
ಮುಂಬೈ (ನ. 19): ಬಾಲಿವುಡ್ ಬಿಗ್ ಬಿ ಅಮಿತಾಬಚ್ಚನ್ ಮಕ್ಕಳ ಜೊತೆ ಇದ್ದರೆ ಇವರೂ ಮಕ್ಕಳಂತಾಗುತ್ತಾರೆ. ಅವರ ಜೊತೆ ಆಟವಾಡುತ್ತಾರೆ, ಎಂಜಾಯ್ ಮಾಡುತ್ತಾರೆ. ಮಕ್ಕಳಿಗೂ ಇವರು ಬಹಳ ಇಷ್ಟವಾಗಿ ಬಿಡುತ್ತಾರೆ. ಕೆಲ ದಿನಗಳ ಹಿಂದೆ ಮೊಮ್ಮಗಳು ಆರಾಧ್ಯ ಬಚ್ಚನ್ ಹುಟ್ಟುಹಬ್ಬದ ಪಾರ್ಟಿಯಲ್ಲಿ ಶಾರೂಕ್ ಖಾನ್ ಮಗ ಅಬ್ರಾಮ್ ಜೊತೆ ಆಟವಾಡಿದ್ದಾರೆ. ಅಬ್ರಾಮ್ ಇವರನ್ನೇ ತಾತ ಎಂದುಕೊಂಡಿದ್ದಾನೆ. ಈ ಬಗ್ಗೆ ಅಮಿತಾಬ್ ಪೋಸ್ಟ್ ವೊಂದನ್ನು ಹಂಚಿಕೊಂಡಿದ್ದಾರೆ.
ಇದಕ್ಕೆ ಶಾರೂಕ್ ರಿಪ್ಲೆ ಮಾಡಿದ್ದು ಎಲ್ಲರ ಮನಸ್ಸನ್ನು ಗೆದ್ದಿದೆ.
ಬಿಗ್ ಬಿ ಪೋಸ್ಟ್ ಗೆ ಪ್ರತಿಕ್ರಿಯಿಸುತ್ತಾ, ಸರ್ ನಮ್ಮ ಮನೆಗೆ ಬನ್ನಿ. ಶನಿವಾರ ನಮ್ಮ ಮನೆಗೆ ಬಂದು ಅಬ್ರಾಮ್ ಜೊತೆ ಒಂದಷ್ಟು ಸಮಯ ಕಳೆಯಿರಿ. ಅವನ ಐ ಪಾಡ್ ನಲ್ಲಿ ಅಮೇಜಿಂಗ್ ಗೇಮ್ ಗಳಿವೆ. ನೀವೂ ಅವನ ಜೊತೆ ಆಟವಾಡಬಹುದು ಎಂದು ಹೇಳಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.