ಕರುಳು ಸಮಸ್ಯೆ: ಸಹಾಯಕ್ಕೆ ಕಿಚ್ಚನ ಅಂಗಲಾಚಿದ ಫ್ಯಾನ್

By Web Desk  |  First Published Jul 4, 2019, 4:19 PM IST

ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್‌ ಅಭಿಮಾನಿಯೊಬ್ಬಳು 1 ವರ್ಷದಿಂದ ಅನ್ನ ಸೇವಿಸದೇ ಹಾಸಿಗೆ ಹಿಡಿದಿದ್ದು ಚಿಕಿತ್ಸೆಗೆ ಕಿಚ್ಚ ಸುದೀಪ್ ಸಹಾಯವನ್ನು ಅಂಗಲಾಚಿ ಬೇಡಿದ್ದಾಳೆ.


ಸ್ಯಾಂಡಲ್‌ವುಡ್‌ ಸಿಂಗಲ್ ಶೇರ್ ಕಿಚ್ಚ ಸುದೀಪ್ ಅಭಿಮಾನಿಯೊಬ್ಬಳು ಗರ್ಭಿಣಿಯಾಗಿದ್ದಾಗ ಸಣ್ಣ ಕರುಳುವನ್ನು ವೈದ್ಯರು ಹೊರ ತೆಗೆದಿದ್ದು ಒಂದು ವರ್ಷದಿಂದ ಅನ್ನ ಸೇವಿಸಲಾಗದೇ ಪರದಾಡುತ್ತಿದ್ದಾರೆ. ಅವರ ಆಪರೇಷನ್‌ಗೆ 30 ಲಕ್ಷ ತಲುಪುತ್ತದೆ ಎಂದು ವೈದ್ಯರು ಹೇಳಿದ್ದು, ಅಷ್ಟೊಂದು ಹಣವನ್ನು ಭರಿಸಲಾಗದೇ ಕಿಚ್ಚ ಸುದೀಪ್ ಸಹಾಯವನ್ನು ಕೇಳಿದ್ದಾರೆ.

23 ವರ್ಷದ ಚೈತ್ರ ಗರ್ಭಿಣಿಯಾಗಿದ್ದಾಗ ವೈದ್ಯರು ಸಣ್ಣ ಕರುಳನ್ನು ತೆಗೆದಿದ್ದಾರೆ. ಯಾವ ಗಟ್ಟಿ ಪದಾರ್ಥವನ್ನು ಸೇವಿಸಲಾರದೆ, ಅನ್ನವನ್ನೂ ತಿನ್ನಲಾಗದೇ ಚೈತ್ರ ಕಷ್ಟಪಡುತ್ತಿದ್ದಾರೆ. ಸದ್ಯಕ್ಕೆ ಬನ್ನೇರುಘಟ್ಟದ ಅಪೋಲೋ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

Tap to resize

Latest Videos

ಕಿಚ್ಚ ಸುದೀಪ್ ಅಪ್ಪಟ ಅಭಿಮಾನಿಯಾಗಿರುವ ಚೈತ್ರ, ನನ್ನನ್ನು ನಿಮ್ಮ ತಂಗಿ ಎಂದು ಭಾವಿಸಿ. ಒಮ್ಮೆ ಬಂದು ಭೇಟಿ ಮಾಡಿ ಎಂದು ಕೇಳಿಕೊಂಡಿದ್ದಾರೆ. ಒಮ್ಮೆ 'ಹೇಗಿದ್ದೀಯಮ್ಮ’ ಎಂದು ಕೇಳಿ. ನನಗೆ ಬದುಕಬೇಕೆಂಬ ಆಸೆಯಿದೆ. ತಂಗಿಯೆಂದು ಭಾವಿಸಿ ನನ್ನನ್ನು ಉಳಿಸಿ ಎಂದು ಕೇಳಿಕೊಂಡಿದ್ದಾರೆ.

"

 

click me!