ಡಾ ರಾಜ್‌ಕುಮಾರ್-ವಿಷ್ಣುವರ್ಧನ್ ಮಧ್ಯೆ ನಿಜವಾಗಿಯೂ 'ಸಂಬಂಧ' ಹೇಗಿತ್ತು? ಸತ್ಯ ಸಂಗತಿ ಹೇಳಿದ ನಟಿ ತಾರಾ!

Published : Jun 17, 2025, 06:16 AM IST
 Dr Rajkumar Vishnuvardhan Tara

ಸಾರಾಂಶ

ಸಿನಿಮಾ ಪಾತ್ರಗಳು ರಿಯಲ್ ಅಲ್ಲ ಎಂಬ ಸಂಗತಿ ಅಭಿಮಾನಿಗಳ ತಲೆಗೆ ಹೋಗುವುದಿಲ್ಲ. ಈ ಕಾರಣಕ್ಕೆ ಸ್ಟಾರ್ ವಾರ್ ಹುಟ್ಟಿಕೊಂಡು ಬೆಳದು ಇಂದಿಗೂ ಕೂಡ ಅದು ಅಸ್ತಿತ್ವದಲ್ಲಿ ಇದೆ. ನಟ ವಿಷ್ಣುವರ್ಧನ್ ಅವರು ಡಾ ರಾಜ್‌ಕುಮಾರ್ ಅವರನ್ನು ಸೋಲಿಸಲು ಬಂದ ನಟ ಎಂಬ ಅಭಿಪ್ರಾಯ..

ಕನ್ನಡದ ಮೇರು ನಟರಾದ ಡಾ ರಾಜ್‌ಕುಮಾರ್ (Dr Rajkumar) ಹಾಗೂ ವಿಷ್ಣುವರ್ಧನ್ (Dr Vishnuvardhan) ಅವರ ಬಗ್ಗೆ, ಅವರ ಸಿನಿಮಾ ಸಾಧನೆಗಳ ಬಗ್ಗೆ ಯಾರಿಗೂ ಹೇಳಬೇಕಿಲ್ಲ. ಆದರೆ, ಡಾ ರಾಜ್ ಹಾಗೂ ವಿಷ್ಣು ಅವರಿಬ್ಬರ ಅಭಿಮಾನಿಗಳ ಮನಸ್ತಾಪ, ಸ್ಟಾರ್‌ ವಾರ್‌ ಗಳ ಬಗ್ಗೆಯೂ ಇಡೀ ಕರ್ನಾಟಕಕ್ಕೇ ಗೊತ್ತು. ನಟ ವಿಷ್ಣುವರ್ಧನ್ ಮದುವೆ ವೇಳೆ ನಡೆದ ಘಟನೆ, ಆ ಬಳಿಕ ಕೂಡ ಅವರಿಬ್ಬರ ಅಭಿಮಾನಿಗಳ ನಡುವೆ ನಡೆಯುತ್ತಿದ್ದ ಕಾಳಗ, ಕಲ್ಲು ತೂರಾಟ ಹಾಗೂ ಜಗಳ-ಗಲಾಟೆ ಎಲವನ್ನೂ ಕರ್ನಾಟಕ ಕಂಡಿದೆ. ಅದು ಯಾರಿಗೂ ಹೊಸದಾಗಿ ಹೇಳಬೇಕಾದ ಸಂಗತಿಯೂ ಅಲ್ಲ, ಸೀಕ್ರೆಟ್‌ ಅಂತೂ ಅಲ್ಲವೇ ಅಲ್ಲ.

