ಚಪ್ಪಾಳೆ ತಟ್ಟಿದ್ದು ನಿಜ, ಆದ್ರೆ ಕಮಲ್ ಹಾಸನ್ ಹೇಳಿಕೆ ಸಮರ್ಥಿಸಲ್ಲ; ವಿದಾದ ಬೆನ್ನಲ್ಲೇ ಶಿವಣ್ಣ ಸ್ಪಷ್ಟನೆ!

Published : May 31, 2025, 08:09 PM ISTUpdated : May 31, 2025, 08:15 PM IST
Kamal Haasan, ShivaRajkumar

ಸಾರಾಂಶ

'ಕಲಾವಿದನಾಗಿ ಭಾಷೆ ಬಗ್ಗೆ ಮಾತಾಡಿದಾಗ ಚಪ್ಪಾಳೆ ತಟ್ಟಿದ್ದೆ' ಎಂದು ಕೊನೆಗೂ ಕನ್ನಡ ಅವಮಾನದ ಬಗ್ಹೆ ಮೌನ ಮುರಿದಿದ್ದಾರೆ ನಟ, ಡಾ ರಾಜ್‌ಕುಮಾರ್ ಹಿರಿಯ ಮಗ ಶಿವಣ್ಣ. 'ಕಮಲಹಾಸನ್ ಹೇಳಿಕೆಯನ್ನ ಸಮರ್ಥನೆ ಮಾಡಿಕೊಳ್ಳಲ್ಲ' ಎಂದು ಇದೀಗ ನಟ ಶಿವರಾಜ್‌ಕುಮಾರ್ ಅವರು ಹೇಳಿದ್ದಾರೆ..

ಕಮಲಾಹಾಸನ್ ಇಂದ ಕನ್ನಡಕ್ಕೆ ಅವಮಾನ ವಿಚಾರ ಗಂಭೀರ ಸ್ವರೂಪ ಪಡೆದುಕೊಳ್ಳುತ್ತಿದ್ದಂತೆ ಇದೇ ಮೊದಲ ಬಾರಿಗೆ ಶಿವಣ್ಣ ರಿಯಾಕ್ಷನ್ ಮಾಡಿದ್ದಾರೆ. ಕರುನಾಡ ಚಕ್ರವರ್ತಿ ಖ್ಯಾತಿಯ ನಟ ಶಿವರಾಜ್‌ಕುಮಾರ್ 'ನಾನೇನು ಸಮರ್ಥನೆ ಮಾಡಿಕೊಳ್ಳಲ್ಲ.. ಭಾಷೆ ಮಾತಾಡ್ತಿದ್ದಾರೆ ಅಂದಾಗ ನಾನು ಕೈ ತಟ್ಟಿದ್ದು ನಿಜ.. ಆ ಸಂದರ್ಭದಲ್ಲಿ ಏನ್ ಮಾತಾಡ್ತಿದ್ದಾರೆ ಅಂತಾ ಗೊತ್ತಾಗ್ಲಿಲ್ಲ..

ಕನ್ನಡ ಅಭಿಮಾನದ ಬಗ್ಗೆ ಎಲ್ರೂ ಮಾತಾಡ್ತಿದ್ದಾರೆ, ಕನ್ನಡ ಅಭಿಮಾನ ಏನು ಅನ್ನೋದು ನಮಗೂ ಗೊತ್ತಿದೆ, ನಾನು ಕೂಡ ಕನ್ನಡ ಅಭಿಮಾನೀನೆ .. ಅಣ್ಣಾವ್ರ ಕನ್ನಡ ಅಭಿಮಾನ ನಿಮಗೆಲ್ಲರಿಗೂ ಗೊತ್ತೇ ಇದೆ. ಸ್ಟೇಜ್ ನಲ್ಲಿ ನೀವು ಯಾಕೆ ಪ್ರಶ್ನೆ ಮಾಡ್ಲಿಲ ಅಂದಾಗ,

ನನಗೆ ಸ್ಪಷ್ಟವಾಗಿ ಕೇಳಲಿಲ್ಲ ಅವ್ರು ಮಾತಾಡಿದ್ದು. ನೀವು ಆ ಬಗ್ಗೆ ಅವರನ್ನೇ ಪ್ರಶ್ನೆ ಮಾಡಬೇಕು' ಎಂದಿದ್ದಾರೆ ನಟ ಶಿವಣ್ಣ.

