ಪ್ರಿಯತಮನ ಸಾವಿನಿಂದ ಚೀರಿತು ಸಂಜಯ್ ದತ್ ಪುತ್ರಿ ಹೃದಯ

Published : Jul 04, 2019, 04:38 PM IST
ಪ್ರಿಯತಮನ ಸಾವಿನಿಂದ ಚೀರಿತು ಸಂಜಯ್ ದತ್ ಪುತ್ರಿ ಹೃದಯ

ಸಾರಾಂಶ

ಬಾಯ್‌ಫ್ರೆಂಡ್ ಸಾವಿನಿಂದ ಮರುಗುತ್ತಿದ್ದಾರೆ ಸಂಜಯ್ ದತ್ ಮಗಳು ತ್ರಿಶಾಲಾ | ಪ್ರಿಯತಮನನ್ನು ನೆನೆಸಿಕೊಂಡು ಭಾವನಾತ್ಮಕ ಸಂದೇಶ ನೀಡಿದ್ದಾರೆ |   

ಬಾಲಿವುಡ್ ಖ್ಯಾತ ನಟ ಸಂಜಯ್ ದತ್ ಮಗಳು ತ್ರಿಶಾಲಾ ದತ್ ಇನ್ಸ್ಟಾಗ್ರಾಂನಲ್ಲಿ ಭಾವನಾತ್ಮಕ ಪೋಸ್ಟ್ ವೊಂದನ್ನು ಶೇರ್ ಮಾಡಿದ್ದಾರೆ. 

ತ್ರಿಶಾಲಾ ದತ್ ಇಟಾಲಿಯನ್ ಮೂಲದ ಹುಡುಗನ ಜೊತೆ ಡೇಟಿಂಗ್ ನಡೆಸುತ್ತಿದ್ದರು. ಎಲ್ಲವೂ ಚೆನ್ನಾಗಿದೆ ಎನ್ನುವಾಗಲೇ ಒಂದು ಕಹಿ ಘಟನೆ ನಡೆದಿದೆ. ಅವರ ಬಾಯ್ ಫ್ರೆಂಡ್ ಸಾವನ್ನಪ್ಪಿದ್ದಾರೆ.

ಈ ವಿಚಾರವನ್ನು ಇನ್ಸ್ಟಾಗ್ರಾಮ್ ನಲ್ಲಿ ಶೇರ್ ಮಾಡಿಕೊಂಡಿದ್ದು, " ನನ್ನ ಹೃದಯ ಚಿದ್ರವಾಗಿದೆ. ನನ್ನನ್ನು ಪ್ರೀತಿಸಿದ್ದಕ್ಕೆ , ಪ್ರೊಟೆಕ್ಟ್ ಮಾಡಿದ್ದಕ್ಕೆ, ಕೇರ್ ತೆಗೆದುಕೊಂಡಿದ್ದಕ್ಕೆ ಥ್ಯಾಂಕ್ಸ್. ನನ್ನ ಜೀವನದಲ್ಲಿ ನನ್ನನ್ನು ತುಂಬಾ ಖುಷಿಯಾಗಿಟ್ಟಿದ್ದೀಯಾ. ನಿನ್ನನ್ನು ಭೇಟಿ ಮಾಡಿದ ನಾನು ಅದೃಷ್ಟವಂತೆ. ನನ್ನ ಅಂತರಾಳದಲ್ಲಿ ನೀನು ಯಾವಾಗಲೂ ಇರುತ್ತೀಯ. ಐ ಲವ್ ಯೂ. ನಿನ್ನನ್ನು ಇನ್ನೊಮ್ಮೆ ನೋಡುವ ತನಕ ಮಿಸ್ ಮಾಡಿಕೊಳ್ಳುತ್ತೇನೆ" ಎಂದು ಭಾವನಾತ್ಮಕವಾಗಿ ಹೇಳಿಕೊಂಡಿದ್ದಾಳೆ. 

ನಂತರ ಇನ್ಸ್ಟಾಗ್ರಾಮ್ ಸೆಟ್ಟಿಂಗ್ ಪ್ರೈವೆಟ್ ಆಗಿ ಬದಲಾಯಿಸಿದ್ದಾರೆ. 

 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

ಡೆವಿಲ್ ಸಿನಿಮಾದಲ್ಲಿ ದರ್ಶನ್ ಸಿಎಂ..! ಕಿಚ್ಚ ಸುದೀಪ್ ಹೇಳಿದ ಪಾಲಿಟಿಕ್ಸ್ ಸೀಕ್ರೆಟ್ ಏನು?
ಅಂದು ದೂರು ಹೇಳಿದ್ದ ವಿಜಯಲಕ್ಷ್ಮೀ; ಇಂದು Lakshmi Nivasa ಸೀರಿಯಲ್‌ನಿಂದಲೇ ಔಟ್‌