜೊತೆ ನಟಿಸಿದ ಲವ್ ಇನ್ ಮಂಡ್ಯ ಪರವಾಗಿಲ್ಲ ಅನ್ನಿಸಿಕೊಂಡಿತ್ತು.ನಟ ಕೃಷ್ಣ ಅಜಯ್ ರಾವ್ ಜೊತೆ ಜೈ ಭಜರಂಗಿ ಸಿನಿಮಾನ್ನೂ ಮಾಡಿದ್ದರು. ಒಂದೆರಡು ತಮಿಳು ಚಿತ್ರಗಳಲ್ಲಿ ನಟಿಸಿದ್ದರು. ಅಷ್ಟೆ ಅಲ್ಲ ಕನ್ನಡ ಮತ್ತೊಂದಿಷ್ಟು ಸಿನಿಮಾಗಳಲ್ಲಿ ಅತಿಥಿ ಪಾತ್ರದಲ್ಲೂ ಬಂದು ಹೋದರು. ಆದ್ಯಾಕೋ ಇತ್ತೀಚಿಗೆ ಸಿಂಧುಲೋಕನಾಥ್ ಸಿನಿಮಾಗಳಲ್ಲಿ ಕಾಣಿಸಿಕೊಳ್ಳದು  ಕಡಿಮೆಯಾಗಿದೆ. ಪಾತ್ರಗಳ ಆಯ್ಕೆ ಸಿಂಧು ಸಖತ್ ಚ್ಯೂಸಿ ಯಾಗಿದ್ದಾರಾ?

ಭಯಂಕರ ಸತ್ಯ ಬಿಚ್ಚಿಟ್ಟ ನಟಿ

ಸಿಂಧು ಲೋಕನಾಥ್ ಒಳ್ಳೆ ನಟಿಯಾಗಿ ಕೆಲಸ ಮಾಡೋಕ್ಕೆ ಇಷ್ಟಪಡ್ತಾರೆ. ಚಿತ್ರರಂಗದ ಮೆಲೆ ಸ್ವಲ್ಪ ಅಸಮಾಧಾನವಿದ್ರೂ, ಅವರಿಗೆ ಸಿಕ್ಕ ಎಲ್ಲಾ ಚಿತ್ರತಂಡವರು ಒಳ್ಳಯವರಂತೆ. ಇತ್ತೀಚೆಗೆ ನಮ್ಮ ಇಂಡಸ್ಟ್ರಿ ಹೇಗಿದೆ ಅಂದರೆ ಸಿಂಧು ಭಯಂಕರ ಸತ್ಯ ಬಿಚ್ಚಿಟ್ಟರು. ಈ ವಿಚಾರವನ್ನು ಸಿಂಧು  ನಮ್ಮ ಸುವರ್ಣ ನ್ಯೂಸ್ ಪ್ರತಿನಿಧಿ ಜೊತೆ ಹಂಚಿಕೊಂಡಿದ್ದು ಹೀಗಿತ್ತು.

ಚಿತ್ರರಂಗದ ಭಯಂಕರ ಸತ್ಯ'ವಿದು. ಅವಕಾಶ ಕೇಳಿದರೆ ಕೆಲ ನಿರ್ಮಾಪಕರು ಹಾಸಿಗೆಗೆ ಕರೆಯುತ್ತಾರಂತೆ.ಈ ಬಗ್ಗೆ ತುಂಬಾ ಬೇಸರವಿದೆ ಎನ್ನುತ್ತಾರೆ.ಸದ್ಯ ಸಿನಿಮಗಳಲ್ಲಿ ತೋಡಗಿಸಿಕೊಂಡಿರೋ ಸಿಂಧುಗೆ ಲವ್, ಮದುವೆ ಚಿಂತೆ ಸದ್ಯಕಿಲ್ವಂತ್ತೆ. ತಮ್ಮ ಕಂಪ್ಲೀಟ್ ಫೋಕಸ್ ಸಿನಿಮಾದಲ್ಲಿ ಇದೆಯಂತೆ.

ಒಟ್ಟಾರೆ ಸಿಂಧು ಸಿನಿಮಾಗಳ ಹಿಂದಿರೋ ಒಂದಷ್ಟು ಸತ್ಯವನ್ನ ಬಿಚ್ಚಿಟ್ಟರು. ತಾನೊಬ್ಬಳು ನಟಿಯಾಗಿ ಚಿತ್ರರಂಗದಲ್ಲಿ ಗುತ್ತಿಸಿಕೊಳ್ಳೋದು ಸಾಕಷ್ಟಿದೆ, ಸಿನಿಮಾ , ಸಿನಿಮಾದ ಕಥೆ, ಪಾತ್ರಗಳು ಈಕೆಗೆ ಖುಷಿ ಕೊಟ್ರು , ಚಿತ್ರರಂಗದ ಮೇಲೆ ಸ್ವಲ್ಪ ಅಸಮಧಾನವಿದೆ. ಇದು  ಸಿಂಧು ಒಬ್ಬರ ಕಥೆಯಲ್ಲ, ಈ ರಿತಿಯ ಸಾಕಾಷ್ಟು ಪ್ರತಿಭಾವಂತ ನಟಿಯರ ದುರಾದೃಷ್ಟ ವ್ಯಥೆ ಇದೇ ರೀತಿ ಅಂದರೆ ತಪ್ಪಗಲಾರದು. ಕಲರ್'ಫುಲ್ ಲೋಕದಲ್ಲಿ ಬ್ಲಾಕ್ ಬೈಟ್ ದುನಿಯಾನೂ ಇದೆ ಅನ್ನೋಕ್ಕೆ ಇವರೆ ಸಾಕ್ಷಿಯಾಗಿದ್ದಾರೆ.

ವರದಿ: ಶೃತಿ, ಚಿಟ್'ಚಾಟ್: ರೇವಂತ್ ಜೇವೂರ್,ಸುವರ್ಣ ನ್ಯೂಸ್ 

 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

Bigg Boss ಮನೆಗೆ 'ಗಿಲ್ಲಿ ಅತ್ತೆ' ಆಗಮನ! ಧ್ವನಿ ಕೇಳಿ ಬಿಕ್ಕಿ ಬಿಕ್ಕಿ ಅತ್ತ ಅಶ್ವಿನಿ ಗೌಡ- ಗಿಲ್ಲಿಗೆ ಬುದ್ಧಿ ಮಾತು
Bigg Boss Kannada: ಕಾವ್ಯ - ಸ್ಪಂದನಾ ಕಂಡ್ರೆ ರಕ್ಷಿತಾಗೆ ಯಾಕಾಗಲ್ಲ, ರಜತ್‌ ಬಳಿ ಇದ್ಯಾ ಉತ್ತರ?