
ಬೆಂಗಳೂರು(ಜು.19): ಕೆಲವು ದಿನಗಳಿಂದ ಮಾಧ್ಯಮಗಳು ಹಾಗೂ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿರುವ ದಂಡುಪಾಳ್ಯ-2 ಸಿನಿಮಾದ ನಟಿ ಸಂಜನಾಳ ಅನ್ಎಡಿಟೆಡ್ ನಗ್ನ ದೃಶ್ಯ ಹರಿದಾಡುತ್ತಿದ್ದು, ಇದರ ಬಗ್ಗೆ ಸ್ವತಃ ಶೂಟಿಂಗ್'ನಲ್ಲಿ ಚಿತ್ರೀಕರಿಸಿದ ದೃಶ್ಯಗಳನ್ನು ಪ್ರಸ್ತುತಪಡಿಸಿ ವಾಸ್ತವಾಂಶಗಳನ್ನು ಬಿಚ್ಚಿಟ್ಟರು.
ಸಂಜನಾ ಹೇಳಿದ ಸಂಕ್ಷಿಪ್ತ ವಿವರಣೆ
'ನಾನು ಬೆತ್ತಲಾಗಿಲ್ಲ. ನಿಜವಾಗಿ ಚಿತ್ರೀಕರಣದಲ್ಲಿ ನಡೆದಿದ್ದೇ ಬೇರೆ. ಲೀಕಾಗಿರುವ ದೃಶ್ಯಗಳೆ ಬೇರೆ.ಕಂಪ್ಯೂಟರ್ ಗ್ರಾಫಿಕ್ಸ್ ಮೂಲಕ ನನ್ನ ದೇಹವನ್ನು ನಗ್ನವಾಗಿ ತೋರಿಸಲಾಗಿದೆ. ನಿರ್ದೇಶಕರು ದೇಹದ ಭಾಗಕ್ಕೆ ಮಾತ್ರ ಬಟ್ಟೆ ಹಾಕಿಕೊಳ್ಳುವಂತೆ ಹೇಳಿದ್ದರು. ಆದರೆ ನಾನು ಅವರ ಮತನ್ನು ತಿರಸ್ಕರಿಸಿ ಬೆನ್ನಿನ ಭಾಗವನ್ನು ಒಳಗೊಂಡು ಬಟ್ಟೆ ಧರಿಸುವುದಾಗಿ ಹೇಳಿದೆ. ದೃಶ್ಯಗಳು ನೈಜತೆಯಿಂದ ಕೂಡಿರದ ಕಾರಣ ಬೆನ್ನಿನ ಭಾಗ ಹಾಗೆ ಇರಲಿ ಎಂದು ನಿರ್ದೇಶಕರು ನನನ್ನನ್ನು ಮನವೊಲಿಸಿದರು.
ಈ ದೃಶ್ಯ ಸೋರಿಕೆಯಾಗಿರುವುದು ಪ್ರೊಡಕ್ಷನ್ ಟೀಂ ಅಥವಾ ನಿರ್ದೇಶಕರ ತಂಡದವರಿಂದಲೇ ಸೋರಿಕೆಯಾಗಿದೆ. ನನಗೆ ತಿಳಿದಂತೆ ಪ್ರೊಡಕ್ಷನ್ ತಂಡದವರೆ ಈ ರೀತಿ ಮಾಡಿದ್ದಾರೆ. ಇದಿಲ್ಲದೆ ಸಿನಿಮಾ ದೃಶ್ಯಗಳು ಸೋರಿಕೆಯಾಗಲು ಸಾಧ್ಯವಿಲ್ಲ. ಸೋರಿಕೆ ಮಾಡಿದವರನ್ನು ಪತ್ತೆ ಹಚ್ಚಿದರೆ ಏತಕ್ಕಾಗಿ ಮಾಡಿದ್ದಾರೆ ಎಂಬ ಸತ್ಯ ಗೊತ್ತಾಗಲಿದೆ.
ದೃಶ್ಯಗಳು ಸೋರಿಕೆಯಾದ ನಂತರ ನಿನ್ನೆ ಇಡೀ ರಾತ್ರಿ ನನಗೆ ನಿದ್ದೆ ಬಂದಿಲ್ಲ. ಈ ಬಗ್ಗೆ ಸ್ಪಷ್ಟನೆ ನೀಡಿದ ನಂತರ ಸಮಾಧಾನವಾಗಿದೆ. ಮೂಲ ದೃಶ್ಯದಲ್ಲಿ ಇರುವ ಚಿತ್ರವನ್ನು ನಾನು ಫೋಟೊ ತೆಗೆದುಕೊಂಡಿದ್ದೇನೆ. ಫೋಟೊ ನನ್ನ ಬಳಿಯಿಲ್ಲದಿದ್ದರೆ ನನ್ನ ಮಾತನ್ನು ಯಾರು ನಂಬುತ್ತಿರಲಿಲ್ಲ. ತೆಲುಗುವಿನಲ್ಲಿ ಈ ಚಿತ್ರ ಬಿಡುಗಡೆಯಾಗುವ ಕಾರಣ ನಿರ್ದೇಶಕರು ಆಂಧ್ರಪ್ರದೇಶದಲ್ಲಿ ಬ್ಯುಸಿಯಾಗಿದ್ದಾರೆ. ಕೆಲವು ದಿನಗಳಲ್ಲಿ ಬಂದು ಸ್ಪಷ್ಟನೆ ನೀಡುವುದಾಗಿ ನಿರ್ದೇಶಕ ಶ್ರೀನಿವಾಸರಾಜು ತಿಳಿಸಿದ್ದಾರೆ'ಎಂದು ಸಂಜನಾ ಹೇಳಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.