
ಬಿಕಿನಿಯಲ್ಲಿ ಕಾಣಿಸಿಕೊಂಡು ಭೇಷ್ ಎನ್ನಿಸಿಕೊಂಡಿದ್ದ ಸುಹಾನಾ ಖಾನ್ ಪ್ರತಿಷ್ಠಿತ ‘ವೋಗ್’ ಫ್ಯಾಷನ್ ಮ್ಯಾಗಜೀನ್ ನಲ್ಲಿ ಕಾಣಿಸಿಕೊಂಡಿದ್ದು ಟ್ರೋಲಿಗರ ಆಕ್ರೋಶಕ್ಕೆ ಕಾರಣವಾಗಿದೆ. ಸದ್ಯ ಸಾಮಾಜಿಕ ಜಾಲತಾಣದಲ್ಲಿ ಈಕೆ ಫೋಟೋಗಳು ಸಖತ್ ಓಡಾಡುತ್ತಿವೆ ಜತೆಗೆ ಬಗೆಬಗೆಯ ಕಮೆಂಟ್ ಸಂಪಾದನೆ ಮಾಡಿಕೊಳ್ಳುತ್ತಿವೆ.
ಶಾರುಖ್ ಆಗಸ್ಟ್ ಸಂಚಿಕೆಯ ಕವರ್‌ಗೆ ತಮ್ಮ ಮಗಳು ರೂಪದರ್ಶಿಯಾಗಿರೋ ಮ್ಯಾಗಜಿನ್ ಬಿಡುಗಡೆ ಮಾಡಿ ಪೋಟೋಶೂಟ್ ವಿಡೀಯೋ ಕೂಡ ಶೇರ್ ಮಾಡಿದ್ದಾರೆ. ಜೊತೆಗೆ ಮಗಳ ಫೋಟೋ ಇರುವ ವೋಗ್‌ನ ನಿಯತಕಾಲಿಕೆಯನ್ನು ಕೈಯಲ್ಲಿ ಹಿಡಿದಿರುವ ಫೋಟೋ ಒಂದನ್ನು ಟ್ವೀಟ್ ಮಾಡಿದ್ದಾರೆ. ತಾಯಿ ಗೌರಿ ಖಾನ್ ಕೂಡ ಸುಹಾನಾ ಖಾನ್ ಫೋಟೋ ಹಾಕಿ ವೋಗ್‌ಗೆ ಧನ್ಯವಾದ ಹೇಳಿದ್ದಾರೆ. ವೋಗ್ ಕೂಡ ಸುಹಾನ್ ಖಾನ್ ಫೋಟೋವನ್ನು ಅಪ್ಲೋಡ್ ಮಾಡಿದೆ.
ಬಿಕಿನಿಯಲ್ಲಿ ನನಗಿಂತ ನೀನೆ ಚೆನ್ನ...ಪೂನಂ ಶಹಭಾಸ್
ಆದರೆ ಟ್ರೋಲಿಗರು ಇಷ್ಟಕ್ಕೆ ಸುಮ್ಮನಾಗಿಲ್ಲ, ಸುಹಾನಾ ಫೋಟೋ ಹಾಕುವ ಮೂಲಕ ವೋಗ್ ತನ್ನ ಸ್ಟಾಂಡರ್ಡ್ ಕಳೆದುಕೊಂಡಿದೆ. ಒಂದೇ ಒಂದು ಚಿತ್ರದಲ್ಲಿ ಅಭಿನಯಿಸದ ಆಕೆಯನ್ನು ಯಾವ ಮಾನದಂಡದಲ್ಲಿ ನಟಿ ಎಂದು ಪರಿಗಣನೆ ಮಾಡಲಾಯಿತು ಎಂಬ ಪ್ರಶ್ನೆಯನ್ನು ಕೇಳಲಾಗಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.