ಸರಿಗಮಪ ಖ್ಯಾತಿಯ ಜ್ಞಾನೇಶ್ವರ ಈಗ ಸಿನಿಮಾ ಗಾಯಕ

Published : Jul 25, 2018, 11:31 AM IST
ಸರಿಗಮಪ ಖ್ಯಾತಿಯ ಜ್ಞಾನೇಶ್ವರ ಈಗ ಸಿನಿಮಾ ಗಾಯಕ

ಸಾರಾಂಶ

’ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕೊಡುಗೆ ರಾಮಣ್ನ ರೈ’ ಸಿನಿಮಾದಲ್ಲಿ  ಬಲೂನ್ ಹಾಡು ಹೆಸರಿನಲ್ಲಿ ಬಂದಿರುವ  ಹಾಡನ್ನು ಶಿಶು ತಾನಸೇನ ಎಂದೇ ಪ್ರಸಿದ್ಧನಾಗಿರುವ ಸರಿಗಮಪ ಖ್ಯಾತಿಯ ಜ್ಞಾನೇಶ್ವರ್ ಹಾಡಿದ್ದಾರೆ. ಮಕ್ಕಳಿಂದಲೇ ಹಾಡಿಸಿದ ಎರಡನೇ ಹಾಡು ಇದಾಗಿದೆ. ಇದಕ್ಕೆ ಮೊದಲು ಆಶಾ ಮತ್ತು ಸುನಿಧಿ ಹೇ ಶಾರದೇ ಹಾಡನ್ನು ಹಾಡಿದ್ದರು. ಈ ಹಿನ್ನೆಲೆಯಲ್ಲಿ ರಿಷಬ್ ಶೆಟ್ಟಿ ತಮ್ಮ ಚಿತ್ರದ ಹಾಡುಗಳ ಬಗ್ಗೆ ಹೇಳಿರುವ ಮಾತುಗಳು  ಇಲ್ಲಿವೆ.

ಬೆಂಗಳೂರು (ಜು. 25): ಲಿರಿಕಲ್ ವೀಡಿಯೋ ಮೂಲಕ ಗಮನ ಸೆಳೆಯುತ್ತಿರುವ ಕನ್ನಡ ಸಿನಿಮಾಗಳ ಹಾಡುಗಳ ಪೈಕಿ ‘ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕೊಡುಗೆ ರಾಮಣ್ಣ ರೈ’ ಚಿತ್ರ ಮೊದಲ ಸ್ಥಾನದಲ್ಲಿದೆ. ರಿಷಬ್ ಶೆಟ್ಟಿ ನಿರ್ದೇಶನದ ಅನಂತ್ ನಾಗ್ ಅಭಿನಯದ ಈ ಚಿತ್ರದ ಹಾಡುಗಳು ಒಂದೊಂದಾಗಿ ಯೂಟ್ಯೂಬ್‌ಗೆ ಲಗ್ಗೆ ಇಡುತ್ತಿವೆ.

‘ದಡ್ಡ ಪ್ರವೀಣ...’ ಹಾಡಿನ ನಂತರ ಮತ್ತೊಂದು ಹಾಡು ಬಂದಿದೆ. ಬಲೂನ್ ಹಾಡು ಹೆಸರಿನಲ್ಲಿ ಬಂದಿರುವ ಈ ಹಾಡನ್ನು ಶಿಶು ತಾನಸೇನ ಎಂದೇ ಪ್ರಸಿದ್ಧನಾಗಿರುವ ಸರಿಗಮಪ ಖ್ಯಾತಿಯ ಜ್ಞಾನೇಶ್ವರ್ ಹಾಡಿದ್ದಾರೆ. ಮಕ್ಕಳಿಂದಲೇ ಹಾಡಿಸಿದ ಎರಡನೇ ಹಾಡು ಇದಾಗಿದೆ. ಇದಕ್ಕೆ ಮೊದಲು ಆಶಾ ಮತ್ತು ಸುನಿಧಿ ಹೇ ಶಾರದೇ ಹಾಡನ್ನು ಹಾಡಿದ್ದರು. ಈ ಹಿನ್ನೆಲೆಯಲ್ಲಿ ರಿಷಬ್  ಶೆಟ್ಟಿ ತಮ್ಮ ಚಿತ್ರದ ಹಾಡುಗಳ ಬಗ್ಗೆ ಹೇಳಿರುವ ಮಾತುಗಳು ಇಲ್ಲಿವೆ.

- ಇಲ್ಲಿವರೆಗೂ ಬಿಡುಗಡೆಯಾಗಿರುವ ಹಾಡುಗಳಿಗೆ ಯಾವ ಸ್ಟಾರ್ ಸಿಂಗರ್‌ಗಳು ಇಲ್ಲ. ಮಕ್ಕಳಿಂದಲೇ ಹಾಡಿಸಿರುವ ಹಾಡುಗಳಿವು.

