
ಡೈರೆಕ್ಟರ್ ಪ್ರೇಮ್ ನಿರ್ದೇಶನದ 'ದಿ ವಿಲನ್' ಚಿತ್ರದಲ್ಲಿ ಒಳ್ಳೆಯ ಸ್ನೇಹಿತರಂತೆ ಕಾಣಿಸಿಕೊಂಡ ಶಿವರಾಜ್‌ಕುಮಾರ್ ಹಾಗೂ ಕಿಚ್ಚ ಸುದೀಪ್ ವರಮಹಾಲಕ್ಷ್ಮಿ ಹಬ್ಬದಂದು ವಿಲನ್ ಆಗ್ತಾರಾ ಎಂಬುವುದು ಎಲ್ಲಾರ ಪ್ರಶ್ನೆ. ಅಷ್ಟಕ್ಕೂ ಅವರಿಬ್ಬರ ನಡುವೆ ಅಂತದ್ದೇನಾಯ್ತು ಅಂತೀರಾ?
ಕೃಷ್ಣ ನಿರ್ದೇಶನದ ಬಹು ನಿರಿಕ್ಷೀತ ’ಪೈಲ್ವಾನ್’ ಚಿತ್ರವನ್ನು ಚಿತ್ರತಂಡ ಆಗಸ್ಟ್ 9 ವರಮಹಾಲಕ್ಷ್ಮಿ ಹಬ್ಬದಂದು ಬಿಡುಗಡೆ ಮಾಡಲು ಸಿದ್ಧತೆ ಮಾಡಿಕೊಳ್ಳುತ್ತಿದೆ. ಮತ್ತೊಂದು ಕಡೆ ಪಿ.ವಾಸು ನಿರ್ದೇಶನದ ’ಆನಂದ್’ ಸಿನಿಮಾ ಕಳೆದ ವರುಷ ಅಂದ್ರೆ 2018 ದಿಸೆಂಬರ್‌ನಲ್ಲಿ ಮುಹೂರ್ತ ನಡೆದಿದ್ದು 2019 ಆಗಸ್ಟ್ 9 ರಲ್ಲಿ ರಿಲೀಸ್ ಮಾಡುವುದಾಗಿ ಪ್ಲ್ಯಾನ್ ಮಾಡಿಕೊಂಡಿದ್ದರು.
ಇಬ್ಬರು ಸ್ಟಾರ್ ನಟರ ಸಿನಿಮಾ ಒಟ್ಟಾಗಿ ಬಿಡುಗಡೆ ಆಗುತ್ತಿರುವುದರಿಂದ ಆಗಸ್ಟ್ 9 ರಂದು ಬಾಕ್ಸ್ ಆಫೀಸ್‌ನಲ್ಲಿ ಕ್ಲಾಶ್ ಆಗುವುದು ಗ್ಯಾರಂಟಿ!
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.