ಕನ್ನಡ ಚಿತ್ರರಂಗಕ್ಕೆ ಮತ್ತೊಂದು ಕೀರ್ತಿ ಕಿರೀಟ; ಫಾರ್‌ಎವರ್ ನವೀನ್ ಕುಮಾರ್‌ಗೆ ಗೌರವ ಡಾಕ್ಟರೇಟ್

Published : Jun 16, 2025, 11:47 PM IST
Forever Naveen Kumar

ಸಾರಾಂಶ

ಫ್ಯಾಷನ್ ವಿನ್ಯಾಸ ಮತ್ತು ಉಡುಪು ನಿರ್ವಹಣೆಯಲ್ಲಿ ಅತ್ಯುತ್ತಮ ಸೇವೆ ಸಲ್ಲಿಸಿದ ನವೀನ್ ಕುಮಾರ್ ಅವರ ಸೇವೆಯನ್ನು ಗುರುತಿಸಿದ ಅಮೆರಿಕದ ಅಮೇರಿಕನ್ ಇಂಟರ್ ನ್ಯಾಷನಲ್ ವಿಶ್ವವಿದ್ಯಾಲಯವು ಅವರಿಗೆ ಗೌರವ ಡಾಕ್ಟರೇಟ್ ಘೋಷಣೆ ಮಾಡಿತ್ತು. ಈ ಮೂಲಕ ಮತ್ತೊಮ್ಮೆ ಕನ್ನಡ ಚಿತ್ರರಂಗಕ್ಕೆ ಅಂತರಾಷ್ಟ್ರೀಯ

ಹೌದು, ಸ್ಯಾಂಡಲ್‌ವುಡ್‌ ಚಿತ್ರರಂಗಕ್ಕೆ ಹಾಗೂ ಕನ್ನಡ ಪ್ರೇಕ್ಷಕರ ಪ್ರಭುಗಳಿಗೆ ಸಂತೋಷದ ಸುದ್ದಿಯೊಂದು ಸಿಕ್ಕಿದೆ. ಕನ್ನಡ ಚಿತ್ರರಂಗದಲ್ಲಿ ಕೆಲಸ ಮಾಡುವ ಮಹನೀಯರಿಗೊಂದು ಗೌರವ ಡಾಕ್ಷರೇಟ್ ಸಂದಿದೆ. ಅವರು ಮಾಡಿದ ಯೋಗ್ಯ ಕೆಲಸವನ್ನು ಗೌರವಿಸಿ ವಿದೇಶದ ವಿಶ್ವವಿದ್ಯಾಲಯದ ಗೌರವ ಡಾಕ್ಟರೇಟ್ ಪದವಿಗೆ ಭಾಜನರಾಗಿದ್ದಾರೆ. ಯಾರಿದು? ಭಾರತದ, ಅದರಲ್ಲೂ ಕರ್ನಾಟಕದಿಂದ ಈ ಗೌರವ ಪಡೆದ ವ್ಯಕ್ತಿ ಯಾರು ಎಂಬ ನಿಮ್ಮ ಕುತೂಹಲಕ್ಕೆ ಇಲ್ಲಿದೆ ಉತ್ತರ..

ಕನ್ನಡ ಚಿತ್ರರಂಗದಲ್ಲಿ ಕಳೆದ ಹತ್ತಕ್ಕೂ ಹೆಚ್ಚು ವರ್ಷಗಳಿಂದ ನವರಸ ನಾಯಕ ಜಗ್ಗೇಶ್ ಸೇರಿದಂತೆ ಕನ್ನಡದ ಹಲವಾರು ಸ್ಟಾರ್ ಕಲಾವಿದರಿಗೆ ವಸ್ತ್ರ ವಿನ್ಯಾಸಕರಾಗಿ, ಅಲ್ಲದೆ ಕಿರುತೆರೆಯ ಕಾಮಿಡಿ‌ ಕಿಲಾಡಿಗಳು ಷೋದಲ್ಲೂ ಕೆಲಸ ಮಾಡಿ ಗುರುತಿಸಿಕೊಂಡಿರುವ ಎಂ. ನವೀನ್ ಕುಮಾರ್ (Forever Naveen Kumar) ಅವರೀಗ ಅಮೇರಿಕಾ ಇಂಟರ್ ನ್ಯಾಷನಲ್ ವಿಶ್ವವಿದ್ಯಾಲಯದ ಗೌರವ ಡಾಕ್ಟರೇಟ್ ಪದವಿಗೆ ಭಾಜನರಾಗಿದ್ದಾರೆ.