ಆದರೆ, ಡಾ ರಾಜ್‌ಕುಮಾರ್ ಹಾಗೂ ವಿಷ್ಣುವರ್ಧನ್ ಪರಸ್ಪರ ಹೇಗಿದ್ದರು? ಅವರಿಬ್ಬರ ನಡುವೆ ದ್ವೇಷ ಇತ್ತೇ? ಅವರಿಬ್ಬರೂ ಎಷ್ಟರ ಮಟ್ಟಿಗೆ ಒಬ್ಬರನ್ನೊಬ್ಬರು ದ್ವೇಷಿಸುತ್ತಿದ್ದರು ಅಥವಾ ಪ್ರೀತಿಸುತ್ತಿದ್ದರು ಎಂಬುದನ್ನು ಹಿರಿಯ ನಟಿ, ರಾಷ್ಟ್ರಪ್ರಶಸ್ತಿ ವಿಜೇತೆ ತಾರಾ ಅನುರಾಧಾ ಅವರು ಯೂಟ್ಯೂಬ್ ಸಂದರ್ಶನವೊಂದರಲ್ಲಿ ಬಹಿರಂಗ ಪಡಿಸಿದ್ದಾರೆ. ಅವರೇನು ಹೇಳಿದ್ದಾರೆ, ಅವರ ಅನುಭವದ ಮಾತುಗಳು ಮುಂದಿವೆ ನೋಡಿ..

ರಾಜ್‌ಕುಮಾರ್ ಹಾಗೂ ವಿಷ್ಣುವರ್ಧನ್ ಅವರಿಬ್ಬರ ಮಧ್ಯೆ ತುಂಬಾ ಪ್ರೀತಿ-ಗೌರವ ಇತ್ತು. ಅಭಿಮಾನಿಗಳ ಮನಸ್ತಾಪದ ನಡುವೆ ಅವೆಲ್ಲವೂ ಹೊರಗೆ ಬರಲೇ ಇಲ್ಲ. ನಟ ವಿಷ್ಣುವರ್ಧನ್ ಅವರು ತಮಗಿಂತ ತುಂಬಾ ಹಿರಿಯರಾಗಿರುವ ರಾಜ್‌ಕುಮಾರ್ ಬಗ್ಗೆ ತುಂಬಾ ಗೌರವ ಹೊಂದಿದ್ದರು. ಡಾ ರಾಜ್‌ಕುಮಾರ್ ಸರಳತೆ, ಸಜ್ಜನಿಕೆ ಹಾಗೂ ಸಾಧನೆಗಳ ಬಗ್ಗೆ ವಿಷ್ಣುವರ್ಧನ್ ಅವರು ಅಪಾರ ಗೌರವ ಹೊಂದಿದ್ದರು. ಆ ಬಗ್ಗೆ ತಮ್ಮ ಆಪ್ತಬಳಗದಲ್ಲಿ ಅವರು ಹೇಳುತ್ತಿದ್ದರು. ಅವರಿಬ್ಬರೂ ಯಾವತ್ತೂ ಮನಸ್ತಾಪ, ಅಸೂಯೆ ಹೊಂದಿರಲೇ ಇಲ್ಲ. ಆದರೆ, ಅವರಿಬ್ಬರ ಅಭಿಮಾನಿಗಳ ಬಳಗ ಅದ್ಯಾಕೆ ಕಿತ್ತಾಡುತ್ತಿದ್ದರು ಎಂಬುದು ಅರ್ಥವಾಗದ ಸಂಗತಿ..' ಎಂದಿದ್ದಾರೆ ನಟಿ ತಾರಾ.

ಕನ್ನಡ ಚಿತ್ರರಂಗದ ಮೇರುನಟರ ಸಾಲಿನಲ್ಲಿ ನಿಲ್ಲುವ ವ್ಯಕ್ತಿಗಳಲ್ಲಿ ಡಾ ರಾಜ್‌ಕುಮಾರ್ ಹಾಗೂ ಡಾ ವಿಷ್ಣುವರ್ಧನ್ ಪ್ರಮುಖ ನಟರು. ಡಾ ರಾಜ್‌ಕುಮಾರ್, ವಿಷ್ಣುವರ್ಧನ್, ಅಂಬರೀಷ್, ಅನಂತ್‌ ನಾಗ್ ಹಾಗೂ ಶಂಕರ್‌ ನಾಗ್ ಈ ಎಲ್ಲರೂ ಕೂಡ ಸ್ಯಾಂಡಲ್‌ವುಡ್ ಸಿನಿಮಾರಂಗದಲ್ಲಿ ತಮ್ಮದೇ ಆದ ಸ್ಥಾನ ಪಡೆದು ಮೇರು ನಟರು ಎನ್ನಿಸಿದ್ದಾರೆ. ನಟ ವಿಷ್ಣುವರ್ಧನ್ ಅವರು ಡಾ ರಾಜ್‌ಕುಮಾರ್ ನಂತರದ ಜನರೇಶನ್ ಸ್ಟಾರ್ ನಟರು. ಅವರಿಬ್ಬರಲ್ಲಿ 21 ವರ್ಷಗಳಷ್ಟು ಅಂತರವಿತ್ತು.