- ದಡ್ಡ ಪ್ರವೀಣ ಹಾಡಿಗೆ ಯೂಟ್ಯೂಬ್‌ನಲ್ಲಿ ವೀಕ್ಷಕರ ಸಂಖ್ಯೆ 8 ಲಕ್ಷ ಗಡಿ ದಾಟಿದೆ.

- ಕನ್ನಡದ ಐಖಾನ್ ಎನಿಸಿಕೊಂಡಿರುವ ಅನಂತ್‌ನಾಗ್  ಹೊರತಾಗಿ ಬೇರೆ ಸ್ಟಾರ್ ನಟರು ಇಲ್ಲಿಲ್ಲ. ಆದರೂ ಹಾಡು ಮತ್ತು ಟೀಸರ್‌ಗಳಿಗೆ ಸ್ಟಾರ್ ನಟರ ಚಿತ್ರಗಳಿಗಿಂತಲೂ ಕಡಿಮೆ ಇಲ್ಲ ಎನ್ನುವಂತೆ ಪ್ರತಿಕ್ರಿಯೆಗಳು ಬರುತ್ತಿವೆ.

- ಈ ಬಲೂನ್ ಸಾಂಗ್ ಸಾಕಷ್ಟು ವಿಶೇಷತೆಗಳನ್ನು ಒಳಗೊಂಡಿದೆ. ಮಕ್ಕಳ ಜತೆಗೆ ಪೋಷಕರ ಭಾವನಾತ್ಮಕ ಜಗತ್ತನ್ನು ಮುಟ್ಟುವ ಹಾಡು ಇದು.

- ಬಲೂನ್ ಮಾರುವಾತ ತನ್ನ ಮಗನನ್ನು ಉರಿಬಿಸಿಲಿನಲ್ಲಿ ಬಲೂನ್ ಮಾರಲು ಕರೆದುಕೊಂಡು ಹೋದಾಗ ಆ ಹುಡುಗನಿಗಾಗುವ ದುಃಖವನ್ನು ಮತ್ತು ಆತನಂತೆಯೇ ಬೇರೆ ಬೇರೆ ಕಷ್ಟದಲ್ಲಿರುವ ಮಕ್ಕಳ ಪರಿಸ್ಥಿತಿಯನ್ನು ಹಾಸ್ಯಮಿಶ್ರಿತ ಭಾವದಲ್ಲಿ ಹೇಳಲಾಗಿದೆ. ಬಣ್ಣ ಬಣ್ಣದ ಬಲೂನುಗಳು, ಮತ್ತು ಅದಕ್ಕೆ ತಕ್ಕಂತೆ ಬಣ್ಣದ ಪೋಷಾಕುಗಳನ್ನು ತೊಟ್ಟು ಬಲೂನ್ ಮಾರುವ ಮಮ್ಮುಟ್ಟಿ ಈ ಹಾಡಿನ  ಹೈಲೈಟ್. ಈ ಹಾಡನ್ನು ಕಾಸರಗೋಡು, ಮಂಗಳೂರು ಮುಂತಾದ ಕಡೆಗಳಲ್ಲಿ ಚಿತ್ರೀಕರಿಸಲಾಗಿದೆ.

- ನೇಟಿವಿಟಿ ಸಿನಿಮಾ, ನೇಟಿವಿಟಿ ಕತೆ ಬೇಕು ಎನ್ನುವವರಿಗೆ ನಮ್ಮ ಈ ಸಿನಿಮಾ ಬೆಸ್ಟ್ ಮೆಡಿಸನ್.  

 

ಜ್ಞಾನೇಶನ ಹಾಡು ಕೇಳಿ ಆನಂದಿಸಿ

 

 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

ಅಂದು IIFA ವೇದಿಕೆಯಲ್ಲಿ ಯಶ್ ಆಡಿದ್ದ ಮಾತೇನು? ಇಂದು 'ವಿಷಕಾರಿ' ಆಗಿರೋ ರಾಕಿಂಗ್ ಸ್ಟಾರ್ ಮಾಡಿದ್ದೇನು?
ನಟಿ ಕಾರುಣ್ಯ ರಾಮ್ ತಂಗಿಯ ಜೂಜಾಟಕ್ಕೆ ಬೀದಿಗೆ ಬಿದ್ದ ಕುಟುಂಬ, ಸಂಪಾದಿಸಿದ ಗೌರವ ಸಹೋದರಿಯಿಂದ ಹೋಯ್ತೆಂದು ಕಣ್ಣೀರು!