
ಮುಂಬೈ(ಡಿ.11): ಇತ್ತೀಚೆಗೆ ಬಿಡುಗಡೆಯಾಗಿ ಬಾಕ್ಸ್ ಆಫಿಸ್’ನಲ್ಲಿ ಭಾರೀ ವೈಫಲ್ಯ ಕಂಡ `ಜಬ್ ಹ್ಯಾರಿ ಮೆಟ್ ಸೇಜಲ್' ಚಿತ್ರದ ಹಂಚಿಕೆದಾರರಿಗೆ, ಚಿತ್ರದ ನಾಯಕ ನಟ ಶಾರುಖ್ ಖಾನ್ ನಷ್ಟ ಭರಿಸಿಕೊಟ್ಟಿದ್ದಾರೆ.
ಭಾರತದಲ್ಲಿ ಚಿತ್ರದ ಪ್ರಸಾರದ ಹಕ್ಕನ್ನು ಪಡೆದಿದ್ದ ಎನ್’ಎಚ್’ ಸ್ಟುಡಿಯೋಜ್ ಮತ್ತು ಅದರ ಕೆಲ ಹಂಚಿಕೆದಾರರಿಗೆ ಶೇ.15ರಷ್ಟು ಮತ್ತು ಕೆಲವರಿಗೆ ಶೇ.30ರಷ್ಟು ನಷ್ಟ ಪರಿಹಾರವನ್ನು ಶಾರುಖ್ ಭರಿಸಿದ್ದಾರೆ. ಜಬ್ ಹ್ಯಾರಿ ಮೆಟ್ ಸೇಜಲ್ ಚಿತ್ರದ ಹಕ್ಕನ್ನು 80 ಕೋಟಿ ರು.ಗೆ ಪಡೆದಿದ್ದ ಎನ್ಎಚ್ ಸ್ಟುಡಿಯೋಜ್, 100 ಕೋಟಿ ರು. ಬಾಚಿಕೊಳ್ಳುವ ಗುರಿ ಹೊಂದಿತ್ತು. ಆದರೆ, ಕೇವಲ 64.33 ಕೋಟಿ ರು. ಗಳಿಸುವಲ್ಲಿ ಸಫಲವಾಗಿತ್ತು.
ಹೀಗಾಗಿ ಶಾರುಖ್ ಖಾನ್ ಸ್ವಯಂಪ್ರೇರಿತವಾಗಿ ಹಂಚಿಕೆದಾರರ ನಷ್ಟ ಭರಿಸಿಕೊಟ್ಟಿದ್ದಾರೆ. ಈ ಹಿಂದೆ ಟ್ಯೂಬ್ಲೈಟ್ ಚಿತ್ರ ವಿಫಲವಾಗಿ ಹಂಚಿಕೆದಾರರು ನಷ್ಟ ಅನುಭವಿಸಿದ್ದ ವೇಳೆ ಚಿತ್ರದ ನಾಯಕ ನಟ ಸಲ್ಮಾನ್ ಖಾನ್, ಹಂಚಿಕೆದಾರರಿಗೆ ಪರಿಹಾರ ಒದಗಿಸಿದ್ದರು.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.