ಜೊತೆಗೆ, 'ಅಣ್ಣಾವ್ರು, ಅಣ್ಣಾವ್ರ ಕುಟುಂಬದ ಕನ್ನಡಾಭಿಮಾನ ಎಲ್ಲರಿಗೂ ಗೊತ್ತಿದೆ . ಆ ವಿಚಾರದ ಬಗ್ಗೆ ನಾನು ಸ್ಪಷ್ಟನೆ ಕೊಡಲ್ಲ. ಕಮಲಹಾಸನ್ ಮಾತಾಡಿದ್ದನ್ನ ನಾನು ಸಮರ್ಥನೆ ಮಾಡಿಕೊಳ್ಳಲ್ಲ. ಆ ಬಗ್ಗೆ ಅವರನ್ನೇ ಪ್ರಶ್ನೆ ಮಾಡಿ.. ನಾನು ಎರಡನೇ ಬಾರಿ ಕ್ಲಿಪ್ಪಿಂಗ್ ಕೇಳಿದಾಗಲೆ ಗೊತ್ತಾಗಿದ್ದು ನನಗೆ ನಡೆದ ವಿಷಯ. ಆ ಕಾರ್ಯಕ್ರಮದಲ್ಲಿ ಕಮಲಹಾಸನ್ ಮಾತಾಡಿದ್ದು ನನಗೆ ಗೊತ್ತಾಗಿಲ್ಲ, ಹೀಗಾಗಿ ಚಪ್ಪಾಳೆ ತಟ್ಟಿದೆ' ಎಂದಿದ್ದಾರೆ ಶಿವಣ್ಣ.

'ಕಲಾವಿದನಾಗಿ ಭಾಷೆ ಬಗ್ಗೆ ಮಾತಾಡಿದಾಗ ಚಪ್ಪಾಳೆ ತಟ್ಟಿದ್ದೆ' ಎಂದು ಕೊನೆಗೂ ಕನ್ನಡ ಅವಮಾನದ ಬಗ್ಹೆ ಮೌನ ಮುರಿದಿದ್ದಾರೆ ನಟ, ಡಾ ರಾಜ್‌ಕುಮಾರ್ ಹಿರಿಯ ಮಗ ಶಿವಣ್ಣ. 'ಕಮಲಹಾಸನ್ ಹೇಳಿಕೆಯನ್ನ ಸಮರ್ಥನೆ ಮಾಡಿಕೊಳ್ಳಲ್ಲ' ಎಂದು ಇದೀಗ ನಟ ಶಿವರಾಜ್‌ಕುಮಾರ್ ಅವರು ಹೇಳಿದ್ದಾರೆ. ಖಾಸಗಿ ಕಾರ್ಯಕ್ರಮ ಉದ್ಘಾಟನೆ ಕಾರ್ಯಕ್ರಮದಲ್ಲಿ ಶಿವರಾಜ್ ಕುಮಾರ್ ಈ ಹೇಳಿಕೆ ನೀಡಿದ್ದಾರೆ.

ಕಮಲ್ ಹಾಸನ್ ಅವರು ಕರ್ನಾಟಕದಲ್ಲಿಯೂ ಅಪಾರ ಅಭಿಮಾನಿಗಳನ್ನು ಹೊಂದಿದ್ದಾರೆ. ಅವರ ಚಿತ್ರಗಳು ಇಲ್ಲಿ ಉತ್ತಮ ಪ್ರದರ್ಶನ ಕಾಣುತ್ತವೆ. ಒಂದು ವೇಳೆ ಅವರ ಚಿತ್ರಗಳಿಗೆ ನಿಷೇಧ ಹೇರಿದರೆ, ಅದು ಅವರ ವೃತ್ತಿಜೀವನದ ಮೇಲೆ ಮತ್ತು ಚಿತ್ರದ ನಿರ್ಮಾಪಕರ ಮೇಲೆ ಆರ್ಥಿಕವಾಗಿ ದೊಡ್ಡ ಪರಿಣಾಮ ಬೀರಬಹುದು. ಅಲ್ಲದೆ, ಇದು ಕನ್ನಡ ಮತ್ತು ತಮಿಳು ಚಿತ್ರರಂಗಗಳ ನಡುವಿನ ಸೌಹಾರ್ದಯುತ ಸಂಬಂಧದ ಮೇಲೂ ಪರಿಣಾಮ ಬೀರುವ ಸಾಧ್ಯತೆಯಿದೆ.

