ವಿದೇಶದಲ್ಲಿ ಮೋಹಕತಾರೆ ರೌಂಡಿಂಗ್; ರಮ್ಯಾಗೆ ವಿನಯ್‌ ರಾಜ್‌ಕುಮಾರ್ ಸಾತ್‌!

Published : Sep 10, 2025, 07:54 PM IST
Ramya Vinay Rajkumar

ಸಾರಾಂಶ

ಸದ್ಯ ನಟಿ ರಮ್ಯಾ ಅವರು ಅದ್ಯಾವುದೋ ಫಾರಿನ್ ಲೊಕೇಶನ್‌ನಲ್ಲಿ ಓಡಾಡುತ್ತಿರುವ ಫೋಟೋ ಅವರ ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ. ಅದನ್ನವರು ವಿನಯ್ ರಾಜ್‌ಕುಮಾರ್ ಹಾಗೂ ವಂದಿತಾ ರಾಜ್‌ಕುಮಾರ್ ಅವರಿಗೂ ಟ್ಯಾಗ್ ಮಾಡಿದ್ದಾರೆ.

ಸ್ಯಾಂಡಲ್‌ವುಡ್ ನಟಿ ರಮ್ಯಾ (Ramya) ಅಲಿಯಾಸ್ ದಿವ್ಯ ಸ್ಪಂದನಾ ಅವರು ಫಾರಿನ್ ಲೊಕೇಶನ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಅವರ ಜೊತೆಯಲ್ಲಿ ಬೇರೆ ಯಾರೆಲ್ಲಾ ಇದ್ದಾರೆ ಎಂಬ ಮಾಹಿತಿ ಇಲ್ಲ. ಆದರೆ, ನಟಿ ರಮ್ಯಾ ಅವರು ವಿದೇಶಿ ವ್ಯಕ್ತಿಯೊಬ್ಬರಿಂದ ಮೇಕಪ್ ಮಾಡಿಸಿಕೊಳ್ಳುತ್ತಿದ್ದಾರಾ? ತಾವು ಹಾಗೂ ವಿನಯ್ ರಾಜ್‌ಕುಮಾರ್ (Vinay Rajkumar) ಜೊತೆಯಾಗಿ ಓಡಾಡುತ್ತಿರುವ ಫೋಟೋ ಹಾಗೂ ವಿಡಿಯೋವನ್ನು ನಟಿ ರಮ್ಯಾ ತಮ್ಮ ಅಧಿಕೃತ ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿಕೊಂಡಿದ್ದಾರೆ. ಫೊಟೋ ಹಾಗೂ ವಿಡಿಯೋ ನೋಡಿ ನಿಮಗೆ ಏನೆನ್ನಿಸುತ್ತಿದೆ ಎಂದು ಕಾಮೆಂಟ್ ಮಾಡಿ..

ನಟಿ ರಮ್ಯಾ ಅವರು ದೇಶ-ವಿದೇಶಗಳಿಗೆ ಹೋಗಿ-ಬರೋದು ಹೊಸ ಸಂಗತಿಯೇನಲ್ಲ. ಅವರೇನೂ ಸೀಕ್ರೆಟ್ ಆಗಿ ಹೋಗಿ ಬರೋದಿಲ್ಲ. ಅವರು ಎಲ್ಲಿಗೇ ಹೋದರೂ ಕೂಡ ಅಲ್ಲಿನ ಪ್ರಕೃತಿ ಸೌಂದರ್ಯ ಹಾಗೂ ಅವರು ನೋಡಿರುವ ಜಾಗಗಳ ಫೋಟೋ ಹಾಗೂ ವಿಡಿಯೋಗಳನ್ನು ತಮ್ಮ ಸೋಷಿಯಲ್ ಮೀಡಿಯಾಗಳಲ್ಲಿ ಪೋಸ್ಟ್ ಮಾಡುತ್ತಾರೆ. ಅದನ್ನು ನೋಡಿ ಅವರ ಫ್ಯಾನ್ಸ್‌ಗಳು ಸಿಕ್ಕಾಪಟ್ಟೆ ಕಾಮೆಂಟ್ ಹಾಕುತ್ತಾರೆ. ಇದು ಆಗಾಗ ನಡೆಯುತ್ತಲೇ ಇರುತ್ತದೆ.

