
ಬೆಂಗಳೂರು (ಡಿ.10): ಅನಂತ್ ನಾಗ್ ಅದ್ಭುತ ಕಥೆಯೊಂದನ್ನ ಒಪ್ಪಿದ್ದಾರೆ. ಆ ಕಥೆಯ ಪ್ರಮುಖ ಪಾತ್ರವನ್ನೂ ಈಗಾಗಲೇ ಅಭಿನಯಿಸಿದ್ದಾರೆ.
ವಿಶ್ವದ ಅತಿ ಎತ್ತರದ ಜಾಗ ದುಬೈನ ಬುರ್ಜ್ ಕಲೀಫಾದಲ್ಲೂ ಈ ಚಿತ್ರವನ್ನ ಚಿತ್ರೀಕರಿಸಲಾಗಿದೆ. ಬುರ್ಜ ಕಲೀಫಾದ 80 ನೇ ಅಂತಸ್ತಿನಲ್ಲಿ ಚಿತ್ರೀಕರಿಸಿದ ಮೊದಲ ಕನ್ನಡ ಸಿನಿಮಾ ಎಂಬ ಹೆಗ್ಗಳಿಕೆನೂ ಈ ಚಿತ್ರಕ್ಕೇನೆ ಸಲ್ಲಬೇಕು.ರಂಗಿತರಂಗ ಚಿತ್ರ ಖ್ಯಾತಿಯ ನಟಿ ರಾಧಿಕಾ ಚೇತನ್ ಈ ಚಿತ್ರದ ಮತ್ತೊಂದು ಪ್ರಮುಖಪಾತ್ರಧಾರಿ. ಹಾಗೆ ಹಲವು ವಿಶೇಷಗಳ ಈ ಚಿತ್ರಕ್ಕೆ ಹೊಟ್ಟೆಗಾಗಿ ಗೇಣು ಬಟ್ಟೆಗಾಗಿ ಎಂಬ ಕನಕದಾಸರ ಹಾಡನ್ನೆ ಶೀರ್ಷಿಕೆ ಮಾಡಿದ್ದಾರೆ. ಅನಂತ್ ನಾಗ್ ಅವ್ರೇ ಈ ಶೀರ್ಷಿಕೆಯನ್ನ ಸಜೆಸ್ಟ್ ಮಾಡಿರೋದು. ಸಂತೆಯಲ್ಲಿ ನಿಂತ ಕಬೀರ ಚಿತ್ರದ ಯುವ ನಿರ್ದೇಶಕ ನರೇಂದ್ರ ಬಾಬು ಈ ಚಿತ್ರವನ್ನ ಡೈರೆಕ್ಟರ್ ಮಾಡಿದ್ದಾರೆ. ಜನವರಿ ತಿಂಗಳಲ್ಲಿ ಚಿತ್ರವನ್ನ ರಿಲೀಸ್ ಮಾಡೋ ಪ್ಲಾನ್ ಚಿತ್ರ ತಂಡಕ್ಕಿದೆ.ರಾಮಚಂದ್ರ ಹಡಪದ್ ಈ ಚಿತ್ರಕ್ಕೆ ಅದ್ಭುತ ಸಂಗೀತಕವನ್ನೂ ಕೊಟ್ಟಿದ್ದಾರೆ. ಈಗ ಚಿತ್ರದ ಹಾಡುಗಳು ರಿಲೀಸ್ ಆಗಿವೆ. ಚಿತ್ರದ ಮೇಕಿಂಗ್ ಕೂಡ ಹೊರಬಿದ್ದಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.