ಕಮಲ್ ಹಾಸನ್ ಅವರ ಪ್ರತಿಕ್ರಿಯೆ ನಿರೀಕ್ಷೆ:

ಸದ್ಯಕ್ಕೆ ಈ ವಿವಾದದ ಬಗ್ಗೆ ಕಮಲ್ ಹಾಸನ್ ಅವರಿಂದ ಯಾವುದೇ ಅಧಿಕೃತ ಪ್ರತಿಕ್ರಿಯೆ ಬಂದಿಲ್ಲ. ಅವರು ಈ ಆರೋಪಗಳಿಗೆ ಹೇಗೆ ಉತ್ತರಿಸುತ್ತಾರೆ, ತಮ್ಮ ಹೇಳಿಕೆಯ ಬಗ್ಗೆ ಸ್ಪಷ್ಟನೆ ನೀಡುತ್ತಾರೆಯೇ ಅಥವಾ ಕ್ಷಮೆಯಾಚಿಸುತ್ತಾರೆಯೇ ಎಂಬುದು ಕುತೂಹಲ ಕೆರಳಿಸಿದೆ. ಅವರ ಪ್ರತಿಕ್ರಿಯೆಯ ನಂತರವೇ ಈ ವಿವಾದ ಯಾವ ತಿರುವು ಪಡೆದುಕೊಳ್ಳುತ್ತದೆ ಎಂಬುದು ನಿರ್ಧಾರವಾಗಲಿದೆ.

ಈ ಹಿಂದಿನ ವಿವಾದಗಳು:

ಕಮಲ್ ಹಾಸನ್ ಅವರು ಈ ಹಿಂದೆಯೂ ತಮ್ಮ ಕೆಲವು ಹೇಳಿಕೆಗಳಿಂದ ವಿವಾದಕ್ಕೆ ಒಳಗಾಗಿದ್ದರು. ಅವರ 'ವಿಶ್ವರೂಪಂ' ಚಿತ್ರವು ಬಿಡುಗಡೆಯ ಸಂದರ್ಭದಲ್ಲಿ ತಮಿಳುನಾಡಿನಲ್ಲಿ ತೀವ್ರ ವಿರೋಧ ಎದುರಿಸಿತ್ತು. ಈಗ ಕನ್ನಡದ ಕುರಿತಾದ ಹೇಳಿಕೆಯು ಅವರನ್ನು ಮತ್ತೊಂದು ವಿವಾದದ ಕೇಂದ್ರಕ್ಕೆ ತಂದು ನಿಲ್ಲಿಸಿದೆ.

ಒಟ್ಟಿನಲ್ಲಿ, ಕಮಲ್ ಹಾಸನ್ ಅವರಂತಹ ಹಿರಿಯ ಮತ್ತು ಗೌರವಾನ್ವಿತ ನಟರು ಯಾವುದೇ ಭಾಷೆ, ಸಂಸ್ಕೃತಿ ಅಥವಾ ಜನರ ಭಾವನೆಗಳಿಗೆ ಧಕ್ಕೆ ತರುವಂತಹ ಹೇಳಿಕೆಗಳನ್ನು ನೀಡುವಾಗ ಎಚ್ಚರಿಕೆ ವಹಿಸುವುದು ಅತ್ಯಗತ್ಯ ಎಂಬ ಅಭಿಪ್ರಾಯ ಬಹಳಷ್ಟು ಕಡೆಯಿಂದ ವ್ಯಕ್ತವಾಗುತ್ತಿದೆ. ಈ ವಿವಾದ ಮುಂದೆ ಯಾವ ತಿರುವು ಪಡೆದುಕೊಳ್ಳುತ್ತದೆ ಎಂಬುದನ್ನು ಕಾದು ನೋಡಲಾಗುತ್ತಿದೆ!

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಗಿಲ್ಲಿ ನಟನನ್ನು ಕೈಬಿಟ್ಟು ಗೋಲ್ಡ್ ಬೆನ್ನುಬಿದ್ದ ಬಿಗ್ ಬಾಸ್ ಡಾಗ್ ಸತೀಶ್!
ಗಡದ್ದಾಗಿ ನಲ್ಲಿಮೂಳೆ ತಿಂದು ಬಿಗ್‌ಬಾಸ್‌ ಮನೆಯಲ್ಲೇ ನಿದ್ರೆಗೆ ಜಾರಿ ಗಿಲ್ಲಿ ನಟ!