ಉಪೇಂದ್ರ ಹೊಸ ಚಿತ್ರಕ್ಕೆ ಎಂಟ್ರಿ ಕೊಟ್ಟಿದ್ದಾರೆ ಶಾನ್ವಿ ಶ್ರೀವಾಸ್ತವ್!

By Web DeskFirst Published Jul 28, 2018, 3:22 PM IST
Highlights

‘ಯಾವುದೇ ಸಿನಿಮಾ ಒಪ್ಪಿಕೊಂಡರೂ ನನ್ನ ಮೊದಲ ಆದ್ಯತೆ ಪಾತ್ರ. ಪಾತ್ರ ಚೆನ್ನಾಗಿದ್ದು, ಕತೆಯೂ ಸೊಗಸಾಗಿದೆ ಅಂದ್ರೆ ಸಂಭಾವನೆ ಮುಖ್ಯವೇ ಆಗೋದಿಲ್ಲ. ಆ ಬಗ್ಗೆ ತಲೆಕೆಡಿಸಿಕೊಳ್ಳದೇ ಪಾತ್ರಕ್ಕೆ ಓಕೆ ಹೇಳುವ ಸ್ವಭಾವ ನನ್ನದು. ಇಲ್ಲೂ ಹಾಗೆಯೇ ಆಯಿತು. ನಿರ್ದೇಶಕರು ಕ್ಯಾರೆಕ್ಟರ್ ಬಗ್ಗೆ ಹೇಳಿದ್ರು. ಆ ಮೇಲೆ ಕತೆ ಏನು ಅಂತ ವಿವರಿಸಿದ್ರು.ಎರಡೂ ಚೆನ್ನಾಗಿದ್ದವು. ಮೇಲಾಗಿ ಉಪ್ಪಿ ಸರ್ ಕಾಂಬಿನೇಷನ್. ಹಾಗಾಗಿ ಒಪ್ಪಿಕೊಂಡೆ’ ಎನ್ನುತ್ತಾರೆ ಶಾನ್ವಿ. 

ಬೆಂಗಳೂರು (ಜು. 28): ರವಿಚಂದ್ರನ್ ಹಾಗೂ ಉಪೇಂದ್ರ ಜೋಡಿಯ ಹೊಸ ಚಿತ್ರಕ್ಕೆ ಮತ್ತೊಬ್ಬರು ಸ್ಟಾರ್ ನಟಿ ಎಂಟ್ರಿ ಆಗಿದ್ದಾರೆ. ಓಂ ಪ್ರಕಾಶ್ ರಾವ್ ನಿರ್ದೇಶನದ ಈ ಚಿತ್ರದ ನಾಯಕಿ ಜಾಗಕ್ಕೆ ಬಹು ಬೇಡಿಕೆಯ ನಟಿ ಶಾನ್ವಿ ಶ್ರೀವಾಸ್ತವ್ ಬಂದಿದ್ದಾರೆ.

ಸದ್ಯಕ್ಕೆ ‘ಅವನೇ ಶ್ರೀಮನ್ನಾರಾಯಣ’ ಚಿತ್ರದಲ್ಲಿ ಬ್ಯುಸಿಯಾಗಿರುವ ಶಾನ್ವಿ,  ಈಗ ಓಂ ಪ್ರಕಾಶ್ ರಾವ್ ಚಿತ್ರದಲ್ಲಿ ಅಭಿನಯಿಸಲು ರೆಡಿ ಆಗುತ್ತಿದ್ದಾರೆ. ಈ ಹಿಂದೆ ಅವರು ಓಂಪ್ರಕಾಶ್ ರಾವ್ ನಿರ್ದೇಶನದ ‘ಚಂದ್ರಲೇಖಾ’ ಚಿತ್ರದಿಂದ ಕನ್ನಡಕ್ಕೆ  ಪರಿಚಯವಾಗಿದ್ದರು.