ಅಷ್ಟೇ ಅಲ್ಲ, ನಟ ವಿಷ್ಣುವರ್ಧನ್ ಅವರು ಚಿತ್ರರಂಗಕ್ಕೆ ಬಂದಾಗ ಡಾ ರಾಜ್‌ಕುಮಾರ್ ಅವರು ಆಗಲೇ 150 ಸಿನಿಮಾಗಳನ್ನು ಮಾಡಿ ದೊಡ್ಡ ನಟ ಎನ್ನಿಸಿಕೊಂಡಿದ್ದರು. ಹೀಗಾಗಿ, ಅವರಿಬ್ಬರ ಮಧ್ಯೆ ಹೋಲಿಕೆ ಅಸಾಧ್ಯ ಎಂಬುದು ಎಲ್ಲರಿಗೂ ಅರ್ಥವಾಗಬೇಕಾದ ಸಂಗತಿ.

ಹೌದು, ಡಾ ರಾಜ್‌ಕುಮಾರ್ ಹಾಗೂ ವಿಷ್ಣುವರ್ಧನ್ ಅವರಿಬ್ಬರ ಮಧ್ಯೆ ಹೋಲಿಕೆ ಮಾಡುವುದೇ ಮಹಾ ತಪ್ಪು. ಆದರೂ ಇಡೀ ಕನ್ನಡ ಚಿತ್ರರಂಗ ಹಾಗೂ ಸಿನಿಪ್ರೇಕ್ಷಕರು ಯಾವತ್ತೂ ಅದನ್ನು ಮಾಡಿದ್ದಾರೆ. ಅದೇನೇ ಇದ್ದರೂ ಡಾ ರಾಜ್‌ಕುಮಾರ್ 2007 ಸಿನಿಮಾಗಳನ್ನು ಮಾಡಿದ್ದರೆ ವಿಷ್ಣುವರ್ಧನ್ ಅವರು 21 ವರ್ಷಗಳ ಬಳಿಕ ಚಿತ್ರರಂಗಕ್ಕೆ ಬಂದರೂ 200ಕ್ಕೂ ಮೀರಿ ಸಿನಿಮಾ ಮಾಡಿದ್ದಾರೆ. ಹೋಲಿಕೆ ಮಾಡುವವರು ಇದಕ್ಕೇನು ಹೇಳ್ತಾರೆ?

ಯಾವುದೇ ರೀತಿಯಲ್ಲೂ ಅವರಿಬ್ಬರ ಮಧ್ಯೆ ಹೋಲಿಕೆ ಅಸಾಧ್ಯ. ಬೇರೆಬೇರೆ ಕಾಲಘಟದಲ್ಲಿ ಬೇರೆ ಬೇರೆ ಸಿನಿಮಾ ಮಾಡಿರುವ ಅವರಿಬ್ಬರ ಸಾಧನೆ ಕನ್ನಡ ಚಿತ್ರರಂಗಕ್ಕೆ ಅಪಾರ ಹಾಗು ಅನನ್ಯ. ಅದೇ ರೀತಿ, ಶಂಕರ್‌ ನಾಗ ಸೇರಿದಂತೆ ಎಲ್ಲಾ ನಟನಟಿಯರ ಸಾಧನೆ ಕೂಡ ಚಿತ್ರರಂಗದ ಬೆಳವಣಿಗೆ ಹಾಗೂ ಇಂದಿನ ಸ್ಥಿತಿಗತಿಗೆ ಕಾರಣ ಎಂಬುದು ಹೇಳದಿದ್ದರೂ ಅರ್ಥ ಮಾಡಿಕೊಳ್ಳಬೇಕಾದ ಸತ್ಯ.