ಸದ್ಯ ನಟಿ ರಮ್ಯಾ ಅವರು ಅದ್ಯಾವುದೋ ಫಾರಿನ್ ಲೊಕೇಶನ್‌ನಲ್ಲಿ ಓಡಾಡುತ್ತಿರುವ ಫೋಟೋ ಅವರ ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ. ಅದನ್ನವರು ವಿನಯ್ ರಾಜ್‌ಕುಮಾರ್ ಹಾಗೂ ವಂದಿತಾ ರಾಜ್‌ಕುಮಾರ್ ಅವರಿಗೂ ಟ್ಯಾಗ್ ಮಾಡಿದ್ದಾರೆ. ಈ ಪೋಸ್ಟ್ ಸಾಕಷ್ಟು ಶೇರ್ ಹಾಗು ಕಾಮೆಂಟ್ ಪಡೆದಿದೆ.

ಅಂದಹಾಗೆ, ನಟಿ ರಮ್ಯಾ ಅವರು ಇತ್ತೀಚೆಗೆ ಬಹಳಷ್ಟು ಸುದ್ದಿಯಾಗಿದ್ದರು. ದರ್ಶನ್ ಕೇಸ್‌ನಲ್ಲಿ ಸುಪ್ರೀಂ ಕೋರ್ಟ್‌ ನೀಡಿದ ತೀರ್ಪಿನ ಪರವಾಗಿ ಪೋಸ್ಟ್ ಮಾಡಿದ್ದರು. ಅದಕ್ಕೆ ಕೆರಳಿದ ನಟ ದರ್ಶನ್ ಅಭಿಮಾನಿಗಳು ರಮ್ಯಾ ವಿರುದ್ಧ ಅಶ್ಲೀಲ ಕಾಮೆಂಟ್ ಹಾಕಿದ್ದರು. ಆ ಬಳಿಕ ರಮ್ಯಾ ಕೇಸ್ ದಾಖಲಿಸಿ ಅವರಲ್ಲಿ ಸಾಕಷ್ಟು ಜನರು ಅರೆಸ್ಟ್ ಅಗಿ ಜೈಲು ಸೇರುವಂತೆ ಮಾಡಿದ್ದರು. ಇದೀಗ ರಮ್ಯಾ ವಿದೇಶ ಪ್ರವಾಸದಲ್ಲಿದ್ದು, ಅಲ್ಲಿಂದಲೇ ಫೋಟೋಗಳ ಮೂಲಕ ತಮ್ಮ ಅಭಿಮಾನಿಗಳ ಜೊತೆ ಸಂವಹನ ನಡೆಸಿದ್ದಾರೆ.

 

ರಮ್ಯಾ ಹಾಗೂ ವಿನಯ್ ರಾಜ್‌ಕುಮಾರ್ ಅವರಬ್ಬರೂ ಜೊತೆಯಾಗಿ ಓಡಾಡುತ್ತಿರುವ ಫೋಟೋ ಹಾಗೂ ವಿಡಿಯೋಗಳನ್ನು ನೋಡಿದ ಕೆಲವರು ‘ಡೇಟಿಂಗ್ ಮಾಡ್ತಿದ್ದೀರಾ?’ ಎಂದು ಪ್ರಶ್ನೆ ಮಾಡಿದ್ದರು. ಅದಕ್ಕೆ ಉತ್ತರಿಸಿ ನಟಿ ರಮ್ಯಾ 'ಏನೇನೋ ಕಲ್ಪನೆ ಮಾಡಿಕೊಳ್ಳುವ ಅಗತ್ಯವಿಲ್ಲ. ವಿನಯ್ ನನ್ನ ಸಹೋದರ ಇದ್ದಂತೆ' ಎಂದು ಸ್ವತಃ ರಮ್ಯಾ ಪೋಸ್ಟ್‌ನಲ್ಲಿ ಬರೆದುಕೊಂಡಿದ್ದಾರೆ. 

 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಫಸ್ಟ್‌ ಮದುವೆ ಯಾಕೆ ಮುರಿದು ಬಿತ್ತು? ಸತ್ಯ ಹೇಳಿದ Lakshmi Nivasa Serial ನಟಿ ಮಾನಸಾ ಮನೋಹರ್
ಸೀರಿಯಲ್ ನಟಿಯರು ಆ.., ವಯಸ್ಸಿಗೆ ಮದುವೆಯಾಗಬೇಡಿ; ಮೊದಲ ಮದುವೆ ಅನುಭವ ಬಿಚ್ಚಿಟ್ಟ ನಟಿ ಅಪ್ಸರಾ!