'ಕನ್ನಡದಲ್ಲಿ ನನ್ನನ್ನು ನಡೆಸಿಕೊಂಡ ರೀತಿ ಖುಷಿ ಕೊಟ್ಟಿತು'

Published : Jan 05, 2018, 03:31 PM ISTUpdated : Apr 11, 2018, 12:42 PM IST
'ಕನ್ನಡದಲ್ಲಿ ನನ್ನನ್ನು ನಡೆಸಿಕೊಂಡ ರೀತಿ ಖುಷಿ ಕೊಟ್ಟಿತು'

ಸಾರಾಂಶ

'ಬೃಹಸ್ಪತಿ' ಚಿತ್ರದ ನಟಿ ಮಿಸ್ಟಿ ಚಕ್ರವರ್ತಿ ಕನ್ನಡ ಪ್ರಭ ಜೊತೆ ಹಂಚಿಕೊಂಡ ಮಾತುಗಳಿವು.

'ಬೃಹಸ್ಪತಿ' ಚಿತ್ರದ ನಟಿ ಮಿಸ್ಟಿ ಚಕ್ರವರ್ತಿ ಕನ್ನಡ ಪ್ರಭ ಜೊತೆ ಹಂಚಿಕೊಂಡ ಮಾತುಗಳಿವು.

ನಿಮ್ಮ ಹಿನ್ನೆಲೆಯೇನು?

ಹುಟ್ಟಿದ್ದು ಕೋಲ್ಕತ್ತಾ, ಬೆಳೆದಿದ್ದು ಮುಂಬೈ. ಬಣ್ಣದ ಲೋಕಕ್ಕೆ ಬಂದಿದ್ದು  ಆಕಸ್ಮಿಕ. ನಟಿಯಾಗುವುದು ನನ್ನ ಕನಸಾಗಿರಲಿಲ್ಲ. ಆಕಸ್ಮಿಕವಾಗಿ ಸಿಕ್ಕ ಅವಕಾಶದಿಂದ  ನಟನೆಯೇ ವೃತ್ತಿಯಾಯಿತು.

ಕನ್ನಡದ ಪ್ರೇಕ್ಷಕರಿಗೆ ನಿಮ್ಮನ್ನು ಪರಿಚಯಿಸಿಕೊಳ್ಳುವುದಾದರೆ..?

ಒಬ್ಬ ನಟಿಯ ಐಡೆಂಟಿಟಿ ಹುಟ್ಟು ಮತ್ತು ಭಾಷೆಯಿಂದ ಆಗಬೇಕಿಲ್ಲ. ನಟನೆಯೇ ಕಲಾವಿದರ  ಐಡೆಂಟಿಟಿಯಾಗಬೇಕು. ಆ ಸಿದ್ಧಾಂತವನ್ನು ಪಾಲಿಸುತ್ತಾ ಬಂದವಳು ನಾನು. ಹಿಂದಿ, ತೆಲುಗು, ತಮಿಳು ಹಾಗೂ ಮಲಯಾಳಂಗೆ ನಾನು ಹೋಗಿದ್ದೇ ಹಾಗೆ. ಕನ್ನಡದಲ್ಲೂ ನನ್ನ  ಪರಿಚಯ ನಟನೆಯ ಮೂಲಕವೇ ಆಗಬೇಕೇ ಹೊರತು, ಗ್ಲಾಮರ್ ಕಾರಣಕ್ಕಾಗಿ ಅಲ್ಲ.

ಬೃಹಸ್ಪತಿ ಚಿತ್ರದ ಅವಕಾಶ ಬಂದಿದ್ದು ಹೇಗೆ?

 ಬಹುಶಃ ನಾನು ಅಭಿನಯಿಸಿದ ತೆಲುಗು, ತಮಿಳು ಸಿನಿಮಾಗಳು ಅದಕ್ಕೆ  ಕಾರಣವಿರಬಹುದು. ಒಮ್ಮೆ ನಿರ್ದೇಶಕರು ಫೋನ್ ಮಾಡಿ, ಚಿತ್ರದ ಆಫರ್ ಬಗ್ಗೆ  ಹೇಳಿದರು. ಆನಂತರ ಮುಖಾಮುಖಿ ಭೇಟಿ ಮಾಡಿ ಕತೆ ಕೇಳಿದೆ. ಕನ್ನಡಕ್ಕೆ ಬರಲು

ಸೂಕ್ತವಾದ ಚಿತ್ರ ಮತ್ತು ವೇದಿಕೆ ಇದೇ ಎನ್ನಿಸಿತು. ಹಾಗಾಗಿ ಚಿತ್ರಕ್ಕೆ ಒಪ್ಪಿದೆ.

