ಗಂಡ ನನ್​ ಕೈಗೆನೇ ಸಿಕ್ತಿಲ್ಲ... ಮಗು ಮಾಡಿಕೊಳ್ಳುವ ಬಗ್ಗೆ ನಟಿ ಶುಭಾ ಪೂಂಜಾ ಹೇಳಿದ್ದೇನು?

Published : Aug 22, 2025, 01:11 PM IST
Shubha Poonja

ಸಾರಾಂಶ

ನಟಿ ಶುಭಾ ಪೂಂಜಾ ಮತ್ತು ಸುಮಂತ್ ಮದುವೆಯಾಗಿ ಐದು ವರ್ಷಗಳು ಕಳೆದಿವೆ. ಈಗ ಗಂಡ, ಮಗು ಮಾಡಿಕೊಳ್ಳುವ ಬಗ್ಗೆ ನಟಿ ಹೇಳಿದ್ದೇನು? 

ನಟಿ ಶುಭಾ ಪೂಂಜಾ ಮತ್ತು ಸುಮಂತ್ ಮದುವೆಯಾಗಿ ಐದು ವರ್ಷಗಳು ಕಳೆದಿವೆ. ಕೋವಿಡ್​ ಸಮಯದಲ್ಲಿಯೇ 2020ರಲ್ಲಿ ಹಸೆಮಣೆ ಏರಿದ್ದ ಈ ಜೋಡಿ ಮಂಗಳೂರಿನಲ್ಲಿ ಸರಳವಾಗಿ ವಿವಾಹವಾಗಿದ್ದರು. ಪ್ರೇಮಿಗಳ ದಿನದಂದು ನೀಡಿದ ವಿಶೇಷ ಸಂದರ್ಶನವೊಂದರಲ್ಲಿ ಮದುವೆ ದಿಢೀರ್ ಅಂತ ಮದುವೆಯಾಗಿದ್ದರು. ಇವರ ಮದುವೆಯ ಬಗ್ಗೆ ತಿಳಿಯದ ಫ್ಯಾನ್ಸ್​ ಅಂದು ದಿಢೀರ್​ ಅಂತ ಶಾಕ್​ ಆಗಿದ್ದು ಅಷ್ಟೇ ನಿಜ. ಅಷ್ಟಕ್ಕೂ ಕೆಲ ದಿನಗಳ ಬಳಿಕ ಮದುವೆಯ ಬಗ್ಗೆ ನಟಿ ಘೋಷಿಸಿದ್ದರು. ಬಿಗ್ ಬಾಸ್‌ನಿಂದ (Bigg Boss) ಬಂದ ಬಳಿಕ ಲಾಕ್‌ಡೌನ್ ಸಮಯದಲ್ಲಿ ಮನೆಯಲ್ಲೂ ಮದುವೆ ಮಾಡಿಕೊಳ್ಳಿ ಎನ್ನುತ್ತಿದ್ದರು. ಹತ್ತೇ ಹತ್ತು ಜನ ಇದ್ದರೂ ಪರ್ವಾಗಿಲ್ಲ ಸಿಂಪಲ್ ಆಗಿ ಮದುವೆ ಮಾಡಿಕೊಳ್ಳಬೇಕು ಮನೆಯಲ್ಲಿ ಮದುವೆ ಆಗೋಣ ಆಮೇಲೆ ಎಲ್ಲರಿಗೂ ಪಾರ್ಟಿ ಅರೇಂಜ್ ಮಾಡೋಣ ಎಂದು ನಿರ್ಧಾರ ಮಾಡಿದ್ವಿ. ಎರಡು ದಿನಗಳ ಮುನ್ನ ಮದುವೆ ಪ್ಲ್ಯಾನ್ ಮಾಡಲಾಗಿತ್ತು ಎಂದು ಅಂದು ನಡೆದ ಮದುವೆಯ ಬಗ್ಗೆ ಈ ಹಿಂದೆ ಮಾತನಾಡಿದ್ದರು ಶುಭಾ.