ಹಾಗಿದ್ದರೂ ಕೂಡ ಡಾ ರಾಜ್‌ಕುಮಾರ್ ಹಾಗೂ ಡಾ ವಿಷ್ಣುವರ್ಧನ್ ಅವರಿಬ್ಬರ ಅಭಿಮಾನಿಗಳ ಮಧ್ಯೆ ಸ್ಟಾರ್ ವಾರ್ ಇತ್ತು ಎಂಬುದು ಎಲ್ಲರಿಗೂ ಗೊತ್ತಿರುವ ಸತ್ಯ. ಈಗಲೂ ಆ ಸ್ಟಾರ್‌ ವಾರ್‌ ನಿಂತಿಲ್ಲ ಎಂಬುದು ಹೇಳಬಾರದ ಕಹಿ ಸತ್ಯ. ಆದರೆ, ಅವರಿಬ್ಬರ ಮಧ್ಯೆ ಅಷ್ಟು ದೊಡ್ಡ ರೀತಿಯಲ್ಲಿ ಸ್ಟಾರ್ ವಾರ್ ನಡೆಯಲು ನಿಜವಾದ ಕಾರಣ ಏನು ಎಂಬುದು ಇಂದಿಗೂ ಎಷ್ಟು ನಿಗೂಢವೋ ಅಷ್ಟೇ ಚರ್ಚೆಯ ವಿಷಯ ಕೂಡ ಹೌದು.

ಆದರೆ, ಬಹುತೇಕರು ಹೇಳುವ ಪ್ರಕಾರ, ಡಾ ರಾಜ್‌ಕುಮಾರ್ ಕನ್ನಡದ ದೊಡ್ಡ ಸ್ಟಾರ್ ಆಗಿ ಮೆರೆಯುತ್ತಿರುವ ಸಮಯದಲ್ಲಿ ವಿಷ್ಣುವರ್ಧನ್ ಎಂಬ ಇನ್ನೊಬ್ಬ ನಟ ಸ್ಟಾರ್ ಆಗಿ ಉದಯಿಸಿದ್ದನ್ನು ಡಾ ರಾಜ್‌ ಅಭಿಮಾನಿಗಳಿಗೆ ಸಹಿಸಲು ಸಾಧ್ಯವಾಗಲಿಲ್ಲ. ಅಲ್ಲಿಂದ ಶುರುವಾದ ಡಾ ರಾಜ್ ಅಭಿಮಾನಿಗಳ ಅಸಹನೆ, 'ಗಂಧದ ಗುಡಿ' ಚಿತ್ರದ ಘಟನೆಯ ಬಳಿಕ ಇನ್ನಷ್ಟು ಹೆಚ್ಚಾಯಿತು ಎನ್ನಲಾಗುತ್ತದೆ. ಅಷ್ಟೇ ಅಲ್ಲ, ಡಾ ರಾಜ್‌ ಎದುರು ನಟ ವಿಷ್ಣು ವಿಲನ್ ರೋಲ್ ಮಾಡಿದ್ದೇ ಜೀವನದಲ್ಲಿ ಅವರು ಮಾಡಿರೋ ದೊಡ್ಡ ತಪ್ಪು ಎಂದು ಬಹುತೇಕರು ಅಭಿಪ್ರಾಯ ಪಡುತ್ತಾರೆ.