ಸಿನಿಮಾದ ಆಫರ್ ಬರುವ ಮುನ್ನ ನಿಮ್ಗೆ ಬೆಂಗಳೂರು ಪರಿಚಯವಿತ್ತಾ?

ನಾನಿಲ್ಲಿಗೆ ಹೊಸಬಳು. ಬೆಂಗಳೂರು ಅದ್ಭುತವಾದ ನಗರ. ಇದು ಇಲ್ಲಿಗೆ ಬಂದ ನಂತರ  ಆದ ಅನುಭವ. ಇದಕ್ಕೂ ಮೊದಲು ಬೆಂಗಳೂರಿನ ಬಗ್ಗೆ ಸಾಕಷ್ಟು ಸಲ ಕೇಳಿದ್ದೆ. ಯಾಕಂದ್ರೆ  ಇಲ್ಲಿಗೆ ಸಾಕಷ್ಟು ಫ್ರೆಂಡ್ಸ್ ಸ್ಟಡೀಸ್‌'ಗೆ ಬಂದು ಇಲ್ಲಿಯೇ ಸೆಟ್ಲ್ ಆಗಿದ್ದಾರೆ. ಅವರು ಮುಂಬೈ  ಅಥವಾ ಕೋಲ್ಕತ್ತಾದಲ್ಲಿ ಸಿಕ್ಕಾಗ ಬೆಂಗಳೂರು ಬಗ್ಗೆ ಗಂಟೆಗಟ್ಟಲೆ ಮಾತನಾಡುತ್ತಿದ್ದರು.

ಚಿತ್ರದಲ್ಲಿನ ನಿಮ್ಮ ಪಾತ್ರ ಬಗ್ಗೆ ಹೇಳಿ..?

ಇದು ತಮಿಳಿನ ವಿಐಪಿ ಚಿತ್ರದ ರಿಮೇಕ್. ಅಲ್ಲಿ ಅಮಲಾ ಪೌಲ್ ನಾಯಕಿ. ಅದರೆ ಎಲ್ಲೂ  ಅದನ್ನು ಕಾಪಿ ಮಾಡಿಲ್ಲ. ವ್ಯವಸ್ಥೆ ಸರಿಪಡಿಸಬೇಕೆನ್ನುವ ನಾಯಕನ ಕನಸು, ಆಸೆ,  ಆಕಾಂಕ್ಷೆಗಳಿಗೆ ಒಬ್ಬ ಪ್ರೇಮಿಯಾಗಿ ಬೆಂಬಲಕ್ಕಿರುವ ಹುಡುಗಿ ಆಕೆ.

ಮನೋರಂಜನ್ ಮತ್ತು ನಿಮ್ಮ ಕಾಂಬಿನೇಷನ್ ಬಗ್ಗೆ ಹೇಳಿ..?

ಮನೋರಂಜನ್ ಅದ್ಭುತವಾದ ನಟ. ಒಬ್ಬ  ಸ್ಟಾರ್ ನಟನ ಮಗ ಎನ್ನುವ ಅಹಂಕಾರ, ನಾನಿಲ್ಲಿಗೆ ಹೊಸಬಳು ಎನ್ನುವ ತಾತ್ಸಾರ ಯಾವುದೂ ಅವರಲ್ಲಿ ಕಾಣಲಿಲ್ಲ. ಆರಂಭದಲ್ಲಿಯೇ ನನಗೆ ಇಂಥದ್ದೊಂದು ಜೋಡಿ ಸಿಕ್ಕಿದ್ದು ಖುಷಿ ನೀಡಿತು.

ಚಿತ್ರೀಕರಣದ ಅನುಭವ ಹೇಗಿತ್ತು?

