
ತಮ್ಮದೇ ಆದ ಡಿಫರೆಂಟ್ ಶೈಲಿಯಲ್ಲಿ ಸರಿಗಮಪದಲ್ಲಿ ಗಮನ ಸೆಳೆದವರು ಸಂಜಿತ್ ಹೆಗ್ಡೆ. ಭಾರತದ ಜಸ್ಟಿನ್ ಬೈಬರ್ ಎಂದೇ ಕರೆಸಿಕೊಳ್ಳುವ ಸಂಜಿತ್ ಹೆಗಡೆ ಸಂಗೀತಲೋಕದಲ್ಲಿ ಹೊಸ ಸಂಚಲನ ಮೂಡಿಸಿರುವ ಪ್ರತಿಭೆ. ಚಮಕ್ ಹಾಗೂ ಕಾಲೇಜ್ ಕುಮಾರ್ ಸಿನಿಮಾಗಳಿಗೆ ಹಾಡುವ ಮೂಲಕ ಸುದ್ದಿಯಾದವರು. ಈ ಸಾಲಿಗೆ ಪೈಲ್ವಾನ್ ಕೂಡಾ ಸೇರಿಕೊಂಡಿದೆ.
ತಾಪ್ಸಿ ಪನ್ನು ಸರ್ಪ್ರೈಸ್ ಗಿಫ್ಟ್‌ಗೆ ತಂಗಿ ಕ್ಲೀನ್ ಬೋಲ್ಡ್!
ಕಿಚ್ಚ ಸುದೀಪ್ ಅಭಿನಯದ ಪೈಲ್ವಾನ್ ಸಿನಿಮಾದ ಕಣ್ಣ ಮಣಿಯೇ... ಕಣ್ಣು ಹೊಡಿಯೇ ಎನ್ನುವ ರೊಮ್ಯಾಂಟಿಕ್ ಸಾಂಗ್ ವೊಂದು ರಿಲೀಸ್ ಆಗಿದೆ. ಈ ಹಾಡಿಗೆ ಸಂಜಿತ್ ಹೆಗ್ಡೆ ಧ್ವನಿ ನೀಡಿದ್ದಾರೆ. ಇದು ಯೂಟ್ಯೂಬ್ ನಲ್ಲಿ ಟ್ರೆಂಡಿಂಗ್ ನಲ್ಲಿದೆ. ಒಳ್ಳೆಯ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ.
ಸ್ಯಾಂಡಲ್ ವುಡ್ ಮಾತ್ರವಲ್ಲ, ಎಲ್ಲಾ ಭಾಷೆಗಳಲ್ಲಿ ಸಂಜಿತ್ ಈ ಹಾಡನ್ನು ಹೇಳಿದ್ದಾರೆ. ಕನ್ನಡ, ತಮಿಳು, ತೆಲುಗು, ಮಲಯಾಳಂ, ಹಿಂದಿಯನ್ನು ಹಾಡಿದ್ದಾರೆ. ಸಂಜಿತ್ ಧ್ವನಿಗೆ ಕೇಳುಗರಿಗೆ ಇಷ್ಟವಾಗಿದೆ.
ತಾಯಾಗ್ತಿದ್ದಾರೆ ಶ್ರುತಿ ಹರಿಹನ್, ಗಂಡನ ಹೆಸರು ಬಹಿರಂಗ
ಕಿಚ್ಚ ಸುದೀಪ್ ಸಿನಿಮಾಗೆ ಹಾಡಿದ್ದು ಇದೇ ಮೊದಲು. ಅರ್ಜುನ್ ಜನ್ಯಾ ಈ ಹಾಡಿಗೆ ಸಂಗೀತ ನಿರ್ದೇಶನ ಮಾಡಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.