
ಬೆಂಗಳೂರು(ಆ.19): ಕನ್ನಡ ಚಿತ್ರರಂಗ ಹಾಗೂ ಕಿರುತೆರೆಯ ಹಿರಿಯ ನಟ ಟಿ.ವಿ.ಗುರುಮೂರ್ತಿ (70) ಶುಕ್ರವಾರ ಬೆಂಗಳೂರಿನಲ್ಲಿ ನಿಧನರಾದರು. ಹಲವಾರು ಕನ್ನಡದ ಸಿನಿಮಾಗಳು, ನಾಟಕಗಳು ಹಾಗೂ ಧಾರಾವಾಹಿಗಳಲ್ಲಿ ನಟಿಸಿದ್ದ ಅವರು ವಯೋಸಹಜ ಅನಾರೋಗ್ಯದಿಂದ ಮರಣ ಹೊಂದಿದ್ದಾರೆಂದು ತಿಳಿದುಬಂದಿದೆ. ಸಿನಿಮಾ ವಲಯದಲ್ಲಿ ಗುರುಮಾಮ ಎಂದೇ ಪ್ರಸಿದ್ಧರಾಗಿದ್ದ ಟಿ.ವಿ.ಗುರುಮೂರ್ತಿ ಅವರು ಮೂಲತಃ ಬ್ಯಾಂಕ್ ಉದ್ಯೋಗಿಯಾಗಿದ್ದರು. ಅಖಿಲ ಭಾರತ ಬ್ಯಾಂಕ್ ನೌಕರರ ಸಂಘದ ಅಧ್ಯಕ್ಷರೂ ಆಗಿದ್ದರು. ತುಮಕೂರಿನ ತಿಪಟೂರಿನವರಾದ ಇವರು ವೃತ್ತಿಗಿಂತ ಅಭಿನಯದಲ್ಲಿ ಹೆಚ್ಚು ಆಸಕ್ತಿ ಹೊಂದಿ,ಅಡಚಣೆಗಾಗಿ ಕ್ಷಮಿಸಿ, ಮಿ.ನಿರುದ್ಯೋಗಿ, ಒಂದು ಸುಳ್ಳು ಸಂಸಾರಕ್ಕೆ ಮುಳ್ಳು, ವೆಂಕಟರಮಣ ಗೋವಿಂದ, ಸಿಲ್ಲಿಲಲ್ಲಿ, ಪಾಂಡುರಂಗ ವಿಠಲ, ಪಾರ್ವತಿ ಪರಮೇಶ್ವರ, ಮುಕ್ತಮುಕ್ತ ಮುಂತಾದ ಧಾರಾವಾಹಿಗಳಲ್ಲಿ ನಟಿಸಿದ್ದರು.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.