
ಸ್ಯಾಂಡಲ್‌ವುಡ್ ದಿನದಿನಕ್ಕೂ ಬೆಳೆಯುತ್ತಿದೆ. ಕನ್ನಡ ಸಿನಿಮಾ ರಂಗಕ್ಕೆ ಅನೇಕರು ಬೇರೆ ಬೇರೆ ಕ್ಷೇತ್ರದಿಂದ ಕನಸು ಹೊತ್ತು ಬಂದು ತಮ್ಮದೆ ಆದ ಕೊಡುಗೆಯನ್ನ ನೀಡುತ್ತಾ ಬಂದಿದ್ದಾರೆ. ಅದ್ರಲ್ಲೂ ಐಟಿ ಜಗತ್ತಿನಿಂದ ವಿವಿಧ ಪ್ರತಿಭವಂತ ಕಲಾವಿದರು ತಂತ್ರಜ್ಞರು ಬಂದು ಛಾಪನ್ನ ಕಲೆಯ ಹೊನಪನ್ನ ನೀಡಿದ್ದಾರೆ. ಈಗ ಅದೇ ಸಾಲಿಗೆ ಸೇರೋ ಸಿನಿಮಾ ತಂಡವಾಗಲಿದೆ ‘ಕರಿಕಾಡ’. ಈ ಹೊಸ ಸಿನಿಮಾ ಬಗ್ಗೆ ಅಪ್‌ಡೇಟ್ ಇಲ್ಲಿದೆ ನೋಡಿ..
‘ಕರಿಕಾಡ’ ಇದೊಂದು ಮ್ಯೂಸಿಕಲ್ ಜರ್ನಿ & ಅಡ್ವೆಂಚರಸ್ ಎಲಿಮೆಂಟ್ಸ್ ಹೊಂದಿರುವ ಸಿನಿಮಾ. ಬಣ್ಣದ ಲೋಕದ ಕನಸು ಹೊತ್ತು ಕಾಡ ನಟರಾಜ್ ‘ಕರಿಕಾಡ’ ಚಿತ್ರ ಮೂಲಕ ಪ್ರೇಕ್ಷಕರ ಆಶೀರ್ವಾದ ಗಿಟ್ಟಿಸಿಕೊಳ್ಳಲು ಬರುತ್ತಿದ್ದಾರೆ. ಕಾಡ ನಟರಾಜ್. ಅವರೇ ಈ ಸಿನಿಮಾದ ನಾಯಕ ಕೂಡ ಹೌದು. ಸದಾ ಚಿತ್ರಜಗತ್ತಿನ ಕನಸು ಕಾಣುತ್ತಾ ಐಟಿ ವಲಯದಲ್ಲಿ ಮಾರ್ಕೆಟಿಂಗ್ ಮತ್ತು ಬ್ರ್ಯಾಂಡಿಂಗ್ ಕೆಲಸ ಮಾಡ್ತಿರೋ ಕಲಾವಿದ. ಐಟಿ ಜಗತ್ತಿನಲ್ಲಿ ವಾರದ ಐದು ದಿನ ಕೆಲಸ ಮಾಡಿ ಇನ್ನೆರಡು ದಿನ ಸಿನಿಮಾ ಶೂಟಿಂಗ್‌ನಲ್ಲಿ ಕನಸಿನ ಗುರಿಯ ಕಡೆ ಧ್ಯಾನ ಮಾಡಿದ್ದಾರೆ ಕಾಡ ನಟರಾಜ್.
2024 ಆಗಸ್ಟ್ 15ರಂದು ಸಖಲ ತಯಾರಿಗಳೊಂದಿಗೆ ‘ಕರಿಕಾಡ’ ಚಿತ್ರೀಕರಣದಲ್ಲಿ ಪಾಲಗೊಳ್ಳೂತ್ತಾ ಕೆಲಸಕ್ಕೆ ರಜೆ ಸಿಕ್ಕಾಗೆಲ್ಲ ಅಭಿನಯ ಮಾಡಿ ನವೆಂಬರ್ 2024ರ ಒಳಗೆ ಸಿನಿಮಾದ ಮಾತಿನ ಭಾಗ ಕಂಪ್ಲೀಟ್ ಮಾಡಿಕೊಟ್ಟಿದ್ದಾರೆ ಕಾಡ ನಟರಾಜ್. ತಾವೇ ಈ ಸಿನಿಮಾದ ಕಥೆ ಬರೆದಿರೋದು ವಿಶೇಷ.
ರಿದ್ಧಿ ಎಂಟರ್ಟೈನ್ಮೆಂಟ್ಸ್ ಬ್ಯಾನರ್ ಅಡಿಯಲ್ಲಿ ಕಾಡ ನಟರಾಜ್ ಅವರ ಧರ್ಮಪತ್ನಿ ದೀಪ್ತಿ ದಾಮೋದರ್ ತನ್ನ ಗಂಡನ ಕನಸಿನ ಗುರಿಗೆ ದಾರಿ ತೋರಿಸಿದ್ದಾರೆ. ಈ ದಾರಿಗೆ ಸ್ನೇಹಿತರಾದ ರವಿಕುಮಾರ್ ಎಸ್.ಆರ್ ಸಹ ನಿರ್ಮಾಣದ ಸಾಥ್ ನೀಡಿದ್ದಾರೆ.