ಮದುವೆಯಾಗಿ ಐದು ವರ್ಷವಾಗಿದ್ದು, ಮಕ್ಕಳ ಬಗ್ಗೆ ಯೋಚನೆ ಮಾಡಿದ್ದೀರಾ ಎಂದು ಕೇಳಿರುವ ಪ್ರಶ್ನೆಗೆ ಶುಭಾ ಅವರು, ಆ ಬಗ್ಗೆ ಇನ್ನೂ ಯೋಚನೆ ಮಾಡಿಲ್ಲ. ಮಾಡಬೇಕು ಎಂದಿದ್ದಾರೆ. ಇದೇ ವೇಳೆ ಇದಾಗಲೇ ಹಲವರಿಗೆ ತಿಳಿದಿರುವಂತೆ ಶುಭಾ ಅವರು ಶ್ವಾನ ಮತ್ತು ಇತರ ಪ್ರಾಣಿ ಪ್ರೇಮಿ. ಈಚೆಗೆ ನಾಯಿಗಳ ಕುರಿತು ಸುಪ್ರೀಂಕೋರ್ಟ್​ ತೀರ್ಪು ಕೊಟ್ಟಾಗಲೂ ಅವರು ನಾಯಿಗಳ ಪರವಾಗಿ ಹೇಳಿಕೆ ಕೊಟ್ಟಿದ್ದರು. ಈಗಲೂ ಅದನ್ನೇ ಹೇಳಿರೋ ನಟಿ, ನನಗೆ ನಾಯಿಗಳು ಎಂದರೆ ತುಂಬಾ ಇಷ್ಟ. ಒಂದು ವೇಳೆ ಮಕ್ಕಳಾದರೂ, ನನ್ನ ಪ್ರೀತಿ ಪ್ರಾಣಿಗಳ ಮೇಲೆಯೇ ಹೆಚ್ಚು ಇರುತ್ತದೆ ಎಂದಿದ್ದಾರೆ. ಇದೇ ವೇಳೆ ಪತಿಯ ಬಗ್ಗೆಯೂ ತಮಾಷೆ ಮಾಡಿರುವ ನಟಿ, ನನ್ನ ಕೈಗೆನೇ ಅವರು ಸಿಗುತ್ತಿಲ್ಲ. ಅದಕ್ಕಾಗಿ ನಾನು ತುಂಬಾ ಕೋಪ ಮಾಡಿಕೊಳ್ಳುತ್ತಿದ್ದೇನೆ. ಹೊಸ ಬಿಸಿನೆಸ್​ ಶುರು ಮಾಡಿದ್ದಾರೆ. ಅವರ ಡೇಟ್ಸ್​ಗಾಗಿ ನಾನೇ ಕಾಯುವಂತಾಗಿದೆ ಎಂದಿದ್ದಾರೆ.

ಪತಿಗೆ ಹೋಲಿಸಿದರೆ ತಾವೇ ತುಂಬಾ ರೊಮ್ಯಾಂಟಿಕ್​ ಎಂದು ಕೂಡ ನಟಿ ಹೇಳಿಕೊಂಡಿದ್ದಾರೆ. ಈ ಹಿಂದೆ ಶುಭಾ ಅವರು, ತಮ್ಮ ಪತಿಗೆ ಹೇಗೆ ಟಾರ್ಚರ್​ ಕೊಡುತ್ತೇವೆ ಎಂದು ಮಾತನಾಡಿದ್ದರು. ಒಂದು ವೇಳೆ ಮತ್ತೊಮ್ಮೆ ಬಿಗ್​ಬಾಸ್​ಗೆ ಆಫರ್​ ಬಂದರೆ ಏನು ಮಾಡ್ತೀರಾ ಎಂಬ ಪ್ರಶ್ನೆಗೆ ಶುಭಾ, ಅಬ್ಬಾ ನಾನಂತೂ ತುಂಬಾ ಅವರಿಗೆ ಟಾರ್ಚರ್​ ಕೊಡ್ತೇನೆ. ಇನ್ನೊಮ್ಮೆ ಏನಾದ್ರೂ ಬಿಗ್​ಬಾಸ್​ಗೆ ಆಫರ್​ ಬಂದ್ರೆ ಅವರು ದುಡ್ಡು ಕೊಡುವುದು ಬೇಡ, ನಾನೇ ದುಡ್ಡು ಕೊಟ್ಟು ನಿನ್ನನ್ನು ಕಳಿಸುತ್ತೇನೆ. ಪ್ರತಿವಾರ ನೀನು ಅಲ್ಲಿಯೇ ಇರಲು ದುಡ್ಡು ಕೊಡ್ತಾನೇ ಇರ್ತೇನೆ. ನೂರು ದಿನವೂ ಅಲ್ಲೇ ಇರುವಂತೆ ಮಾಡುತ್ತೇನೆ ಎಂದಿದ್ದಾರೆ ಎನ್ನುವ ಮೂಲಕ ಜೋರಾಗಿ ನಗಿಸಿದ್ದರು ನಟಿ.

