ಹೇಗಿದೆ ಕೆಜಿಎಫ್ ? ಇಲ್ಲಿದೆ ಚಿತ್ರ ವಿಮರ್ಶೆ

By Web DeskFirst Published Dec 21, 2018, 12:11 PM IST
Highlights

ರಾಕಿಂಗ್ ಸ್ಟಾರ್ ಯಶ್ ಬಹು ನಿರೀಕ್ಷಿತ ಚಿತ್ರ ಕೆಜಿಎಫ್ ರಿಲೀಸಾಗಿದೆ. 2 ವರ್ಷದ ಯಶ್ ಕನಸು ನನಸಾಗಿದೆ. ತೆರೆಮೇಲೆ ಯಶ್ ನೋಡಿ ಅಭಿಮಾನಿಗಳು ಹುಚ್ಚೆದ್ದು ಕುಣಿದಿದ್ದಾರೆ. ಹೇಗಿದೆ ಚಿತ್ರ? ಇಲ್ಲಿದೆ ಚಿತ್ರ ವಿಮರ್ಶೆ.  

ಬೆಂಗಳೂರು (ಡಿ.21): ರಾಕಿಂಗ್ ಸ್ಟಾರ್ ಯಶ್ ಬಹು ನಿರೀಕ್ಷಿತ ಚಿತ್ರ ಕೆಜಿಎಫ್ ರಿಲೀಸಾಗಿದೆ. 4 ವರ್ಷದ ಯಶ್ ಕನಸು ನನಸಾಗಿದೆ. ತೆರೆಮೇಲೆ ಯಶ್ ನೋಡಿ ಅಭಿಮಾನಿಗಳು ಹುಚ್ಚೆದ್ದು ಕುಣಿದಿದ್ದಾರೆ. ಚಿತ್ರ ನೋಡಿದವರೆಲ್ಲಾ ಯಶ್ ಅಭಿನಯಕ್ಕೆ ಮನ ಸೋತಿದ್ದಾರೆ. ಥಿಯೇಟರ್ನಿಂದ ಹೊರ ಬಂದಾಗ ಸಂತೃಪ್ತಿಯ ನಗೆ. ಅಲ್ಲಿಗೆ ಚಿತ್ರ ಅರ್ಧ ಗೆದ್ದಂತೆ. 

ಥಿಯೇಟರ್‌ನಿಂದಲೇ ಅಭಿಮಾನಿಯಿಂದ ಕೆಜಿಎಫ್ ಲೈವ್ !

 

ಎರಡೂವರೆ ಗಂಟೆ ಚಿತ್ರಿದಾಗಿದ್ದು ಎಲ್ಲಿಯೂ ಬೋರ್ ಹೊಡೆಸಲ್ಲ. ಕೆಜಿಎಫ್ ಸಿನಿಮಾದುದ್ದಕ್ಕೂ ಡೈನಾಮಿಕ್ ಡೈಲಾಗ್ ಗಳದ್ದೇ ಅಬ್ಬರ ಹೆಚ್ಚಾಗಿದೆ. ಸಿನಿಮಾ ಶುರುವಾಗೋದು ಅನಂತ್ನಾಗ್  ಅವರಿಂದ. ಟಿವಿ ಆ್ಯಂಕರ್ ಮಾಳವಿಕಾ ಕೆಜಿಎಫ್ ಕಥೆ ಕೇಳ್ತಾರೆ. ಆಗ ಅನಂತ್ ನಾಗ್ ಹೇಳುತ್ತಾ ಹೋಗುತ್ತಾರೆ. ಅಲ್ಲಿಂದ ಕಥೆ ಬಿಚ್ಚಿಕೊಳ್ಳುತ್ತಾ ಹೋಗುತ್ತದೆ. 

ಕೆಜಿಎಫ್ ಮುಟ್ಟಿದ ಹೊಸ ಎತ್ತರ: ಕನ್ನಡ ಗೋಲ್ಡ್ ಫೀಲ್ಡ್!

 

ಕೆಜಿಎಫ್ ನಲ್ಲಿ ಹುಟ್ಟೋ ಯಶ್ ಮುಂಬೈ ಸೇರಿಕೊಂಡು ಡಾನ್ ಆಗಿ ಬೆಳೆಯುತ್ತಾರೆ. ಹನ್ನೆರಡನೇ ವಯಸ್ಸಿಗೆ ತಾಯಿಯನ್ನು ಕಳೆದುಕೊಳ್ಳುತ್ತಾರೆ. ತಾಯಿ ಸಾಯುವಾಗ ‘ಹೇಗಾದ್ರೂ ಬದುಕು ಆದ್ರೆ ಸಾಯುವಾಗ ಶ್ರೀಮಂತನಾಗಿ ಸಾಯಿ’ ಅಂತಾರೆ. ಅಲ್ಲಿಂದ ಮುಂಬೈ ಕಡೆ ಬದುಕು ಹೊರಳುತ್ತದೆ. ಅಲ್ಲಿಂದ ಅನೇಕ ತಿರುವು ಪಡೆಯುತ್ತದೆ. 

ಫಸ್ಟ್ ಡೇ ಫಸ್ಟ್ ಶೋ ಫಸ್ಟ್ ರಿವ್ಯೂ

 

1981 ರಲ್ಲಿ ಮುಂಬೈಯಿಂದ ಬೆಂಗಳೂರಿಗೆ ಶಿಫ್ಟ್ ಆಗುತ್ತಾನೆ ಯಶ್. ಅಲ್ಲಿನ ಪಬ್ ಒಂದರಲ್ಲಿ ಹಿರೋಯಿನ್ ಎಂಟ್ರಿ ಆಗುತ್ತಾಳೆ. ಆಕೆಯ ಜೊತೆ ಲವ್ವಲ್ಲಿ ಬೀಳ್ತಾರೆ ರಾಕಿ ಭಾಯ್..! 

ಚಿತ್ರದ ಸೆಕೆಂಡ್ ಹಾಫಲ್ಲಿ ಟ್ವಿಸ್ಟ್ ಇಟ್ಟಿದ್ದಾರೆ ಪ್ರಶಾಂತ್ ನೀಲ್. ಕೆಜಿಎಫ್ ಗಣಿ ಧಣಿ ಮಗನನ್ನು ಎತ್ತಲು ಬಂದ ಯಶ್ ತಮ್ಮ ಕೆಲಸ ಮಾಡಿ ಮುಗಿಸ್ತಾರಾ? ಜನರನ್ನು ರಕ್ಷಿಸ್ತಾರಾ? ತಿಳಿದುಕೊಳ್ಳಲು ಒಮ್ಮೆ ಹೋಗಿ ಕೆಜಿಎಫ್ ನೋಡಿಕೊಂಡು ಬನ್ನಿ..! 

click me!