ನಿರ್ಮಾಪಕರ ವಿವಾದದ ಬಗ್ಗೆ ಸ್ಪಷ್ಟನೆ ನೀಡಿದ ಸಂಜನಾ : ನನ್ನ ಸ್ವಾಭಿಮಾನಕ್ಕೆ ಧಕ್ಕೆಯಾಯಿತು

Published : Oct 07, 2016, 11:36 AM ISTUpdated : Apr 11, 2018, 12:44 PM IST
ನಿರ್ಮಾಪಕರ ವಿವಾದದ ಬಗ್ಗೆ  ಸ್ಪಷ್ಟನೆ ನೀಡಿದ ಸಂಜನಾ :  ನನ್ನ ಸ್ವಾಭಿಮಾನಕ್ಕೆ ಧಕ್ಕೆಯಾಯಿತು

ಸಾರಾಂಶ

ಬೆಂಗಳೂರು(ಅ.7): ನಿರ್ಮಾಪಕರ ಕುರಿತು ವಿವಾದಾತ್ಮಕ ಹೇಳಿಕೆ ನೀಡಿರುವ ಸಂಜನಾ ತಮ್ಮ  ಹೇಳಿಕೆಯ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ.

ಅವರು ಹೇಳಿಕೆಯ ಪರಿಪೂರ್ಣ ಪಾಠ  ಇಲ್ಲಿದೆ ನೋಡಿ

'ಬಿಗ್ ಬಾಸ್  ರಿಯಾಲಿಟಿ ಶೋ ಹಾಗೂ ಸಿನಿಮಾ ಕುರಿತ ಚರ್ಚೆ ಸುವರ್ಣ ನ್ಯೂಸ್'ನಲ್ಲಿ  ನಡೆಯುತ್ತಿದ್ದಾಗ ನಿರ್ಮಾಪಕ ಟೇಶಿ ವೆಂಕಟೇಶ್ ಕೂಡ ದೂರವಾಣಿ ಮೂಲಕ ಮಾತನಾಡುತ್ತಿದ್ದರು. ಅವರು ನಾನು ಮಾತನಾಡುವಾಗ 'ಸುಮ್ನೆ ಕೂತ್ಕೊಳಮ್ಮ' ಎಂದು ನನ್ನನ್ನು ಗದರಿದರು. ಅವರು ನನ್ನ ವಿರುದ್ಧ ಜೋರು ದನಿಯಲ್ಲಿ ಮಾತನಾಡಿದಾಗ ನನ್ನ ಸ್ವಾಭಿಮಾನಕ್ಕೆ ಧಕ್ಕೆಯುಂಟಾಯಿತು.  ಆಗ ನಾನು ಕೋಪಗೊಂಡು' ನೀವು ಒಳ್ಳೆಯ ಸಿನಿಮಾ ಮಾಡಿ ಆಗ ಜನರು ನೋಡುತ್ತಾರೆ' ಎಂದು ಟೇಶಿ ವೆಂಕಟೇಶ್ ಅವರೊಬ್ಬರಿಗೆ ಮಾತ್ರ ಹೇಳಿದೆಯಷ್ಟೆ.

ಎಲ್ಲ ನಿರ್ಮಾಪಕರನ್ನು ಕುರಿತು ನಾನು ಹೇಳಿಲ್ಲ. ನಿರ್ಮಾಪಕರ ಬಗ್ಗೆ ನನಗೆ ಅಪಾರವಾದ ಗೌರವವಿದೆ. ಅವರೇ ನನ್ನ ಅನ್ನಧಾತರು. ಅವರ ವಿರುದ್ಧ ಮಾತನಾಡಲು ನನಗೆ ಯಾವುದೇ ಅರ್ಹತೆಯಿಲ್ಲ. ನನ್ನ ಮಾತಿನಿಂದ  ನಿರ್ಮಾಪಕರಿಗೆ ನೋವಾಗಿದ್ದರೆ ಕ್ಷಮೆ ಕೇಳುತ್ತೇನೆ. ಅಲ್ಲದೆ ನಾನು ಬಿಗ್'ಬಾಸ್ ರಿಯಾಲಿಟಿ ಶೋದ ವಿವಾದಕ್ಕೂ ನನಗೂ ಯಾವುದೇ ಸಂಬಂಧವಿಲ್ಲ.

ಅ.11 ರಂದು ನಾನು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಗೆ ಆಗಮಿಸುತ್ತೇನೆ. ಟೇಶಿ ವೆಂಕಟೇಶ್ ಅವರು ಕ್ಷಮೆ ಕೇಳಿದರೆ ನಾನು ಅವರಿಗೆ ವಯಕ್ತಿಕವಾಗಿ ಕ್ಷಮೆ ಕೇಳುತ್ತೇನೆ' ಎಂದು ಸ್ಪಷ್ಟನೆ ನೀಡಿದ್ದಾರೆ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

'ವಾರಣಾಸಿ' ಸಿನಿಮಾ ಶೂಟಿಂಗ್ ನೋಡಲು ಅವತಾರ್ ಖ್ಯಾತಿಯ ಜೇಮ್ಸ್ ಕ್ಯಾಮರೂನ್ ಆಸಕ್ತಿ: ಆದ್ರೆ ರಾಜಮೌಳಿ ಹೇಳಿದ್ದೇನು?
ಶಾರುಖ್-ದೀಪಿಕಾ ನಟನೆಯ 'ಕಿಂಗ್' ಚಿತ್ರದ ರೊಮ್ಯಾಂಟಿಕ್ ಹಾಡು ಲೀಕ್ ಆಯ್ತಾ? ವಿಡಿಯೋ ವೈರಲ್!