ಅತ್ತಿಗೆಯೊಂದಿಗೆ ಪಾರ್ಟಿಗೆ ಹೋಗಿ ಸಿಕ್ಕಾಕೊಂಡ ಮೈದುನ!

Published : Nov 17, 2018, 04:39 PM IST
ಅತ್ತಿಗೆಯೊಂದಿಗೆ ಪಾರ್ಟಿಗೆ ಹೋಗಿ ಸಿಕ್ಕಾಕೊಂಡ ಮೈದುನ!

ಸಾರಾಂಶ

ಶುಕ್ರವಾರದಂದು ಮುಂಬೈನ ಜುಹೂನಲ್ಲಿ ಇಶಾನ್ ತನ್ನ ಅತ್ತಿಗೆ ಜೊತೆ ಪಾರ್ಟಿಗೆ ತೆರಳಿದ್ದು, ಇಬ್ಬರೂ ಕ್ಯಾಮರಾ ಕಣ್ಣಿಗೆ ಬಿದ್ದಿದ್ದಾರೆ. ಈ ವೇಳೆ aತ್ತಿಗೆ ಹಾಗೂ ಮೈದುನ ಇಬ್ಬರೂ ಕ್ಯಾಮರಾಗೆ ಕೂಲ್ ಆಗಿಯೇ ಫೋಸ್ ನೀಡಿ, ಬಳಿಕ ತಮ್ಮ ಕಾರಿನಲ್ಲಿ ಕುಳಿತು ತೆರಳಿದ್ದಾರೆ.

ಬಾಲಿವುಡ್ ನಟ ಶಾಹಿದ್ ಕಪೂರ್ ಹೆಂಡತಿ ಮೀರಾ ರಜಪೂತ್ ಸಪ್ಟೆಂಬರ್ ತಿಂಗಳಿನ ಆರಂಭದಲ್ಲಿ ಎರಡನೇ ಮಗುವಿಗೆ ಜನ್ಮ ನೀಡಿದ್ದರು. ತಮ್ಮ ಮಗುವಿಗೆ ಜೈನ್ ಕಪೂರ್ ಎಂದು ನಾಮಕರಣ ಕೂಡಾ ಮಾಡಿದ್ದರು. ಶಾಹಿದ್ ಕಪೂರ್ ತನ್ನ ಮೊದಲ ಮಗು ಮೀಶಾ ಜೊತೆ ತೆಗೆಸಿಕೊಂಡ ಫೋಟೋಗಳನ್ನು ಇನ್ಸ್ಟಾಗ್ರಾಂನಲ್ಲಿ ಸಾಮಾನ್ಯವಾಗಿ ಶೇರ್ ಮಾಡುತ್ತಿರುತ್ತಾರೆ. ಇತ್ತ ಪತ್ನಿ ಮೀರಾ ರಜಪೂತ್ ಕೂಡಾ ಬಿ-ಟೌನ್‌ನಲ್ಲಿ ಸಾಕಷ್ಟು ಬಾರಿ ಕಾಣ ಸಿಗುತ್ತಾರೆ. ಇನ್ನು ಶಾಹಿದ್ ತಮ್ಮ ಇಶಾನ್ ಖಟ್ಟರ್ ಕೂಡಾ ತನ್ನ ಅತ್ತಿಗೆಯೊಂದಿಗೆ ಆತ್ಮೀಯವಾಗಿದ್ದಾನೆ, ಇಬ್ಬರ ನಡುವಿನ ಆತ್ಮೀಯತೆಗೆ ಶುಕ್ರವಾರ ವೈರಲ್ ಆದ ವಿಡಿಯೋ ಒಂದು ಉದಾಹರಣೆಯಂತಿದೆ.

ಶುಕ್ರವಾರದಂದು ಮುಂಬೈನ ಜುಹೂನಲ್ಲಿ ಇಶಾನ್ ತನ್ನ ಅತ್ತಿಗೆ ಮೀರಾ ಜೊತೆ ಪಾರ್ಟಿಗೆ ತೆರಳಿದ್ದು, ಇಬ್ಬರೂ ಕ್ಯಾಮರಾ ಕಣ್ಣಿಗೆ ಬಿದ್ದಿದ್ದಾರೆ. ಈ ವೇಳೆ ಅತ್ತಿಗೆ ಹಾಗೂ ಮೈದುನ ಇಬ್ಬರೂ ಕ್ಯಾಮರಾಗೆ ಕೂಲ್ ಆಗಿಯೇ ಫೋಸ್ ನೀಡಿ, ಬಳಿಕ ತಮ್ಮ ಕಾರಿನಲ್ಲಿ ಕುಳಿತು ತೆರಳಿದ್ದಾರೆ. ಸದ್ಯ ಈ ವಿಡಿಯೋ ವೈರಲ್ ಆಗಿದ್ದು, ಅತ್ತಿಗೆಯೊಂದಿಗಿದ್ದ ಇಶಾನ್ ಕ್ಯಾಮರಾದೆದುರು ವ್ಯಕ್ತಪಡಿಸಿದ ಆ ಪ್ರಬುದ್ಧ ನಡವಳಿಕೆ ನೋಡುಗರ ಮನಗೆದ್ದಿದೆ. 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

ರಾಜ್ ನಿಧಿಮೋರುಗಾಗಿ ಧರ್ಮ ಬದಲಾಯಿದ್ರಾ ಸಮಂತಾ? ಮದುವೆಯ ರಹಸ್ಯ ರಿವೀಲ್!
ಧುರಂಧಾರ್ ಚಿತ್ರೀಕರಣ ಪಾಕಿಸ್ತಾನದಲ್ಲಿ ಆಗಿತ್ತಾ? ಸಿನಿಮಾದಲ್ಲಿನ ದೃಶ್ಯಗಳ ರಹಸ್ಯ ಬಯಲು ಮಾಡಿದ ನಟ!