ಇತ್ತೀಚೆಗೆ ಗೋವಾದಲ್ಲಿ ನಡೆದ ಸಮಾರಂಭದಲ್ಲಿ ಬಾಲಿವುಡ್‌ ನಿರ್ಮಾಪಕ ಮೆಹುಲ್ ಕುಮಾರ್ ಮತ್ತು ಗೋವಾದ ಸಮಾಜ ಕಲ್ಯಾಣ ಸಚಿವರಾದ ಸುಭಾಷ್ ದೇಸಾಯಿ ಅವರು ನವೀನ್ ಕುಮಾರ್ ಅವರಿಗೆ ಗೌರವ ಡಾಕ್ಟರೇಟ್ ಪದವಿ ಪ್ರದಾನ ಮಾಡಿದರು. ನವೀನ್ ಕುಮಾರ್ ಅವರ ತಂದೆ K.S Mohan ಕೂಡ ಗಾರ್ಮೆಂಟ್ಸ್ ಉದ್ಯಮದಲ್ಲಿ ತೊಡಗಿಕೊಂಡವರು. ಅದೇ ನವೀನ್ ಕುಮಾರ್ ಅವರನ್ನು ಫ್ಯಾಷನ್ ಕ್ಷೇತ್ರದೆಡೆಗೆ ಸೆಳೆದಿದೆ.

ಫ್ಯಾಷನ್ ವಿನ್ಯಾಸ ಮತ್ತು ಉಡುಪು ನಿರ್ವಹಣೆಯಲ್ಲಿ ಅತ್ಯುತ್ತಮ ಸೇವೆ ಸಲ್ಲಿಸಿದ ನವೀನ್ ಕುಮಾರ್ ಅವರ ಸೇವೆಯನ್ನು ಗುರುತಿಸಿದ ಅಮೆರಿಕದ ಅಮೇರಿಕನ್ ಇಂಟರ್ ನ್ಯಾಷನಲ್ ವಿಶ್ವವಿದ್ಯಾಲಯವು ಅವರಿಗೆ ಗೌರವ ಡಾಕ್ಟರೇಟ್ ಘೋಷಣೆ ಮಾಡಿತ್ತು. ಈ ಮೂಲಕ ಮತ್ತೊಮ್ಮೆ ಕನ್ನಡ ಚಿತ್ರರಂಗಕ್ಕೆ ಅಂತರಾಷ್ಟ್ರೀಯ ಮಟ್ಟದಲ್ಲಿ ಗೌರವ ದೊರಕಿದೆ, ಕನ್ನಡ ಚಿತ್ರರಂಗಕ್ಕೆ ಇನ್ನೊಂದು ಕೀರ್ತಿಯ ಕಿರೀಟ ಸಿಕ್ಕಂತಾಗಿದೆ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

'ನನಗೆ ಡೈವೋರ್ಸ್‌ ಸಿಗೋದು ಪಕ್ಕಾ..' ನ್ಯಾಷನಲ್‌ ಕ್ರಶ್‌ ಗಿರಿಜಾ ಓಕ್‌ ಫೋಟೋಗೆ ಫ್ಯಾನ್ಸ್ ರಿಯಾಕ್ಷನ್‌
ಐಎಂಡಿಬಿ 2025 ಪಟ್ಟಿಯಲ್ಲಿ ದಾಖಲೆ: ಮೂವರು ಕನ್ನಡದ ತಾರೆಗಳಿಗೆ ಟಾಪ್‌ 10ರಲ್ಲಿ ಸ್ಥಾನ!