‘ಯುವರತ್ನ’ ಚಿತ್ರದ ಹುಬ್ಬಳ್ಳಿ-ಧಾರವಾಡ ಆಡಿಷನ್ ವಿಚಾರಕ್ಕೆ ಬ್ರೇಕ್ ಹಾಕಿದ ನಿರ್ದೇಶಕ!

Published : Apr 30, 2019, 01:31 PM IST
‘ಯುವರತ್ನ’ ಚಿತ್ರದ ಹುಬ್ಬಳ್ಳಿ-ಧಾರವಾಡ ಆಡಿಷನ್ ವಿಚಾರಕ್ಕೆ ಬ್ರೇಕ್ ಹಾಕಿದ ನಿರ್ದೇಶಕ!

ಸಾರಾಂಶ

ಪುನೀತ್ ರಾಜ್ ಕುಮಾರ್ ಅಭಿನಯದ ’ಯುವರತ್ನ’ ಚಿತ್ರಕ್ಕೆ ಹುಬ್ಬಳ್ಳಿ-ಧಾರಾವಾಡದಲ್ಲಿ ಆಡಿಷನ್ ನಡೆಯುವುದಾಗಿ ಹರಿದಾಡುತ್ತಿದ್ದ ಸುಳ್ಳು ಸುದ್ಧಿಯೊಂದರ ಬಗ್ಗೆ ನಿರ್ದೇಶಕ ಸಂತೋಷ್ ಆನಂದ್ ರಾಮ್ ಸ್ಪಷ್ಟನೆ ನೀಡಿದ್ದಾರೆ.

ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಹಾಗೂ ಸಾಯೇಶಾ ಅಭಿನಯದ ಸಂತೋಷ್ ಆನಂದ್ ರಾಮ್ ನಿರ್ದೇಶನದ ಬಹುನಿರೀಕ್ಷಿತ ಚಿತ್ರ ‘ಯುವರತ್ನ’ಕ್ಕೆ ಹುಬ್ಬಳ್ಳಿ ಹಾಗೂ ಧಾರವಾಡದಲ್ಲಿ ಆಡಿಷನ್ ಬಗ್ಗೆ ಹರಿದಾಡುತ್ತಿದ್ದ ಸುದ್ಧಿಗೆ ಸ್ಪಷ್ಟನೆ ನೀಡಿದ್ದಾರೆ.

‘ಪುನೀತ್ ರಾಜ್ ಕುಮಾರ್ ಅಭಿನಯದ ಯುವರತ್ನ ಸಿನಿಮಾಗಾಗಿ ಹುಬ್ಬಳ್ಳಿ- ಧಾರವಾಡ ಸ್ಥಳೀಯ ಪುರುಷ ಹಾಗೂ ಮಹಿಳಾ ಕಲಾವಿದರು ಸ್ಟೂಡೆಂಟ್ ಪಾತ್ರಕ್ಕೆ ಬೇಕಾಗಿದ್ದಾರೆ. ವಯಸ್ಸು 18 ರಿಂದ 28 ’ ಎಂದು ಸಂಪರ್ಕ ಮಾಡಬೇಕಾದ ವ್ಯಕ್ತಿಯ ಹೆಸರು ಹಾಗೂ ದೂರವಾಣಿ ಸಂಖೆಯನ್ನು ಫೋಟೋದ ರೀತಿಯಲ್ಲಿ ಅಪ್ಲೋಡ್ ಮಾಡಿಲಾಗಿತ್ತು. ಇದು ಚಿತ್ರ ನಿರ್ದೇಶಕರಾದ ಸಂತೋಷ ಆನಂದ್ ರಾಮ್ ಗಮನಕ್ಕೆ ಬಂದಿದೆ.

ಸಂತೋಷ ಆನಂದ್ ರಾಮ್ ತಮ್ಮ ಟ್ಟೀಟರ್ ಖಾತೆಯಲ್ಲಿ ‘ಹುಬ್ಬಳಿ ಹಾಗೂ ಧಾರವಾಡದ ಜನರೇ, ಇದನ್ನು ನಂಬಬೇಡಿ ಇವರು ನಮ್ಮ ಚಿತ್ರತಂಡಕ್ಕೆ ಸಂಬಂಧಪಟ್ಟ ವ್ಯಕ್ತಿಯಲ್ಲ. ಇದು ಫೇಕ್ ಸುದ್ಧಿ. ಈಗಾಗಲೇ ಯುವರತ್ನ ಚಿತ್ರದ ಆಡಿಷನ್ ಮುಗಿದಿದೆ’ ಎಂದು ಬರೆದುಕೊಂಡಿದ್ದಾರೆ.

 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

ರಶ್ಮಿಕಾ- ಸ್ಮೃತಿ ಇಬ್ಬರ ಎಂಗೇಜ್​ಮೆಂಟೂ ಮುರಿದುಬಿತ್ತು: ಮಂದಣ್ಣ- ಮಂಧಾನ ಹೆಸರಲ್ಲಿ ಏನಿದೆ ಗ್ರಹಚಾರ?
ಗಿಲ್ಲಿಯಲ್ಲ, Bigg Boss ವಿನ್ನರೇ ಬೇರೆ: ಅಭಿಷೇಕ್​ ಹೇಳಿದ ಆ ಹೆಸರು ಯಾರದ್ದು, ಇಲ್ಲಿದೆ ಕುತೂಹಲ