ಕಾರಣ, ಸಿನಿಮಾ ಪಾತ್ರಗಳು ರಿಯಲ್ ಅಲ್ಲ ಎಂಬ ಸಂಗತಿ ಅಭಿಮಾನಿಗಳ ತಲೆಗೆ ಹೋಗುವುದಿಲ್ಲ. ಈ ಕಾರಣಕ್ಕೆ ಸ್ಟಾರ್ ವಾರ್ ಹುಟ್ಟಿಕೊಂಡು ಬೆಳದು ಇಂದಿಗೂ ಕೂಡ ಅದು ಅಸ್ತಿತ್ವದಲ್ಲಿ ಇದೆ. ನಟ ವಿಷ್ಣುವರ್ಧನ್ ಅವರನ್ನು ಡಾ ರಾಜ್‌ಕುಮಾರ್ ಅವರನ್ನು ಸೋಲಿಸಲು ಬಂದ ನಟ ಎಂಬ ಅಭಿಪ್ರಾಯದಲ್ಲಿ ಕಂಗೆಟ್ಟಿದ್ದ ಅಣ್ಣಾವ್ರ ಅಭಿಮಾನಿಗಳು ವಿಷ್ಣುವರ್ಧನ್ ಅವರನ್ನು ಅಕ್ಷರಶಃ ದ್ವೇಷಿಸಲು ಶುರು ಮಾಡಿದರು ಎಂದು ಅಂದಿನ ಕಾಲದ ಬಹಳಷ್ಟು ಜನರು ಹೇಳುವ ಮಾತು. ಅಂದಿನಿಂದ ಡಾ ರಾಜ್‌ ಹಾಗು ವಿಷ್ಣು ಅಭಿಮಾನಿಗಳಲ್ಲಿ ಶುರುವಾದ ದ್ವೇಷಕ್ಕೆ ಇಂದಿಗೂ ಅಂತ್ಯ ಸಿಕ್ಕಿಲ್ಲ ಅನ್ನೋದು ಬಹಳಷ್ಟು ಜನರ ಅನಿಸಿಕೆ.

ಒಟ್ಟನಲ್ಲಿ, ಅಂದಿನ ಕಾಲದ ಸಿನಿಮಾ ಪ್ರೇಮಿಗಳು ಹಾಗೂ ಚಿತ್ರರಂಗದ ಆಗುಹೋಗುಗಳನ್ನು ಬಲ್ಲವರು ಈ ಸಂಗತಿಯನ್ನು ಹೇಳುತ್ತಾರೆ. ಅದು 'ಡಾ ರಾಜ್‌-ಡಾ ವಿಷ್ಣು ಅವರಿಬ್ಬರ ಫ್ಯಾನ್ಸ್ ವಾರ್ ಇತ್ತು' ಎಂಬುದು. ಅದು ಎಷ್ಟು ನಿಜವೋ ಅಷ್ಟೇ ನಿಜವಾದ ಸಂಗತಿ ಎಂದರೆ, ಈ ಇಬ್ಬರು ಮೇರನಟರಲ್ಲಿ ಪರಸ್ಪರ ಗೌರವ ಹಾಗು ಪ್ರೀತಿ ಇತ್ತು ಎಂಬುದು. ಆದರೆ, ಅದನ್ನು ಅವರು ಅಭಿಮಾನಿಗಳ ಮುಂದೆ ಎಂದೂ ತೋರಿಸಿಕೊಳ್ಳಲೇ ಇಲ್ಲ. ಅದೇ ರಾಜ್‌ಕುಮಾರ್ ಹಾಗೂ ವಿಷ್ಣುವರ್ಧನ್‌ ಮಾಡಿರುವ ದೊಡ್ಡ ತಪ್ಪು ಎಂದು ಬಹಳಷ್ಟು ಜನರು ಹೇಳುತ್ತಾರೆ. ಅದು ಸತ್ಯ ಎನ್ನಿಸುವುದೂ ಹೌದು!

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಸೊಂಟ ಹಾಗೂ ತಲೆಯ ಮೇಲೆ ತಲವಾರು ಇರಿಸಿಕೊಂಡು ಬಾಲೆಯ ಬೆಲ್ಲಿ ಡಾನ್ಸ್‌: ವೀಡಿಯೋ ಭಾರಿ ವೈರಲ್
'ಹೊಟ್ಟೆಗೆ ಹಿಟ್ಟಿಲ್ಲದೇ ಬದುಕಬಲ್ಲೆ, ಆದ್ರೆ 'ಅದಿಲ್ಲದೇ' ಬದುಕಲಾರೆ: ಮದುವೆ ಬೆನ್ನಲ್ಲೇ ಸಮಂತಾ ಹಳೆಯ ಹೇಳಿಕೆ ವೈರಲ್!