ಮೊದಲ ಚಿತ್ರದಲ್ಲಿಯೇ ಒಬ್ಬ ಅನುಭವಿ ನಿರ್ದೇಶಕರು, ದೊಡ್ಡ ನಿರ್ಮಾಪಕರು ಹಾಗೂ ಒಬ್ಬ ಅದ್ಭುತವಾದ ಕೋ ಸ್ಟಾರ್ ಜತೆಗೆ ಸಿನಿಮಾ ಮಾಡುವ ಅವಕಾಶ ಸಿಕ್ಕಿದ್ದು ಪುಣ್ಯ. ಚಿತ್ರರಂಗಕ್ಕೆ ಬಂದ  ಆರಂಭಿಕ ದಿನಗಳಲ್ಲಿ ಸಾಕಷ್ಟು ಕಿರಿಕಿರಿ ಅನುಭವಿಸಿದ್ದೇ ಸೆಟ್‌'ನ ಅನಾನುಕೂಲಗಳ ಕಾರಣಕ್ಕೆ. ಆದರೆ ಇಲ್ಲಿ ನನಗೆ ಒಂದು ದಿನವೂ ಕಹಿ ಅನುಭವ ಆಗಲಿಲ್ಲ.

ಬಾಲಿವುಡ್, ಟಾಲಿವುಡ್  ಚಿತ್ರೋದ್ಯಮಕ್ಕೆ ಹೋಲಿಸಿದರೆ  ಕನ್ನಡದಲ್ಲಿ ನಿಮಗಾದ ಅನುಭವ  ಹೇಗಿತ್ತು?

ಪ್ರತಿ ಭಾಷೆಯ ಉದ್ಯಮಕ್ಕೂ  ಅದರದ್ದೇ ಆದ ವ್ಯಾಪ್ತಿ, ಭಿನ್ನತೆ,  ಘನತೆಗಳಿವೆ. ಬಾಲಿವುಡ್  ಸಮುದ್ರದಂತೆ. ನಾವು ಎಲ್ಲಿಗೆ ಹೋದರೂ ನಟನೆಗೆ ಪ್ರಾಮುಖ್ಯತೆ  ನೀಡಬೇಕು. ಬೇರೆಲ್ಲಕ್ಕಿಂತ ಕನ್ನಡ ಇಷ್ಟವಾಗುವುದು ಇಲ್ಲಿನ ಆತಿಥ್ಯದ ಕಾರಣಕ್ಕೆ. ನಾಯಕಿಯರಿಗೆ ಇಲ್ಲಿ ಸಾಕಷ್ಟು ಗೌರವವಿದೆ.

ಒಳ್ಳೆಯ ಅವಕಾಶ ಸಿಕ್ಕರೆ  ಕನ್ನಡದಲ್ಲಿಯೇ ಸೆಟ್ಲ್  ಆಗ್ತೀರಾ?

ಸದ್ಯಕ್ಕೆ ನನಗೆ ಅಂತಹ ಆಲೋಚನೆ ಇಲ್ಲ. ಒಳ್ಳೆಯ ಅವಕಾಶ ಸಿಕ್ಕರೆ ಕನ್ನಡದಲ್ಲೂ ಅಭಿನಯಿಸುತ್ತಲೇ ಇರುತ್ತೇನೆ. ಆದರೆ ಸದ್ಯಕ್ಕೆ ನನ್ನ ವಾಸ ಮುಂಬೈನಲ್ಲಿ  ಮಾತ್ರ.

ಸಂದರ್ಶನ: ದೇಶಾದ್ರಿ ಹೊಸ್ಮನೆ

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

BBK 12: ಈ ವಾರ ಮಾತ್ರ ಕಿಚ್ಚ ಸುದೀಪ್‌ ಈ ವಿಷ್ಯ ಮಾತಾಡ್ಬೇಕು; ಇಲ್ಲ ಅಂದ್ರೆ ಸಮಸ್ಯೆ ತಪ್ಪಿದ್ದಲ್ಲ!
ಡಾ ರಾಜ್‌ಕುಮಾರ್‌, ಸರಿತಾ ಯುಗವನ್ನು ನೆನಪಿಸಿದ ಶಿವರಾಜ್‌ಕುಮಾರ್‌, ಸರಿತಾ! ವೀಕ್ಷಕರಿಂದ ಮೆಚ್ಚುಗೆ