ಇನ್ನು ತಮ್ಮ ಮದುವೆಯಾಗಿದ್ದ ಮಾತನಾಡಿದ್ದ ಅವರು, ಎರಡು ದಿನದ ಮುನ್ನ ಮದುವೆ ಪ್ಲ್ಯಾನ್ ಆಗಿದ್ದು. ನಾವು ವಾಸ ಮಾಡುತ್ತಿದ್ದ ಮನೆ 800 ವರ್ಷ ಹಳೆ ಮನೆ. ಫುಲ್ ಪೇಂಟ್ ಬಿದ್ದಿತ್ತು, ಗೋಡೆ ಸರಿಯಾಗಿಲ್ಲ ಏನೂ ಇಲ್ಲ. ಏನ್ ಚಿನ್ನಿ ಇಲ್ಲಿ ಮದುವೆಯಾಗಿ ಒಂದು ಫೋಟೋ ತೆಗೆದರೂ ಹೇಗಿರುತ್ತೆ ಅಂದ. ಮದುವೆ ಹಿಂದಿನ ದಿನ ಫುಲ್ ಪೇಂಟ್ ಮಾಡಿದ್ದಾರೆ. ಮದುವೆ ಬಂದ ಗೆಸ್ಟ್ ಸೆಲೆಬ್ರಿಟಿ ಮಂಜು ಮತ್ತು ರಾಘು ಬಂದರು ಅವರಿಂದಲೂ ಪೇಂಟ್ ಮಾಡಿಸಲಾಗಿತ್ತು ಎಂದಿದ್ದರು. ಮದುವೆಯ ದಿನ ರಾತ್ರಿ 8 ಗಂಟೆಗೆ ಹೂ ತರಲು ಮಾರ್ಕೆಟ್‌ಗೆ ಹೋಗಲಾಗಿತ್ತು. ತುಂಬಾ ಬಾಡಿರುವ ಹೂವುಗಳು ಇದ್ದವು. ಅದನ್ನೇ ಖರೀದಿ ಮಾಡಿದ್ರು. ಅದಕ್ಕಾಗಿಯೇ ನಮ್ಮ ಮದುವೆ ಹಾರ ಕೂಡ ಬಾಡಿದೆ. ಮದುವೆ ಪಟ್ ಪಟ್ ಅಂತ ಮುಗಿದೇ ಹೋಯ್ತು. ಅಷ್ಟರಲ್ಲಿ ಸುಮಂತ್ ಪಂಚೆ ಬಿಚ್ಚಿ ಶಾರ್ಟ್- ಬನಿಯನ್ ಹಾಕೊಂಡು ಬಂದ. ಹೀಗಾಗಿ ನನ್ನ ಮದುವೆ ಫೋಟೋ ಅಂತ ಇರುವುದು ಕೇವಲ ನಾಲ್ಕು ಅಷ್ಟೆ. ಮೀಡಿಯಾದವರು ಕರೆ ಮಾಡಿ ಫೋಟೋ ಕಳುಹಿಸಿ ಎನ್ನುತ್ತಿದ್ದರು. 4 ಫೋಟೋ ಇದೆ ಅದು ಬಿಟ್ಟು ಬೇರೆ ಕೊಡಿ ಎಂದು ದುಂಬಾಲು ಬಿದ್ದಿದ್ದರು. ನಮ್ಮ ಬಳಿ ಇದ್ರೆ ತಾನೇ ಕೊಡೋದು? ನಮ್ಮ ಅಮ್ಮ ಅವರ ಅಪ್ಪ ಅಮ್ಮ ಜೊತೆಗೂ ಸುಮಂತ್ ಫೋಟೋ ತೆಗೆಸಿಕೊಂಡಿಲ್ಲ. ಮುಂದೆ ಮಕ್ಕಳು ಅಮ್ಮ ಮದುವೆ ಫೋಟೋ ವಿಡಿಯೋ ತೋರಿಸಿ ಎಂದು ಕೇಳಿದರೆ ಆ ನಾಲ್ಕು ಫೋಟೋ ಅಷ್ಟೇ ತೋರಿಸಬೇಕು ಎಂದು ತಮಾಷೆ ಮಾಡಿದ್ದರು ಶುಭಾ. ಅವರು ಬಾಸ್​ಟಿವಿಗೆ ನೀಡಿರುವ ಸಂದರ್ಶನ ಈ ಕೆಳಗೆ ಇದೆ...

 

 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಅತ್ತ ಪಂಚೆ ಉದುರಿ ಹೋಗುತ್ತಿದೆ.. ಇತ್ತ ಕುಣಿದು ಕುಪ್ಪಳಿಸಿ ಇಳಯರಾಜಾ ಕಂಪೋಸ್ ಮಾಡಿದ ಮಜವಾದ ಹಾಡು ಯಾವುದು?
Lakshmi Nivasa: ಇವಳೇ ಅವಳು, ಮನೆಯಲಿ ಇಷ್ಟುದಿನ ಇದ್ದವಳು! ಸತ್ಯ ರಿವೀಲ್​ ಆಗೋಯ್ತು, ಬಾಯಿ ಬಿಡ್ತಾಳಾ ವಿಶ್ವನ ಅಮ್ಮ?