ಇನ್ನು, ಈ ಸಿನಿಮಾದ ನಿರ್ದೇಶಕರು ಗಿಲ್ಲಿ ವೆಂಕಟೇಶ್ ಕಿರುತೆರೆಯ ಅನೇಕ ರಿಯಾಲಿಟಿ ಶೋಗಳಲ್ಲಿ ಕೆಲಸ ಮಾಡಿದ ಅನುಭವ ಮತ್ತು ಹುಲಿಬೇಟೆ ಅನ್ನೋ ಸಿನಿಮಾದಲ್ಲಿ ಸಹ ನಿರ್ದೇಶನದ ಜೊತೆಗೆ ನೆಗೆಟಿವ್ ರೋಲ್ ಕೂಡ ಮಾಡಿದ್ದಾರೆ. ‘ತಾಳಟ್ಟಿ’ ಅನ್ನೋ ಸಿನಿಮಾವನ್ನ ನಿರ್ದೇಶನ ಮಾಡಿರುವ ಗಿಲ್ಲಿ ವೆಂಕಟೇಶ್ ಅವರ ಮಹತ್ವಕಾಂಕ್ಷೆಯ ಸಿನಿಮಾ ಕರಿಕಾಡ. ಚಿತ್ರಕತೆ , ಸಂಭಾಷಣೆ ಮತ್ತು ನಿರ್ದೇಶನದ ಜವಾಬ್ದಾರಿಯನ್ನ ಹೊತ್ತಿದ್ದಾರೆ.
‘ಕರಿಕಾಡ’ ಚಿತ್ರಕ್ಕೆ ಅತೀಶಯ್ ಜೈನ್ ಹಾಗೂ ಶಶಾಂಕ್ ಶೇಷಾಗಿರಿ ಅವರುಗಳ ರಾಗ ಸಂಯೋಜನೆ ಇದೆ. ಶಶಾಂಕ್ ಶೇಷಾಗರಿ ಅವರು ರಾಗ ಸಂಯೋಜನೆ ಜೊತೆಗೆ ಜಬರ್ದಸ್ತ್ ಹಿನ್ನಲೆ ಸಂಗೀತವನ್ನ ನೀಡಿದ್ದಾರೆ. ಕ್ಯಾಮರಾ ಸಾರಥಿಯಾಗಿ ಜೀವನ್ ಗೌಡ ಕೆಲಸ ಮಾಡಿದ್ದಾರೆ. ದೀಪಕ್ ಸಿ.ಎಸ್ ಸಂಕಲನವಿದೆ.
ಇನ್ನು, ಈ ಕರಿಕಾಡ ಸಿನಿಮಾದ ಚಿತ್ರೀಕರಣವನ್ನು ಚಿಕ್ಕಮಗಳೂರು , ಕಳಸ , ಕುದುರೆ ಮುಖ , ಮಂಡ್ಯ , ಚೆನ್ನರಾಯ ಪಟ್ನ ಸೇರಿದಂತೆ ರಾಜ್ಯದ ಅನೇಕ ರಮಣಿ ಸ್ಥಳಗಳಲ್ಲಿ ‘ಕರಿಕಾಡ’ ಚಿತ್ರೀಕರಣವಾಗಿದೆ. ಸದ್ಯದಲ್ಲೇ 'ಟೈಟಲ್ ಟೀಸರ್' ಬಿಡುಗಡೆ ಮಾಡುವ ಮೂಲಕ ಪ್ರೇಕ್ಷಕರ ಗಮನ ಸೇಳೆಯುವ ಪ್ರಯತ್ನದಲ್ಲಿ ಚಿತ್ರ ತಂಡವಿದೆ.