ಈ ಚಿತ್ರದಲ್ಲಿ ರವಿಚಂದ್ರನ್ ಮಗಳ ಪಾತ್ರದಲ್ಲಿ ಶಾನ್ವಿ ನಟಿಸುತ್ತಿದ್ದಾರೆ. ಉಳಿದಂತೆ ನಿಮಿಕಾ ರತ್ನಾಕರ್ ಅವರು ಈ ಚಿತ್ರದಲ್ಲಿ ನಟಿಸುತ್ತಿದ್ದಾರೆ. ರವಿಚಂದ್ರನ್ ಅವರಿಗೆ ನಿಮಿಕಾ ಜೋಡಿ ಎಂದೇ ಹೇಳಲಾಗಿದೆ. ಇನ್ನೊಂದು ಇಂಟರೆಸ್ಟಿಂಗ್
ವಿಚಾರವೆಂದರೆ ಕನಕಪುರ ಶ್ರೀನಿವಾಸ್ ನಿರ್ಮಾಣದ ಈ ಚಿತ್ರ ತೆಲುಗಿನ ‘ಬಲುಪು’ ಚಿತ್ರದ ರಿಮೇಕ್ ಅನ್ನುವ ಮಾತು ಕೇಳಿ ಬರುತ್ತಿರುವುದು. ರವಿತೇಜ ಮತ್ತು ಪ್ರಕಾಶ್ ರೈ ‘ಬಲುಪು’ ಚಿತ್ರದ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು.

ಅದೇ ಈಗ ಕನ್ನಡಕ್ಕೆ ಬರುತ್ತಿದೆ ಎನ್ನಲಾಗಿದ್ದು, ಸದ್ಯಕ್ಕಿನ್ನು ಈ ಚಿತ್ರಕ್ಕೆ ಹೆಸರಿಟ್ಟಿಲ್ಲ. ಇದೇ ಮೊದಲು ರವಿಚಂದ್ರನ್ ಹಾಗೂ ಉಪೇಂದ್ರ ಜತೆಗೆ ಅಭಿನಯಿಸುತ್ತಿದ್ದಾರೆ. ಓಂ ಪ್ರಕಾಶ್ ರಾವ್ ಈ ಚಿತ್ರವನ್ನು ಅದ್ಧೂರಿಯಾಗಿಯೇ ತೆರೆಗೆ ತರಲು
ನಿರ್ಧರಿಸಿದ್ದಾರಂತೆ. ಕನಕಪುರ ಶ್ರೀನಿವಾಸ್ ನಿರ್ಮಾಣ ಮಾಡುತ್ತಿರುವುದರಿಂದ ಅದ್ಧೂರಿ ಇದ್ದೇ ಇರುತ್ತೆ ಎನ್ನುವ ಮಾತುಗಳು ಇವೆ.

‘ಯಾವುದೇ ಸಿನಿಮಾ ಒಪ್ಪಿಕೊಂಡರೂ ನನ್ನ ಮೊದಲ ಆದ್ಯತೆ ಪಾತ್ರ. ಪಾತ್ರ ಚೆನ್ನಾಗಿದ್ದು, ಕತೆಯೂ ಸೊಗಸಾಗಿದೆ ಅಂದ್ರೆ ಸಂಭಾವನೆ ಮುಖ್ಯವೇ ಆಗೋದಿಲ್ಲ. ಆ ಬಗ್ಗೆ ತಲೆಕೆಡಿಸಿಕೊಳ್ಳದೇ ಪಾತ್ರಕ್ಕೆ ಓಕೆ ಹೇಳುವ ಸ್ವಭಾವ ನನ್ನದು. ಇಲ್ಲೂ ಹಾಗೆಯೇ ಆಯಿತು. ನಿರ್ದೇಶಕರು ಕ್ಯಾರೆಕ್ಟರ್ ಬಗ್ಗೆ ಹೇಳಿದ್ರು. ಆ ಮೇಲೆ ಕತೆ ಏನು ಅಂತ ವಿವರಿಸಿದ್ರು.ಎರಡೂ ಚೆನ್ನಾಗಿದ್ದವು. ಮೇಲಾಗಿ ಉಪ್ಪಿ ಸರ್ ಕಾಂಬಿನೇಷನ್. ಹಾಗಾಗಿ ಒಪ್ಪಿಕೊಂಡೆ’ ಎನ್ನುತ್ತಾರೆ ಶಾನ್ವಿ.

ಪಾತ್ರ ದೊಡ್ಡದಲ್ಲದಿದ್ದರೂ ನಟನೆಗೆ ಹೆಚ್ಚು ಅವಕಾಶ ಇದೆಯಂತೆ. ಉಪೇಂದ್ರ ಅವರ ಕಾಂಬಿನೇಷನಲ್ಲಿ ಅಭಿನಯಿಸುತ್ತಿದ್ದಾರಂತೆ. ಅದು ಕೂಡ ಖುಷಿ ಸಂಗತಿ ಅಂತಾರೆ. ಒಟ್ಟು 15 ದಿನಗಳ ಅವಧಿಯ ಚಿತ್ರೀಕರಣಕ್ಕೆ ಕಾಲ್‌ಶೀಟ್ ನೀಡಿದ್ದಾರಂತೆ.  

click me!