‘ಪೈಲ್ವಾನ್’ ಬಗ್ಗೆ ಪ್ರಶ್ನೆಗಳಿವೆಯಾ? ಇಂದು ಸಂಜೆ ಸ್ವತಃ ಸುದೀಪ್ ಕೊಡಲಿದ್ದಾರೆ ಉತ್ತರ!

Published : Sep 07, 2019, 11:09 AM IST
‘ಪೈಲ್ವಾನ್’ ಬಗ್ಗೆ ಪ್ರಶ್ನೆಗಳಿವೆಯಾ? ಇಂದು ಸಂಜೆ ಸ್ವತಃ ಸುದೀಪ್ ಕೊಡಲಿದ್ದಾರೆ ಉತ್ತರ!

ಸಾರಾಂಶ

ಕಿಚ್ಚ ಸುದೀಪ್ ಬಹುನಿರೀಕ್ಷಿತ ಚಿತ್ರ ‘ಪೈಲ್ವಾನ್’ ತೆರೆಗೆ ಬರಲು ಸಿದ್ಧವಾಗಿದೆ. ಪೈಲ್ವಾನ್ ಚಿತ್ರದ ಬಗ್ಗೆ ಅಭಿಮಾನಿಗಳ ಪ್ರಶ್ನೆಗೆ ಇಂದು ಸಂಜೆ ಟ್ವಿಟರ್ ಲೈವ್ ನಲ್ಲಿ ಉತ್ತರ ಕೊಡಲಿದ್ದಾರೆ. 

ಕಿಚ್ಚ ಸುದೀಪ್ ಇದೇ ಮೊದಲ ಬಾರಿಗೆ ಪೈಲ್ವಾನ ನಾಗಿ ಕುಸ್ತಿ ಅಖಾಡಕ್ಕೆ ಇಳಿಯಲಿದ್ದಾರೆ. ತೊಡೆ ತಟ್ಟಿ ನಿಲ್ಲಲಿದ್ದಾರೆ. ಈಗಾಗಲೇ ಪೈಲ್ವಾನ್ ಟೀಸರ್, ಟ್ರೇಲರ್ ಸಿಕ್ಕಾಪಟ್ಟೆ ಸದ್ದು ಮಾಡುತ್ತಿದೆ. ’ಪೈಲ್ವಾನ್’ ನಾಗಿ ಸುದೀಪ್ ರನ್ನು ತೆರೆ ಮೇಲೆ ನೋಡಬೇಕೆಂದು ಅಭಿಮಾನಿಗಳನ್ನು ಕಾಯುತ್ತಿದ್ದಾರೆ. 

’ಪೈಲ್ವಾನ್’ ಬಗ್ಗೆ ಸಾಕಷ್ಟು ಕುತೂಹಲಗಳಿವೆ. ’ಪೈಲ್ವಾನ್’ ಪಾತ್ರಗಳ ಬಗ್ಗೆ, ಕಥೆ ಬಗ್ಗೆ ಏನೆಲ್ಲಾ ವಿಶೇಷತೆಗಳಿವೆ ಎಂಬ ಕುತೂಹಲ ಸಹಜವಾದದ್ದು. ಇವೆಲ್ಲದರ ಬಗ್ಗೆ ಸ್ವತಃ ಸುದೀಪ್ ಅವರೇ ಉತ್ತರಿಸಲಿದ್ದಾರೆ. ಇಂದು ಸಂಜೆ ಸುದೀಪ್ ಟ್ವಿಟರ್ ನಲ್ಲಿ ಲೈವ್ ಬರಲಿದ್ದಾರೆ. ಅಭಿಮಾನಿಗಳ ಎಲ್ಲಾ ಪ್ರಶ್ನೆಗಳಿಗೆ ಉತ್ತರಿಸಲಿದ್ದಾರೆ. ಅಬಿಮಾನಿಗಳು ಏನೇ ಪ್ರಶ್ನೆಗಳಿದ್ದರೂ ಕೇಳಬಹುದು ಎಂದು ಹೇಳಿದ್ದಾರೆ. 

 

 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

BBK 12: ಗಿಲ್ಲಿ ಜೊತೆ ಜಗಳ ಆಡಿ ತಪ್ಪು ಮಾಡಿದ್ರಾ ಧ್ರುವಂತ್? ಕ್ಷಮೆ ಕೇಳಿದ್ರೂ ವೋಟು ಬದಲಿಸಿದ ವೀಕ್ಷಕರು !
ತಾಯಿಯಾಗುತ್ತಿರುವ ಸಂಭ್ರಮದಲ್ಲಿ ‘Lakshmi Nivasa’ ನಟಿ ಮಾನಸ‌ ಮನೋಹರ್