ಕರಿಕಾಡ ಚಿತ್ರದ ಟೈಟಲ್ ಟೀಸರ್ ಬಿಡುಗಡೆ ಕಾರ್ಯಕ್ರಮದ ಮುಖ್ಯಾಂಶಗಳು:
• ಖ್ಯಾತ ನಿರ್ದೇಶಕ ಸಂತೋಷ್ ಅನಂದ್ ರಾಮ್ ರಿಂದ ಕರಿಕಾಡ ಚಿತ್ರದ ಟೈಟಲ್ ಟೀಸರ್ ಬಿಡುಗಡೆ
• ಹೊಸ ತಂಡದ ಹೊಸ ಬಗೆಯ ಸಾಹಸಮಯ ದೃಶ್ಯಕಾವ್ಯಕ್ಕೆ ಸಂತೋಷ್ ಶುಭಹಾರೈಕೆ
• ಕರಿಕಾಡ ಚಿತ್ರದಲ್ಲಿ ಅಭಿನಯಿಸಿರೋ ದಿ.ರಾಕೇಶ್ ಪೂಜಾರಿ ಹಾಗೂ ಆರ್ .ಸಿ.ಬಿ ಸಂಭ್ರಮದ ದುರಂತದಲ್ಲಿ ಜೀವತೆತ್ತವರಿಗೆ ಭಾವಪೂರ್ಣ ಶ್ರದ್ಧಾಂಜಲಿ ಅರ್ಪಿಸಿ ಕಾರ್ಯಕ್ರಮ ಆರಂಭ
• ಕನ್ನಡ ಹಾಗೂ ತಮಿಳು ಎರಡೂ ಭಾಷೆಯಲ್ಲಿ ಬಿಡುಗಡೆಯಾಗಲಿರುವ ಕರಿಕಾಡ
• ಕರಿಕಾಡ ಚಿತ್ರದ ಸಂಗೀತವನ್ನ ಮೆಚ್ಚಿ ಆಡಿಯೋ ಹಕ್ಕ ಅತ್ಯುತ್ತಮ ಮೊತ್ತ ಕೊಟ್ಟು ಖರೀದಿಸಿದ ಲಹರಿ ವೇಲು
• ಅತ್ಯುತ್ತುಮ ತಂತ್ರಜ್ಞರ ಕೈಚಳಕವಿರೋ ಸಿನಿಮಾ ಕರಿಕಾಡ
• ಈ ಚಿತ್ರದ ಮೂಲಕ ಕಾಡನಟರಾಜ್ ಅನ್ನೋ ಪ್ರತಿಭಾವಂತ ನಾಯಕ ನಟ ಚಿತ್ರರಂಗಕ್ಕೆ ಪಾದಾರ್ಪಣೆ
• ಗಲ್ಲಿ ವೆಂಕಟೇಶ್ ನಿರ್ದೇಶನದ ಚೊಚ್ಚಲ ಚಿತ್ರ
• ರಿದ್ಧಿ ಎಂಟ್ರಟೈನ್ಮೆಂಟ್ಸ್ ಬ್ಯಾನರ್ ನಡಿ ದೀಪ್ತಿ ದಾಮೋದರ್ ನಿರ್ಮಾಣ
• ಅತಿಶಯ್ ಜೈನ್ ಹಾಗೂ ಶಶಾಂಕ್ ಶೇಷಗಿರಿ ಸಂಗೀತ ಸಂಯೋಜನೆ
------------------------------
ಕರಿಕಾಡ ಚಿತ್ರದ ಸಂಪೂರ್ಣ ಮಾಹಿತಿ
ಸಿನಿಮಾದ ಹೆಸರು: ಕರಿಕಾಡ
ನಿರ್ದೇಶಕರು: ಗಿಲ್ಲಿ ವೆಂಕಟೇಶ್
ತಾರಾಗಣ :
ನಾಯಕ :- ಕಾಡ ನಟರಾಜ್
ನಾಯಕಿ :- ನಿರೀಕ್ಷಾ ಶೆಟ್ಟಿ
ಬಾಲ ನಟಿ :- ರಿದ್ಧಿ
ಪೋಷಕ ಹಾಗೂ ಹಾಸ್ಯಕಲಾವಿದರು :- ಮಂಜು ಸ್ವಾಮಿ , ಯಶ್ ಶೆಟ್ಟಿ , ಗೋವಿಂದ ಗೌಡ , ದೀವಾಕರ್ , ಕಾಮಿಡಿ ಕಿಲಾಡಿ ಸೂರ್ಯ , ದಿ.ರಾಕೇಶ್ ಪೂಜಾರಿ , ವಿಜಯ್ ಚಂಡೂರು , ಚಂದ್ರಪ್ರಭ , ಕರಿಸುಬ್ಬು , ಗಿರಿ , ಬಾಲರಾಜವಾಡಿ , ಮಾಸ್ಟರ್ ಆರ್ಯನ್ ಹಾಗೂ ಮುಂತಾದವರು.
ಸಂಭಾಷಣೆ, ಚಿತ್ರಕತೆ, ನಿರ್ದೇಶನ :- ಗಿಲ್ಲಿ ವೆಂಕಟೇಶ್
ಸಂಗೀತ :- ಅತೀಶಯ್ ಜೈನ್ ಹಾಗೂ ಶಶಾಂಕ್ ಶೇಷಾಗಿರಿ
ಛಾಯಾಗ್ರಹಣ :- ಜೀವನ್ ಗೌಡ
ಸಂಕಲನ :- ದೀಪಕ್ ಸಿ.ಎಸ್
ನಿರ್ಮಾಣ ಸಂಸ್ಥೆ :- ರಿದ್ಧಿ ಎಂಟರ್ಟೈನ್ಮೆಂಟ್ಸ್
ನಿರ್ಮಾಪಕಿ :- ದೀಪ್ತಿ ದಾಮೋದರ್
ಸಹ ನಿರ್ಮಾಣ :- ರವಿಕುಮಾರ್ ಎಸ್.ಆರ್
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.